ಕಣ್ಣೀರಿಟ್ಟು ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿಯಿಂದ ರಾಹುಲ್ ಗಾಂಧಿ ಭೇಟಿ

Date:

  • ವೈರಲ್ ವಿಡಿಯೋ ಮೂಲಕ ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿ ರಾಮೇಶ್ವರ್ ಅವರ ಕಣ್ಣೀರು
  • ‘ಕೋಟಿಗಟ್ಟಲೆ ಭಾರತೀಯರ ಸಹಜ ಸ್ವಭಾವವನ್ನು ರಾಮೇಶ್ವರ್ ಅವರಲ್ಲಿ ಕಂಡೆ’ ಎಂದ ಕಾಂಗ್ರೆಸ್ ಮುಖಂಡ

ದೆಹಲಿಯ ಆಝಾದ್‌ಪುರ್‌ ಮಂಡಿಯಲ್ಲಿ ಟೊಮೆಟೊ ಖರೀದಿಸಲು ಬಂದು, ಹಣವಿಲ್ಲದೆ ಕಣ್ಣೀರಿಟ್ಟು ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿ ರಾಮೇಶ್ವರ್‌ ಅವರು ರಾಹುಲ್ ಗಾಂಧಿ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ, ಫೋಟೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ರಾಮೇಶ್ವರ್ ಅವರು ಉತ್ಸಾಹಭರಿತ ವ್ಯಕ್ತಿ. ಅವರಲ್ಲಿ ಕೋಟಿಗಟ್ಟಲೆ ಭಾರತೀಯರ ಸಹಜ ಸ್ವಭಾವವನ್ನು ನಾನು ಕಂಡೆ. ಕಷ್ಟದ ಸಂದರ್ಭದಲ್ಲೂ ನಗುನಗುತ್ತಲೇ ಮುನ್ನಡೆಯುವವರು ನಿಜಕ್ಕೂ ‘ಭಾರತ ಭಾಗ್ಯ ವಿಧಾತರು’ ಎಂದು ಬರೆದುಕೊಂಡಿದ್ದಾರೆ.

ದೆಹಲಿಯ ಗಲ್ಲಿಗಳಲ್ಲಿ ತರಕಾರಿ ಮಾರುತ್ತಿರುವ ಚಿಲ್ಲರೆ ವ್ಯಾಪಾರಿ ರಾಮೇಶ್ವರ್ ಬೆಲೆ ಏರಿಕೆಗೆ ಸಂಬಂಧಿಸಿ ಕಣ್ಣೀರಿಡುತ್ತಾ ಮಾತನಾಡಿದ್ದ ಮನಕಲಕುವ ವಿಡಿಯೋವೊಂದು ಎರಡು ವಾರಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ಇಡೀ ದೇಶದ ಗಮನ ಸೆಳೆದಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಹುಲ್‌ ಗಾಂಧಿ, ಖ್ಯಾತ ಬಾಲಿವುಡ್ ನಟ ವಿಜಯ್‌ ವರ್ಮಾ ಸೇರಿದಂತೆ ಹಲವರು ಈ ವಿಡಿಯೋ ತುಣುಕನ್ನು ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದರು.

ರಾಮೇಶ್ವರ್‌ ದೆಹಲಿಯ ಆಝಾದ್‌ಪುರ್‌ ಮಂಡಿಯಲ್ಲಿ ಟೊಮೆಟೊ ಖರೀದಿಸಲು ಬಂದಿದ್ದರು. ಆದರೆ, ದುಬಾರಿ ಬೆಲೆಯ ಕಾರಣಕ್ಕೆ ಯಾವುದೇ ತರಕಾರಿಯನ್ನು ಖರೀದಿಸಲಾಗದೆ ಖಾಲಿ ಕೈಯಲ್ಲಿ ಮನೆಗೆ ಹಿಂದಿರುಗಿದ್ದರು.

