ಚಿತ್ರದುರ್ಗ | ಬಾಲ್ಯ ವಿವಾಹಕ್ಕೆ ಯತ್ನ ಮದುವೆ ಬೇಡವೆಂದು ಅಂಗಲಾಚಿದ ಬಾಲಕಿಯ ರಕ್ಷಣೆ; ಐವರ ಮೇಲೆ ದೂರು ದಾಖಲು

Date:

ಬಾಲಕಿಯ ತಂದೆ, ತಾಯಿ ಸೇರಿದಂತೆ ಬಂಧುಗಳು ಬಲವಂತವಾಗಿ ಸೋದರ ಸಂಬಂಧಿಯೊಬ್ಬನ ಜೊತೆ ಮದುವೆ ಮಾಡಲು ಒತ್ತಾಯ ಮಾಡಿರುವ ಪ್ರಯತ್ನ ನೆಡೆಸಿದ್ದು, ಮದುವೆಗೆ ಬಾಲಕಿ ನಿರಾಕರಿಸಿ ರಕ್ಷಣೆಗೆ ಅಂಗಲಾಚಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -

ರೆಡ್ಡಿಹಳ್ಳಿಯ ಕಾಡುಗೊಲ್ಲರ ಸಮುದಾಯದಲ್ಲಿ ಈ ಘಟನೆ ನೆಡೆದಿದೆ ಎನ್ನಲಾಗಿದೆ. ಮದುವೆಗೆ ಬಾಲಕಿ ಸ್ಪಷ್ಟವಾಗಿ ನಿರಾಕರಿಸಿ, ಗೋಗರೆದರೂ ತಾಯಿ, ತಂದೆ, ಕೆಲವು ಸಂಬಂಧಿಕರು ಮದುವೆ ಆಗಬೇಕು ಎಂದು ಆಕೆಗೆ ಹೊಡೆದು ಬಲವಂತ ಮಾಡಿದ್ದಾರೆ. ಹುಡುಗನೊಬ್ಬ ಕೈಯಲ್ಲಿ ತಾಳಿ ಹಿಡಿದಿದ್ದು, ಅಲ್ಲಿದ್ದ ಜನರು ಬಲವಂತವಾಗಿ ತಾಳಿ ಕಟ್ಟಿಸಲು ಪ್ರಯತ್ನಿಸಿದ್ದಾರೆ.‌ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಘಟನೆ ಗಮನಕ್ಕೆ ಬಂದ ತಕ್ಷಣ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಆ ಬಾಲಕಿಯನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರಿಸಿದ್ದಾರೆ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ವಿಡಿಯೋದಲ್ಲಿ ಅಪ್ರಾಪ್ತ ಬಾಲಕಿ ‘ನನ್ನನ್ನು ಬಿಟ್ಟು ಬಿಡಿ, ನನಗೆ ದೇವರೇ ಗತಿ, ಕಾಪಾಡು ದೇವರೇ, ಎಲ್ಲಿದ್ದೀಯಪ್ಪಾ ದೇವ್ರೆ” ಎಂದು ಅಂಗಲಾಚುತ್ತಿರುವ ಘಟನೆ ಮನಕಲಕುವಂತಿದೆ. ಆದರೂ ಮದುವೆ ಮಾಡಬೇಕೆಂದು ಪಟ್ಟು ಹಿಡಿದಿರುವ ಪೋಷಕರು ಬಾಲಕಿಯನ್ನು ಹೊಡೆದು ಬಡಿದು ಎಳೆದಾಡುತ್ತಿರುವ ಘಟನೆ ಇನ್ನು ಕೆಲವು ಜಾತಿ, ಸಮುದಾಯಗಳಲ್ಲಿ ಮತ್ತು ಸಮಾಜದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ಸಂಪ್ರದಾಯಗಳ ಹೆಸರಿನಲ್ಲಿ ಆಗುತ್ತಿರುವ ದೌರ್ಜನ್ಯವನ್ನು ಸಮಾಜದ ಮುಂದೆ ತೆರೆದಿಟ್ಟಿದೆ.

ಬಾಲ್ಯ ವಿವಾಹವನ್ನು ನಿಷೇಧಿಸಿ ಸರ್ಕಾರ ಕಾನೂನುಗಳನ್ನು ಜಾರಿ ಮಾಡಿ, ಶಿಕ್ಷೆಗಳನ್ನು ಜಾರಿ ಮಾಡಿದ್ದರೂ, ಬಾಲ್ಯ ವಿವಾಹ ತಡೆಯುವಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ ಜಾತಿಗಳಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ಹಾಗಾಗ್ಗೆ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಮಕ್ಕಳನ್ನು ಪೋಷಿಸಿ ಒಳ್ಳೆಯ ವಿದ್ಯಾಭ್ಯಾಸ ಮತ್ತು ಉತ್ತಮ ಜೀವನ ಕಲ್ಪಿಸಬೇಕಾದ ತಂದೆ-ತಾಯಿಗಳು ಕೂಡ ಬಾಲ್ಯ ವಿವಾಹಕ್ಕೆ ಕೈ ಜೋಡಿಸುತ್ತಿರುವುದು ಆತಂಕಕಾರಿ ಸಂಗತಿ.

