ಸ್ವಚ್ಛ ಸರ್ವೇಕ್ಷಣ್-2023 | ಬೆಂಗಳೂರಿಗೆ ರಾಷ್ಟ್ರಮಟ್ಟದಲ್ಲಿ 125ನೇ ಸ್ಥಾನ

Date:

ಸ್ವಚ್ಛ ಸರ್ವೇಕ್ಷಣ್ –2023 ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಭಾಗವಹಿಸಿದ 446 ನಗರಗಳ ಪೈಕಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರಮಟ್ಟದಲ್ಲಿ 125ನೇ ರ್‍ಯಾಂಕ್‌ ಪಡೆದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.25 ರಷ್ಟು ಹೆಚ್ಚು ಅಂಕ ಗಳಿಸಿದೆ.

- Advertisement -

‘ಸ್ವಚ್ಛ ಸರ್ವೇಕ್ಷಣ್ 2023’ ಪ್ರಶಸ್ತಿ ಪಟ್ಟಿಯನ್ನು ದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡಿದ್ದು, ವಿಜೇತ ನಗರ ಆಡಳಿತಗಳಿಗೆ ಪ್ರಶಸ್ತಿ ನೀಡಿದ್ದಾರೆ. 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 446 ನಗರಗಳ ಪೈಕಿ ಬೆಂಗಳೂರು 125ನೇ ಸ್ಥಾನ ಗಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳ ಮಾನದಂಡವನ್ನು 2017ನೇ ಸಾಲಿನಿಂದ 2020ನೇ ಸಾಲಿನ ವರೆಗೆ ಅನ್ವಯಿಸಲಾಗಿರುತ್ತದೆ. 2017ನೇ ಸಾಲಿನಲ್ಲಿ 210ನೇ ಸ್ಥಾನ, 2018ನೇ ಸಾಲಿನಲ್ಲಿ 216ನೇ ಸ್ಥಾನ, 2019ನೇ ಸಾಲಿನಲ್ಲಿ 194ನೇ ಸ್ಥಾನ ಮತ್ತು 2020ನೇ ಸಾಲಿನಲ್ಲಿ 214ನೇ ಸ್ಥಾನ ಪಡೆದಿದ್ದು, ಈ ಬಾರಿ ಬೆಂಗಳೂರು 125ನೇ ಸ್ಥಾನ ಗಳಿಸಿದೆ. ಮಧ್ಯಪ್ರದೇಶದ ಇಂದೋರ್ ಸತತ ಏಳನೇ ಬಾರಿಗೆ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್‌ನ ಸೂರತ್ ಕೂಡ ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನವಾಗಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುವ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ತ್ಯಾಜ್ಯ ಸಂಗ್ರಹ, ವಿಂಗಡಣೆ, ಸಂಸ್ಕರಣೆಯಲ್ಲಿ ಬಿಬಿಎಂಪಿ ಪ್ರಗತಿ ಸಾಧಿಸಿದ್ದರೂ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಮೊದಲನೆಯ ಸ್ಥಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಹೊಸದುರ್ಗ ಪುರಸಭೆಗಳಿವೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮತ್ತು ಬೈಲಹೊಂಗಲ ಪುರಸಭೆಯ ಎರಡನೇ ಸ್ಥಾನದಲ್ಲಿವೆ.

ಭಾರತದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿಲ್ಲ. 2022ರಲ್ಲಿ ಮೈಸೂರು ಎಂಟನೇ ಸ್ಥಾನ ಪಡೆದಿತ್ತು. 2020ರಲ್ಲಿ ಮೈಸೂರು 5ನೇ ಸ್ಥಾನದಲ್ಲಿ ಇದ್ದಿದ್ದು, ಈಗ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ.

2022ರಲ್ಲಿ 40 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಸ್ಥಳೀಯ ಸಂಸ್ಥೆಗಳ ವರ್ಗದಲ್ಲಿ 45 ನಗರಗಳ ಪೈಕಿ ಬಿಬಿಎಂಪಿ 43ನೇ ಸ್ಥಾನ ಗಳಿಸಿತ್ತು. 2021ರಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ವರ್ಗದಲ್ಲಿ 48 ನಗರಗಳಲ್ಲಿ 28ನೇ ಸ್ಥಾನ ಗಳಿಸಿತ್ತು. 2023ರಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ವರ್ಗದಲ್ಲಿ 446 ಸ್ಥಳೀಯ ಸಂಸ್ಥೆಗಳಲ್ಲಿ 125ನೇ ಸ್ಥಾನವನ್ನು ಬಿಬಿಎಂಪಿ ಗಳಿಸಿದೆ.

ಬಿಬಿಎಂಪಿ ಪ್ರಥಮ ಬಾರಿಗೆ 2023ರಲ್ಲಿ ನೈರ್ಮಲ್ಯ ವರ್ಗದ ಸಮೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದೆ. ‘ಒಡಿಎಫ್++’ನಿಂದ ‘ವಾಟರ್ +’ ನಗರವೆಂಬ ಶ್ರೇಯಾಂಕ ಪಡೆದಿದೆ. ಜನರು ಸ್ವಚ್ಛತೆಯಲ್ಲಿ ಭಾಗವಹಿಸುವ ‘ನಾಗರಿಕರ ಧ್ವನಿ’ ವರ್ಗದಲ್ಲಿ 2022ಕ್ಕಿಂತ ಶೇ 30ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದೆ.

ಈ ಸುದ್ದಿ ಓದಿದ್ದೀರಾ? ರ್‍ಯಾಂಕ್‌ವಿದ್ಯಾರ್ಥಿಗಳಿಗೆ ‘ಪೋಕ್ಸೋ ಕಾಯ್ದೆ’ ಕುರಿತು ಜಾಗೃತಿ ಮೂಡಿಸಲು ‘ತೆರೆದ ಮನೆ’ ಕಾರ್ಯಕ್ರಮ

2014ರಲ್ಲಿ ಸ್ವಚ್ಛ ಭಾರತ್ ಅಭಿಯಾನ ಪ್ರಾರಂಭವಾಯಿತು. ಅದರ ಒಂದು ಭಾಗವಾಗಿ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಯಿತು. ಈ ಸಮೀಕ್ಷೆ ನಾನಾ ಹಂತಗಳಲ್ಲಿ ನಡೆಯಲಿದೆ. 1 ಲಕ್ಷದಿಂದ 3 ಲಕ್ಷದವರೆಗಿನ ಜನಸಂಖ್ಯೆ ಇರುವ ನಗರಗಳು, 3 ಲಕ್ಷ ಮೇಲ್ಪಟ್ಟು, 10 ಲಕ್ಷದ ಕೆಳಗೆ ಜನಸಂಖ್ಯೆ ಇರುವ ನಗರಗಳು ಮತ್ತು 10 ಲಕ್ಷಕ್ಕೂ ಮೇಲ್ಪಟ್ಟು ಜನರು ಇರುವ ನಗರಗಳು ಎಂಬ ಮೂರು ವಿಭಾಗದಲ್ಲಿ ಸಮೀಕ್ಷೆ ನಡೆಯುತ್ತದೆ.

ದೇಶಾದ್ಯಂತ ಹಳ್ಳಿಗಳು, ನಗರಗಳು, ಪಟ್ಟಣಗಳು, ಪ್ರದೇಶಗಳ ಸ್ವಚ್ಛತೆಯನ್ನು ಸ್ಥಳೀಯ ಆಡಳಿತಗಳು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿವೆ ಎಂಬುದನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಜನರನ್ನು ಮತ್ತು ಆಡಳಿತಗಳನ್ನು ಸ್ವಚ್ಛತೆಯೆಡೆಗೆ ಪ್ರೇರೇಪಿಸುವ ಸಮೀಕ್ಷೆಯೂ ಆಗಿದೆ.

125ನೇ ರ್‍ಯಾಂಕ್‌ ಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯ

ಈ ಬಗ್ಗೆ ಟ್ವೀಟ್ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣಾ-2023 ರ ಹಲವು ಪ್ರಮುಖ ವಿಭಾಗಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 446 ನಗರಗಳಲ್ಲಿ 125 ನೇ ರ್‍ಯಾಂಕ್‌ ಗಳಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗಾಗಿ ನಮ್ಮ ಬೆಂಗಳೂರಿನ ನಾಗರಿಕರು ಮತ್ತು ಬಿಬಿಎಂಪಿಯ ಅಧಿಕಾರಿಗಳು ಮತ್ತು ಕಾರ್ಮಿಕರು ಎಲ್ಲರೂ ಪ್ರಶಂಸೆಗೆ ಅರ್ಹರು” ಎಂದಿದ್ದಾರೆ.

“ಬಿಬಿಎಂಪಿ ಕರ್ನಾಟಕದಲ್ಲಿ 3ನೇ ಸ್ವಚ್ಛ ನಗರವಾಗಿದೆ. ಮೊದಲ ಬಾರಿಗೆ, ವಾಟರ್ ಪ್ಲಸ್ ಪ್ರಮಾಣೀಕರಣವನ್ನು ಪಡೆಯುವುದರ ಜೊತೆಗೆ ನೈರ್ಮಲ್ಯ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ತನ್ನ ಅತ್ಯುತ್ತಮ ಕಾರ್ಯವನ್ನು ಮುಂದುವರೆಸುತ್ತಾ, ಬಿಬಿಎಂಪಿ ಸೇವಾ ಮಟ್ಟದ ಪ್ರಗತಿ ಮತ್ತು ನಾಗರಿಕರ ಧ್ವನಿ ವಿಭಾಗಗಳ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಆಡಳಿತಕ್ಕಾಗಿ ಹೊಸ ಮಾನದಂಡ ಸ್ಥಾಪಿಸಿದೆ. ಈ ಸುವರ್ಣ ಓಟ ಮುಂದುವರಿಯಲಿ ಮತ್ತು ಮುಂಬರುವ ವರ್ಷಗಳಲ್ಲಿ ಆಡಳಿತ ಮತ್ತು ಸಾರ್ವಜನಿಕ ಸೇವೆಗೆ ಹೊಸ ಮಾನದಂಡಗಳನ್ನು ಹೊಂದಿಸಲಿ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಂಗಭೂಮಿ ಅಭಿನಯ ಕಲಿಸುವುದಷ್ಟೇ ಅಲ್ಲ, ಬದುಕನ್ನೂ ಕಲಿಸುವ ಶಾಲೆ: ಶ್ರೀನಿವಾಸ ಪಾಲಹಳ್ಳಿ

ರಂಗಭೂಮಿ ಕೇವಲ ಅಭಿನಯ ಕಲಿಸುವ ವೇದಿಕೆಯಲ್ಲ. ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಮಾನವೀಯ...

SIR ಅಕ್ರಮ ಆರೋಪ: ಎಸ್‌ಐಟಿ ತನಿಖೆಗೆ ಎಸ್‌ಡಿಪಿಐ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...

ಕಲಬುರಗಿ | ಬೈಕ್‌ಗೆ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಡಿಕ್ಕಿ: ತಂದೆ, ಮಗಳು ಸ್ಥಳದಲ್ಲೇ ಸಾವು!

ಬೈಕ್‌ಗೆ ಸಿಮೆಂಟ್ ಮಿಕ್ಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು...