ಎಮ್ಮೆಯೊಂದು ಎಂಟು ದಿನಗಳ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಅರ್ ಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಳಿಯೂರಿನ ಸುಧಾಕರ ಗೌಡ ಎಂಬವರು ಸಾಕಿದ್ದ ಎಮ್ಮೆ ಕಳೆದ ವಾರ ಕರುವೊಂದಕ್ಕೆ ಜನ್ಮ ನೀಡಿತ್ತು. ಕಳೆದ ಮಂಗಳವಾರ ಮತ್ತೊಂದು ಕರುವಿಗೆ ಜನ್ಮ ನೀಡಿದೆ.
ಎಮ್ಮೆ ವಾರದ ಅಂತರದಲ್ಲಿ ಎರಡು ಕರುಗಳಿವೆ ಜನ್ಮ ನೀಡಿರುವುದು ಗ್ರಾಮದ ಜನರಲ್ಲಿ ಅಚ್ಚರಿಯುಂಟು ಮಾಡಿದೆ.
“ನಾವು ಹಲವಾರು ವರ್ಷಗಳಿಂದ ಹಸು-ಎಮ್ಮೆಗಳನ್ನು ಸಾಕುತ್ತಿದ್ದೇವೆ. ಅವುಗಳು ಎರಡು ಕರುವಿಗೆ ಜನ್ಮ ನೀಡಿದರೂ, ಒಂದೇ ದಿನ ಎರಡು ಕರುವನ್ನು ಹಾಕುತ್ತವೆ. ಆದರೆ, ಈ ಎಮ್ಮೆ ಎಂಟು ದಿನಗಳ ಅಂತರದಲ್ಲಿ ಎರಡು ಕರು ಹಾಕಿದೆ. ಈ ಬಗ್ಗೆ ಪಶು ಇಲಾಖೆಯ ಗಮನಕ್ಕೆ ತಂದಿದ್ದೇನೆ” ಎಂದು ಸುಧಾಕರ್ ಹೇಳಿದ್ದಾರೆ.