ಮಾಹಿತಿ ನೀಡಿದ ಚಳ್ಳಕೆರೆ ಪೊಲೀಸ್ ಠಾಣೆಯ ಠಾಣಾಧಿಕಾರಿ “ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ, ಬಾಲಕಿಯ ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಎಫ್ ಐ ಆರ್ ಹಾಕಲಾಗಿದೆ. ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅವ್ಯವಹಾರ; ಆಡಳಿತಾಧಿಕಾರಿ ನೇಮಕಕ್ಕೆ ರಕ್ಷಣಾ ಸಮಿತಿಯ ಪ್ರತಿಭಟನೆ

ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿ ಸವಿತಾ, “ಘಟನೆಗೆ ಸಂಬಂಧಿಸಿದಂತೆ ನೊಂದಬಾಲಕಿಯ ರಕ್ಷಣೆ ಮಾಡಲಾಗಿದ್ದು, ಬಾಲಕಿ ಮಕ್ಕಳ ರಕ್ಷಣಾ ಸಮಿತಿಯ ಆರೈಕೆಯಲ್ಲಿದ್ದಾಳೆ. ಘಟನೆ ಸಂಬಧ ಐದು ಜನರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲು ಚಳ್ಳಕೆರೆಯಲ್ಲಿ ಮಕ್ಕಳ ರಕ್ಷಣಾ ಆಯೋಗದ ಸಭೆ ನಡೆಸಲಾಗುತ್ತಿದ್ದು, ತನಿಖೆ ಮತ್ತು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.ಮಕ್ಕಳ ರಕ್ಷಣೆ ಅರಿವಿನ ಕಾರ್ಯಕ್ರಮಗಳನ್ನು ಕೂಡ ಕೈಗೊಳ್ಳುತ್ತಿದ್ದೇವೆ. ಬಾಲ್ಯ ವಿವಾಹ ನಿಷೇಧ ಕುರಿತು ಸರ್ಕಾರ ಇಷ್ಟೆಲ್ಲಾ ಕ್ರಮಗಳನ್ನು ಕೈಕೊಂಡರೂ ಮತ್ತು ಮಕ್ಕಳ ರಕ್ಷಣಾ ಸಮಿತಿಯಿಂದ ಅರಿವಿನ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಕೂಡ ಕೆಲವು ಸಮುದಾಯಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ಇತರೆ ದೌರ್ಜನ್ಯಗಳನ್ನು ಮುಂದುವರೆಸಿರುವುದು ನಿಜಕ್ಕೂ ಆತಂಕಕಾರಿ” ಎಂದು ಪ್ರತಿಕ್ರಿಯಿಸಿದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತನ ಭೂಹಕ್ಕಿಗೆ ‘ಪೋಡಿ’ ಅಡ್ಡಿ: ಆನ್‌ಲೈನ್ ಸೇವೆಯಿದ್ದರೂ ಮುಗಿಯದ ಅಲೆದಾಟ!

ರೈತನಿಗೆ ಭೂಮಿಯೇ ಬದುಕು. ಆ ಭೂಮಿಯ ಗಡಿ ಎಲ್ಲಿ? ಎಷ್ಟು ವಿಸ್ತೀರ್ಣ?...

₹50 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ; ಕೈಗಾರಿಕಾ ವಲಯಕ್ಕೆ ಸರ್ಕಾರದ ಬಿಗ್ ಪ್ಲಾನ್

ರೈತರಿಗೆ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವುದರಿಂದ ಹಿಡಿದು ಹೂಡಿಕೆ ಮತ್ತು ಉದ್ಯೋಗ...

ರಾಜ್ಯದಲ್ಲಿ ಭೀಕರ ಬರ: 46,000 ಕೋಟಿ ರೂ. ನಷ್ಟ; ಜಿಎಸ್‌ಟಿ ಆದಾಯದ ಮೇಲೆ ಪರಿಣಾಮ

ಕರ್ನಾಟಕದಲ್ಲಿ ಈ ಬಾರಿ ಹಿಂದೆಂದೂ ಕಾಣದಂತಹ ಭೀಕರ ಬರ ಪರಿಸ್ಥಿತಿ ತಲೆದೋರಿದೆ‌....

ರಾಜ್ಯದಲ್ಲಿ ಹೆಚ್ಚುತ್ತಿದೆ ಮಳೆ ಆರ್ಭಟ; 19 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಇಂದು...