ಕರ್ನಾಟಕ ಜಲಸಾರಿಗೆ ಮಂಡಳಿಯು ₹8,295 ಕೋಟಿ ಮೌಲ್ಯದ, ಸಚಿವ ಸಂಪುಟದ ಅನುಮೋದನೆ ಪಡೆದ ಹಾಗೂ ಹೂಡಿಕೆಗೆ ಸಿದ್ಧವಾಗಿರುವ ಎಂಟು ಕಡಲ ಪಿಪಿಪಿ ಯೋಜನೆಗಳ ಹೂಡಿಕೆದಾರರ ಕೈಪಿಡಿ ಮತ್ತು ಮಾರುಕಟ್ಟೆ ಸಾಮಗ್ರಿಗಳನ್ನು ಬಿಡುಗಡೆ ಮಾಡಿದೆ.
7ನೇ ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯು ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆಯಿದಿದ್ದು, ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದು, ಹೂಡಿಕೆ ಅವಕಾಶಗಳನ್ನು ತೆರೆಯುವುದು ಮತ್ತು ಕರ್ನಾಟಕದ ಕಡಲ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಗಮನಹರಿಸಿ, ರಾಜ್ಯಾದ್ಯಂತ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಕಡಲ ಯೋಜನೆಗಳನ್ನು ಮುನ್ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಹೂಡಿಕೆದಾರರ ಕೈಪಿಡಿ ಮತ್ತು ಮಾರುಕಟ್ಟೆ ಸಾಮಗ್ರಿಗಳು ರಾಜ್ಯದ ಕಡಲ ಯೋಜನೆಗಳ ಸರಣಿ, ಹೂಡಿಕೆ ಅವಕಾಶಗಳು ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಒಂದೆಡೆ ಸೇರಿಸಿ, ದೇಶೀಯ ಹಾಗೂ ಜಾಗತಿಕ ಸಂಭಾವ್ಯ ಹೂಡಿಕೆದಾರರಿಗೆ ಕರ್ನಾಟಕದ ಕಡಲ ಸಾಮರ್ಥ್ಯದ ಸಮಗ್ರ ಚಿತ್ರಣವನ್ನು ಒದಗಿಸುತ್ತವೆ. ಈ ಉಪಕ್ರಮಗಳು ಹೂಡಿಕೆಗಳನ್ನು ಆಕರ್ಷಿಸುವ, ಕಡಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ, ಉದ್ಯೋಗ ಸೃಷ್ಟಿಸುವ ಹಾಗೂ ರಾಜ್ಯದ ಕರಾವಳಿ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.




