ದಕ್ಷಿಣ ಕನ್ನಡ | ‘ಸ್ವಾತಂತ್ರ ಹೋರಾಟದಲ್ಲಿ ಉಳ್ಳಾಲದ ಬ್ಯಾರಿ ಮುಸ್ಲಿಮರ ಪಾತ್ರ’ದ ಕುರಿತು ಉಪನ್ಯಾಸ

Date:

‘ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಅದನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ’ ಎಂದು ಅಲ್ ಉಮರ್ ಮಸ್ಜಿದ್‌ನ ಅಧ್ಯಕ್ಷ ನಾಸಿರ್ ಎನ್ ಎಸ್ ಹೇಳಿದರು.

ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆ ಕಾರ್ಯಕರ್ತರು ಕೊಣಾಜೆ ಸಮೀಪದ ನಡುಪದವಿನ ಹಯಾತುಲ್ ಇಸ್ಲಾಂ ಮದ್ರಸದ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ‘ಸ್ವಾತಂತ್ರ ಹೋರಾಟದಲ್ಲಿ ಉಳ್ಳಾಲ ತಾಲೂಕಿನ ಬ್ಯಾರಿ ಮುಸ್ಲಿಮರ ಪಾತ್ರ’ದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮೇಲ್ತೆನೆ’ ಸಂಘಟನೆಯು ವಾಸ್ತವ ಸಂಗತಿಯನ್ನು ಯುವ ಪೀಳಿಗೆಯ ಮುಂದಿಡಲು ನಡೆಸುತ್ತಿರುವ ಕೆಲಸ ಶ್ಲಾಘನೀಯ. ಬ್ಯಾರಿ ಮುಸ್ಲಿಮರಲ್ಲಿ ನಾಯಕತ್ವದ ಗುಣವಿದೆ. ಹಾಗಾಗಿ ಯಾರೂ ಕೂಡ ಹಿಂಬಾಲಕರಾಗದೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಶಾಸಕ ಪ್ರಭು ಚವ್ಹಾಣ ಮಾಡಿದ ಕೊಲೆ ಆರೋಪದಿಂದ ಶಾಕ್‌ ಆಗಿದ್ದೇನೆ: ಕೇಂದ್ರ ಸಚಿವ ಖೂಬಾ

ಕೊಣಾಜೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಸೀದಿಯ ಖತೀಬ್ ಅಬ್ದುಲ್ ಮಜೀದ್ ನಿಝಾಮಿ, ಮೇಲ್ತೆನೆಯ ಅಧ್ಯಕ್ಷ ಬಶೀರ್ ಕಲ್ಕಟ್ಟ, ಮಾಜಿ ಅಧ್ಯಕ್ಷ ಹಂಝ ಮಲಾರ್, ಮುಹಮ್ಮದ್ ಬಾಷಾ ನಾಟೆಕಲ್, ಕಾರ್ಯದರ್ಶಿ ಬಿ ಎಂ ಕಿನ್ಯ, ಸದಸ್ಯ ಆಸೀಫ್ ಬಬ್ಬುಕಟ್ಟೆ, ಬಾಳೆಪುಣಿ ಗ್ರಾಪಂ ಸದಸ್ಯ ಸಿ ಎಂ ಶರೀಫ್, ಪುತ್ತು ಉಸ್ತಾದ್, ಮಸೀದಿಯ ಆಡಳಿತ ಕಮಿಟಿಯ ಸದಸ್ಯರುಗಳಾದ ಎಸ್ ಎ ಉಸ್ಮಾನ್, ಬಾವಾ ಕಟೊಡಿ, ಇಸ್ಮಾಯಿಲ್ ಸಿ ಎಚ್, ಅಬೂಬಕರ್ ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಪಂಚಮಿತ್ರ ಪೋರ್ಟಲ್ ಲೋಕಾರ್ಪಣೆ

ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಹಲವಾರು ಸೇವೆಗಳನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು...

ಚಿಕ್ಕಬಳ್ಳಾಪುರ | ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಕಡ್ಡಾಯ: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ...

ಚಿಕ್ಕಬಳ್ಳಾಪುರ | ವೀರಪ್ಪ ಮೊಯ್ಲಿ ವಿರಚಿತ ‘ವಿಶ್ವಸಂಸ್ಕೃತಿಯ ಮಹಾಯಾನ’ ಪುಸ್ತಕ ಬಿಡುಗಡೆ

ವೀರಪ್ಪ ಮೊಯ್ಲಿ ಮರೆಯಲಾರದ ರಾಜಕಾರಣಿಯೂ ಹೌದು ಮತ್ತು ಲೇಖಕರೂ ಹೌದು ಎಂದು...

ರಾಮೇಶ್ವರಂ ಕೆಫೆ ಪ್ರಕರಣ | ಕಪೋಲಕಲ್ಪಿತ ವರದಿ ಬಿತ್ತರಿಸದಿರಿ: ಮಾಧ್ಯಮಗಳಿಗೆ ಕಮಿಷನರ್ ಎಚ್ಚರಿಕೆ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪೋಲಕಲ್ಪಿತ ವರದಿ ಬಿತ್ತರಿಸದಿರಿ ಎಂದು...