ಚಿತ್ರದುರ್ಗ | ಶೋಷಿತ ಸಮುದಾಯಗಳ ಪ್ರಗತಿಯ ಹರಿಕಾರ ಬಿ ಕೃಷ್ಣಪ್ಪ

Date:

ದಲಿತ, ಶೋಷಿತ ಸಮುದಾಯಗಳ ಪ್ರಗತಿಗಾಗಿ ಶ್ರಮಿಸಿದ ಪ್ರೊ.ಬಿ ಕೃಷ್ಣಪ್ಪ ಅವರು ಸ್ಮರಣೀಯ ನೇತಾರ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ ವಿಜಯಕುಮಾರ್ ಹೇಳಿದರು.

- Advertisement -

ಹಲವು ದಲಿತ ಸಂಘಟನೆಗಳ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಬಿ ಕೃಷ್ಣಪ್ಪ ಅವರ 86ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

‘ಎಪ್ಸ್ಟೀನ್‌’ನದ್ದು ಆತ್ಮಹತ್ಯೆಯಲ್ಲ, ಕೊಲೆ! ತಜ್ಞರ ಹೊಸ ಅಧ್ಯಯನದಿಂದ ಸ್ಫೋಟ;...

ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ...

“ಸಾಮಾಜಿಕ ರಕ್ಷಣೆಗಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಸ್ತ್ರವನ್ನು ಶೋಷಿತರ ಕೈಗೆ ನೀಡಿದ ಕೀರ್ತಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ” ಎಂದು ಹೇಳಿದರು.

“1970ರ ದಶಕದಲ್ಲಿನ ಮೌಢ್ಯಾಚರಣೆ ಹೆಸರಿನಲ್ಲಿ ಶೋಷಿತರ ಶೋಷಣೆ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯ, ದಲಿತರ ಭೂ ಕಬಳಿಕೆ ಪ್ರಕರಣಗಳಿಗೆ ಹೋರಾಟದ ಶಕ್ತಿಯಾಗಿ ನಿಂತವರು ಕೃಷ್ಣಪ್ಪ. ಅಂಬೇಡ್ಕ‌ರ್ ಅವರ ವಿಚಾರಧಾರೆಯಿಂದ ಪ್ರೇರಿತರಾಗಿದ್ದ ಕೃಷ್ಣಪ್ಪ, ರಾಜ್ಯದಲ್ಲಿ ದಸಂಸ ಸಂಘಟನೆ ಕಟ್ಟುವ ಮೂಲಕ ದಲಿತ ಮತ್ತು ಶೋಷಿತ ಸಮುದಾಯಕ್ಕೆ ಸಾಮಾಜಿಕ ರಕ್ಷಣೆ ನೀಡಿದರು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಜ್ಯ ಶಿಕ್ಷಣ ನೀತಿ | ತಜ್ಞರ ಜತೆ ಸಮಾಲೋಚಿಸಿ ಗೊಂದಲವಿಲ್ಲದಂತೆ ಜಾರಿಮಾಡುತ್ತೇವೆ: ಸಚಿವ ಸುಧಾಕರ್‌

“ಕೃಷ್ಣಪ್ಪ ಅವರ ಆದರ್ಶ ಮತ್ತು ಹೋರಾಟದ ದೃಷ್ಟಿಕೋನವನ್ನು ಉಳಿಸಿಕೊಳ್ಳುವ ಜವಬ್ದಾರಿ ದಲಿತರ ಮೇಲಿದೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸೌಲಭ್ಯ ಮತ್ತು ಒಡೆತನವನ್ನು ಧಕ್ಕಿಸಿಕೊಳ್ಳಲು ಹೋರಾಟವೇ ಪ್ರಮುಖ ಅಸ್ತ್ರ. ಹಾಗಾಗಿ ಹಲವು ಸಂಘಟನೆಗಳು ಒಗ್ಗೂಡಿ ಹೋರಾಟದ ಶಕ್ತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ” ಎಂದರು.

ಕೆ ಬಿ ನಾಗರಾಜ್, ಅಂಜಿನಪ್ಪ, ಚನ್ನಿಗರಾಮಯ್ಯ, ಎನ್ ತಿಪ್ಪೇರುದ್ರಪ್ಪ, ಜಾಲಿ ಮಂಜು, ಎನ್ ಹೊನ್ನೂರಸ್ವಾಮಿ, ಡಿ.ಸೋಮಶೇಖರ್, ಹಳೇಟೌನ್ ಬದ್ರಿ, ಆರ್ ರುದ್ರಮುನಿ, ಜಗದೀಶ, ನಿಂಗರಾಜ್‌, ಡಿ ತಿಪ್ಪೇಸ್ವಾಮಿ, ಮಹಾಂತೇಶ್, ಎ ಮಾರುತಿ ಸೇರಿದಂತೆ ಇತರರು ಇದ್ದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಳ್ಳಿ ಹಳ್ಳಿಗೂ ನೇಗಿಲಯೋಗಿ ಯೋಜನೆ ತಲುಪಿಸಿ: ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ

ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆಯ ಪ್ರಯೋಜನ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ರೈತರಿಗೂ ತಲುಪುವಂತೆ...

ಧಾರವಾಡ |ಸಾರಿಗೆ ಸಂಸ್ಥೆ ಚಾಲಕನ ಮನೆ ಸೇರಿ ಮೂರು ಕಡೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ...

ಉಡುಪಿ | ಮಕ್ಕಳ ರಕ್ಷಣೆ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್

ಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಜಾರಿಗೊಳಿಸಲಾಗಿರುವ ಮಕ್ಕಳ ರಕ್ಷಣಾ...