ಇದನ್ನು ಓದಿದ್ದೀರಾ? ಬೆಲೆ ಏರಿಕೆಗೆ ತತ್ತರಿಸಿ ಕಣ್ಣೀರಾದ ದೆಹಲಿಯ ತರಕಾರಿ ವ್ಯಾಪಾರಿ

ಇದನ್ನು ಗಮನಿಸಿದ್ದ ‘ಲಲ್ಲನ್‌ಟಾಪ್‌ʼ ಯುಟ್ಯೂಬ್‌ ಮಾಧ್ಯಮದ ಪ್ರತಿನಿಧಿ ಭಾನು ಕುಮಾರ್‌ ಜಾ ರಾಮೇಶ್ವರ್‌ ಅವರನ್ನು ಮಾತನಾಡಿಸಿ ವ್ಯಾಪಾರ-ವಹಿವಾಟಿನ ಬಗ್ಗೆ ವಿಚಾರಿಸುತ್ತಿರುವಾಗ ರಾಮೇಶ್ವರ್‌ ಕಣ್ಣೀರಾಗಿದ್ದರು.

ರಾಮೇಶ್ವರ್‌ ಅವರ ನೋವಿನ ಮಾತುಗಳನ್ನು ಕೇಳಿಸಿಕೊಂಡಿದ್ದ ಲಕ್ಷಾಂತರ ಮಂದಿ ಅವರಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದರು.

ವಿಡಿಯೋ ವೈರಲ್ ಬೆನ್ನಲ್ಲೇ ರಾಹುಲ್ ಗಾಂಧಿಯವರು ದೆಹಲಿಯ ಆಝಾದ್‌ಪುರ್‌ ಮಂಡಿಗೆ ಬೆಳ್ಳಂಬೆಳಗ್ಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಸ್ಥರ ಕಷ್ಟಸುಖಗಳನ್ನು ಕಂಡು ಮಾತುಕತೆ ನಡೆಸಿದ್ದರು.

ಈ ನಡುವೆ ನಿನ್ನೆ ಮತ್ತೆ ‘ಲಲ್ಲನ್‌ಟಾಪ್‌’ ಪ್ರತಿನಿಧಿ ಭಾನು ಕುಮಾರ್‌ ಝಾ ರಾಮೇಶ್ವರ್‌ ಅವರ ಮನೆಯನ್ನು ಹುಡುಕಿ, ಅವರನ್ನು ಮಾತನಾಡಿಸಿದ್ದರು. ಆ ವೇಳೆ ‘ರಾಹುಲ್ ಗಾಂಧಿ ಭೇಟಿ ಸಾಧ್ಯವಾದರೆ ಅದು ನನ್ನ ಸೌಭಾಗ್ಯವಾಗಲಿದೆ’ ಎಂದು ಹೇಳಿಕೆ ನೀಡಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್ | ನೌಕಾದಳದಿಂದ 2 ಸಾವಿರ ಕೋಟಿ ರೂ. ಮೊತ್ತದ 3300 ಕೆಜಿ ಮಾದಕ ವಸ್ತು ವಶ

ಭಾರತೀಯ ನೌಕಾದಳ ಹಾಗೂ ಗುಜರಾತ್ ಭಯೋತ್ಪಾದಕ ವಿರೋಧಿ ದಳದ ನೆರವಿನೊಂದಿಗೆ ನಾರ್ಕೋಟಿಕ್ಸ್‌...

‌ಪಾಕಿಸ್ತಾನ ಜಿಂದಾಬಾದ್‌ | ಮಾಧ್ಯಮಗಳ ವಿಡಿಯೋ ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ: ಡಾ. ಜಿ.ಪರಮೇಶ್ವರ್

‌ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...

ಆಂಧ್ರ ಪ್ರದೇಶ | ವಿಧಾನಸಭೆಯಿಂದ 8 ಶಾಸಕರು ಅನರ್ಹ

ಆಂಧ್ರಪ್ರದೇಶದ ಎಂಟು ಹಾಲಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ...