ದಕ್ಷಿಣ ಕನ್ನಡ | ಶಾಲೆಗಳ ಪುನರಾರಂಭ; ಲೇಖನಿ ಸಾಮಗ್ರಿ ಕೊಂಡುಕೊಳ್ಳಲು ನಿರಾಸಕ್ತಿ

Date:

ಪ್ರಸ್ತುತ ವಾರದಲ್ಲಿ ಶಾಲೆಗಳು ಪುನರಾರಂಭಗೊಂಡಿದ್ದರೂ ಪುಸ್ತಕಗಳು, ಲೇಖನಿ ಸಾಮಗ್ರಿ(ಸ್ಟೇಷನರಿ)ಗಳು ಮತ್ತು ಸಮವಸ್ತ್ರಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಈ ವರ್ಷ ಹೆಚ್ಚಿನ ಜನಸಂದಣಿ ಕಾಣುತ್ತಿಲ್ಲ. ಮಂಗಳೂರು ಭಾಗದಲ್ಲಿ ನೀರಿನ ಕೊರತೆಯಿಂದಾಗಿ ಈ ವಾರ ಶಾಲೆಗಳನ್ನು ಪುನರಾರಂಭಿಸಲು ಸಂದಿಗ್ದ ಪರಿಸ್ಥಿತಿ ಉಂಟಾಗಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಜೂನ್ 1 ರಿಂದ ಶಾಲೆಗಳು ತೆರೆಯಲಿವೆ ಎಂದು ಅಂಗಡಿಯವರು ತಿಳಿಸಿದ್ದಾರೆ.

“ನೀರಿನ ಸಮಸ್ಯೆಯಿಂದಾಗಿ ಈ ವಾರ ಶಾಲೆಗಳನ್ನು ಪುನರಾರಂಭಿಸುವ ಅನಿಶ್ಚಿತತೆ ಮೊದಲ ಕಾರಣವಾಗಿರಬಹುದು. ಹಾಗಾಗಿ ಜೂನ್‌ 1ರಿಂದ ಶಾಲೆ ಆರಂಭವಾಗಬಹುದು. ಈ ಹಿನ್ನೆಲೆಯಲ್ಲಿ ಪೋಷಕರು ಸ್ಟೇಷನರಿ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿರುವದು ಕಂಡುಬರುತ್ತಿಲ್ಲ. ಎರಡನೆಯದಾಗಿ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಸ್ಟೇಷನರಿ ವಸ್ತುಗಳು ಮತ್ತು ನೋಟ್‌ಬುಕ್‌ಗಳನ್ನು ಒದಗಿಸುವುದರಿಂದ ಅವುಗಳ ಮಾರಾಟವು ಕಡಿಮೆಯಾಗಿದೆ. ಮೂರನೆಯದಾಗಿ, ಸ್ಟೇಷನರಿ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ಪೋಷಕರು ಹಿಂಜರಿಯುತ್ಎಂತಿದ್ದುದಾರೆ” ಎಂದು ಸ್ಟೇಷನರಿ ಅಂಗಡಿ ಮಾಲಿಕರು ತಿಳಿಸಿದ್ದಾರೆ.

“ಕಳೆದ ವರ್ಷಕ್ಕೆ ಹೋಲಿಸಿದರೆ ಕಾಗದದ ವಸ್ತುಗಳ ಬೆಲೆ ಶೇ.50ರಷ್ಟು ಹೆಚ್ಚಾಗಿದೆ. ಬರವಣಿಗೆ ಉಪಕರಣಗಳ ಬೆಲೆಗಳೂ ಹಾಗೆಯೇ ಇವೆ. ಸ್ಟೇಷನರಿ ವಸ್ತುಗಳ ಮೇಲೆ ವಿಧಿಸಿರುವ ಶೇ.18ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಪರಿಹಾರವನ್ನು ಕಂಡುಹಿಡಿಯಬೇಕು. ಕೆಲವು ರಾಜ್ಯಗಳು ಈಗಾಗಲೇ ಅವುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಸಹಾಯವಾಗುತ್ತದೆ” ಎಂದು ಮಾಲೀಕರು ಸಲಹೆ ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿ: ನಿರಂಜನಾರಾಧ್ಯ ವಿ ಪಿ

“ನೋಟ್ ಬುಕ್‌ಗಳ ಬೆಲೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಬೆಲೆ ಏರಿಕೆಯಿಂದಾಗಿ ಪೆನ್ನುಗಳು ಮತ್ತು ಸಂಬಂಧಿತ ಪರಿಕರಗಳ ಬೆಲೆಯೂ ಶೇ.10 ರಷ್ಟು ಹೆಚ್ಚಾಗಿದೆ. ಈ ವರ್ಷ ಚುನಾವಣಾ ಫಲಿತಾಂಶದ ನಂತರವೇ ಮಾರಾಟ ಪ್ರಾರಂಭವಾಯಿತು. ಆದರೂ, ಕೊಂಡುಕೊಳ್ಳುವವರು ಮುಗಿಬೀಳುತ್ತಿಲ್ಲ” ಎಂದು ಕಾರ್ತಿಕ್ ಸ್ಕೂಲ್ ಬುಕ್ಸ್ ಅಂಡ್ ಸ್ಟೇಷನರೀಸ್‌ ಮಾಲೀಕ ಹೇಳಿದ್ದಾರೆ.

ನೋಟ್ ಬುಕ್ ಬೆಲೆ ಏರಿಕೆ

ನೋಟ್‌ಬುಕ್‌ಗಳು, ಪೆನ್ನುಗಳು ಮತ್ತು ಇತರ ಲೇಖನಿ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದರೂ, ಛತ್ರಿಗಳನ್ನು ಹೊರತುಪಡಿಸಿ ಸಮವಸ್ತ್ರ, ಶಾಲಾ ಬ್ಯಾಗ್ ಮತ್ತು ಶೂಗಳ ಬೆಲೆ ಸ್ಥಿರವಾಗಿದೆ.‌ ಛತ್ರಿಗಳ ಬೆಲೆ ಶೇ. 10ರಿಂದ 15 ರಷ್ಟು ಏರಿಕೆ ಕಂಡಿದ್ದು, ಉಳಿದ ವಸ್ತುಗಳ ಬೆಲೆ ಹಿಂದಿನ ವರ್ಷದಂತೆಯೇ ಇದೆ ಎಂದು ನಗರದ ಕೇಂದ್ರ ಮಾರುಕಟ್ಟೆಯಲ್ಲಿರುವ ಸೌರಾಷ್ಟ್ರ ಕ್ಲಾತ್ ಸ್ಟೋರ್ಸ್‌ ಮಾಲೀಕ ತಿಳಿಸಿದ್ದಾರೆ.

“ನೋಟ್‌ಬುಕ್‌ಗಳನ್ನು ಒದಗಿಸುವ ಶಾಲೆಗಳು ಪ್ರಸ್ತುತ ವರ್ಷದಲ್ಲಿ ಸ್ಟೇಷನರೀಸ್‌ ಬೆಲೆಯನ್ನು ₹700ರಿಂದ ₹1,000ದವರೆಗೆ ಹೆಚ್ಚಿಸಿವೆ” ಎಂದು ಕೆಲವು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಬಿಜೆಪಿ ಸೇರಿದ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್‌

ಶಾಸಕರ ಕಡೆಗಣನೆಗೆ ಬೇಸತ್ತು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ...

 ರೈತ ಮುಖಂಡರ ಮೇಲೆ ಬಿಜೆಪಿಗರಿಂದ ದಾಳಿ; ಅಭಿಯಾನ ತೀವ್ರಗೊಳಿಸಲು ಮುಂದಾದ ರೈತರು

ರೈತ ವಿರೋಧಿ ಪಕ್ಷಗಳನ್ನು ಸೋಲಿಸಿ ಎಂದು ಚಾಮರಾಜನಗರದಲ್ಲಿ ಪ್ರಚಾರ ಜಾಥಾ ನಡೆಸುತ್ತಿದ್ದ...

ಬೆಂಗಳೂರು | 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

23 ವರ್ಷದ ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ...