ಸಂಸತ್ತಿನ ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆಯಾದರೂ ‘ಪ್ರೊರೋಗೇಷನ್’ ಆಗದಿರುವುದೇಕೆ?- ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

Date:

ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಅಗತ್ಯವಿರುವ ಮೂರನೇ ಎರಡರಷ್ಟು (2/3rd) ಬಹುಮತವನ್ನು ಪಡೆಯಲು ಮತ್ತು ರಾಜಕೀಯವಾಗಿ ಲೆಕ್ಕಾಚಾರ ಮರುಹೊಂದಿಸಲು ಗೃಹ ಸಚಿವ ಅಮಿತ್ ಶಾ ಅವರಿಗೆ ಸಮಯಾವಕಾಶ ಮಾಡಿಕೊಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ಸಂಸತ್ತಿನ ಪ್ರೊರೋಗೇಷನ್ (ಸತ್ರಾವಸಾನ) ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.

- Advertisement -

ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಂಡು (ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿ) 88 ದಿನಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ರಾಷ್ಟ್ರಪತಿಗಳು ಅಧಿಕೃತವಾಗಿ ಸತ್ರಾವಸಾನ ಘೋಷಣೆ ಮಾಡಿಲ್ಲ. ಇದು ಭಾರತೀಯ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯ ವಿಳಂಬದ ಹೊಸ ದಾಖಲೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’:...

ದೇಶಾದ್ಯಂತ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ 'ವೋಟ್‌ ಚೋರಿ' ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಗಾಗಿ ನಡೆದ ಮತದಾರರ ಹಕ್ಕು ಹರಣ, ಮತಗಳತನದ ಎಸ್‌ಐಆರ್‌ ರದ್ದಾಗಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ...

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ

ಕೇಂದ್ರ ಸರ್ಕಾರವು ಇದ್ದಕ್ಕಿದ್ದಂತೆ ವಿಶೇಷ ಅಧಿವೇಶನ ಕರೆದು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನು ಅಂಗೀಕರಿಸುವ ಸಂಚು ರೂಪಿಸುತ್ತಿದೆ ಎಂದು ಜೈರಾಮ್ ರಮೇಶ್ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಈ ಹಿಂದೆ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಅಗತ್ಯ ಬಹುಮತ ಸಿಗದೆ ವಿಫಲವಾದ ಹಿನ್ನೆಲೆಯಲ್ಲಿ, ಗೃಹ ಸಚಿವರು ಸಂಖ್ಯಾಬಲವನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಕಾಲಾವಕಾಶ ಪಡೆಯುತ್ತಿದ್ದಾರೆ ಎಂದುದೂರಿದ್ದಾರೆ.

“ಕ್ಷೇತ್ರ ಪುನರ್ವಿಂಗಡಣೆ ಕುರಿತು ಯಾವುದೇ ಕಾನೂನು ರೂಪಿಸುವ ಮುನ್ನ ಪಾರದರ್ಶಕವಾಗಿ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಆರು ತಿಂಗಳಲ್ಲಿ ಪ್ರಧಾನಿಯವರಿಗೆ 4 ಬಾರಿ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿಯವರು ಇದಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ” ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.

ಪ್ರಜಾರಾಜ್ಯ ವ್ಯವಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ ಸಂಸದೀಯ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಅದಾನಿ ಗದ್ದಲ | ಉಭಯ ಸದನಗಳ ಸಂಸತ್ತು ಕಲಾಪ ಏಪ್ರಿಲ್‌ 5ಕ್ಕೆ ಮುಂದೂಡಿಕೆ

ಏನಿದು ಪ್ರೊರೋಗೇಷನ್ (ಸತ್ರಾವಸಾನ) ಪ್ರಕ್ರಿಯೆ?

ಪ್ರೊರೋಗೇಷನ್ (Prorogation – ಸತ್ರಾವಸಾನ) ಎಂದರೆ ಭಾರತದ ಸಂಸತ್ತಿನ (ಅಥವಾ ಯಾವುದೇ ಶಾಸನಸಭೆಯ) ಚಾಲ್ತಿಯಲ್ಲಿರುವ ಒಂದು ಇಡೀ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವ ಪ್ರಕ್ರಿಯೆ. ಸಂಸತ್ತಿನ ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಲ್ಪಟ್ಟ ನಂತರ, ರಾಷ್ಟ್ರಪತಿಗಳು ಸಂವಿಧಾನದ ವಿಧಿ 85(2)(a) ಅಡಿಯಲ್ಲಿ ಅಧಿಕೃತವಾಗಿ ‘ಪ್ರೊರೋಗೇಷನ್’ (ಸತ್ರಾವಸಾನ) ಆದೇಶವನ್ನು ಹೊರಡಿಸುತ್ತಾರೆ. ಒಮ್ಮೆ ಪ್ರೊರೋಗೇಷನ್ ಆದ ನಂತರ, ಮುಂದಿನ ಅಧಿವೇಶನ ಪ್ರಾರಂಭವಾಗಲು ರಾಷ್ಟ್ರಪತಿಗಳು ಹೊಸದಾಗಿ ಸಮನ್ಸ್ (ಆಹ್ವಾನ) ಕಳುಹಿಸಬೇಕಾಗುತ್ತದೆ.

ಆಡ್ಜರ್ನ್‌ಮೆಂಟ್ (Adjournment) ಮತ್ತು ಪ್ರೊರೋಗೇಷನ್ ನಡುವೆ ವ್ಯತ್ಯಾಸವಿದೆ. ಆಡ್ಜರ್ನ್‌ಮೆಂಟ್ (ಮುಂದೂಡಿಕೆ) ಅನ್ನು ಸಭೆಯ ಸಭಾಪತಿಗಳು (ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಸಭಾಪತಿ) ಮಾಡುತ್ತಾರೆ. ಇದು ಕೇವಲ ಕೆಲವು ಗಂಟೆಗಳು, ದಿನಗಳು ಅಥವಾ ಅನಿರ್ದಿಷ್ಟಾವಧಿಗೆ ಸಭೆಯ ಕಲಾಪವನ್ನು ನಿಲ್ಲಿಸುವುದೇ ಹೊರತು ಅಧಿವೇಶನವನ್ನು ಮುಗಿಸುವುದೆಂದಲ್ಲ. ಇದಕ್ಕೆ ಭಿನ್ನವಾಗಿ ಪ್ರೊರೋಗೇಷನ್ ಅನ್ನು ರಾಷ್ಟ್ರಪತಿಗಳು ಮಾಡುತ್ತಾರೆ. ಇದು ಇಡೀ ಅಧಿವೇಶನಕ್ಕೇ ಅಧಿಕೃತ ತೆರೆ ಎಳೆಯುತ್ತದೆ. ಸಂಸತ್ತಿನ ಒಂದು ಅಧಿವೇಶನ ಮುಗಿದು ಇನ್ನೊಂದು ಅಧಿವೇಶನ ಶುರುವಾಗಲು ಪ್ರೊರೋಗೇಷನ್ ಪ್ರಕ್ರಿಯೆ ಅತ್ಯಗತ್ಯ.

ಸಾಮಾನ್ಯವಾಗಿ, ಸಂಸತ್ತು ಅನಿರ್ದಿಷ್ಟಾವಧಿ ಮುಂದೂಡಲ್ಪಟ್ಟ ನಂತರ ರಾಷ್ಟ್ರಪತಿಗಳು ಸತ್ರಾವಸಾನ ಪ್ರಕ್ರಿಯೆ ನಡೆಸಲು 2 ರಿಂದ 4 ದಿನಗಳ ಸಮಯ ಪಡೆಯುತ್ತಾರೆ. ಇದಕ್ಕೂ ಮೊದಲು 2008ರ ಯುಪಿಎ ಸರ್ಕಾರದ ಅವಧಿಯಲ್ಲಿ ಸಂಸತ್ತಿನ ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆಯಾದ ನಂತರ ಸುಮಾರು 87 ದಿನಗಳ ಕಾಲ ಪ್ರೊರೋಗೇಷನ್ ಆಗದೆ ಅಧಿವೇಶನವನ್ನು ಅಧಿಕೃತವಾಗಿ ಜಾರಿಯಲ್ಲೇ ಇಡಲಾಗಿತ್ತು. ಸಂವಿಧಾನದ ನಿಯಮಗಳ ಪ್ರಕಾರ, ಎರಡು ಅಧಿವೇಶನಗಳ ನಡುವೆ ಗರಿಷ್ಠ 6 ತಿಂಗಳ ಸಮಯ ಇರಬಹುದು. ಸರ್ಕಾರವು ಸತ್ರಾವಸಾನಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸು ಕಳುಹಿಸುವವರೆಗೆ ರಾಷ್ಟ್ರಪತಿಗಳು ಪ್ರೊರೋಗೇಷನ್ ಆದೇಶ ಹೊರಡಿಸುವುದಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾಲ್ಕಿ | ಕನ್ನಡ ಸೇವೆಗೆ ಸಂದ ಗೌರವ ಸಂತಸ ತಂದಿದೆ

ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ನಮ್ಮ...

ಶಿವಮೊಗ್ಗ | ಹುಲಿ ದತ್ತು ಪಡೆದು ವಿಭಿನ್ನವಾಗಿ ಬಿ.ವಿ ಶ್ರೀನಿವಾಸ್ ಜನ್ಮದಿನಾಚರಣೆ!

ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ...

ದೆಹಲಿ ಮಾಲಿನ್ಯ: ‘ತುರ್ತು ಕ್ರಮಕ್ಕೆ’ ಸುಪ್ರೀಂ ಕೋರ್ಟ್ ಆದೇಶ, 4 ರಾಜ್ಯಗಳಿಗೆ ನೋಟಿಸ್

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ದಿನೇ ದಿನೇ ಹದಗೆಡುತ್ತಿರುವ...

ವಾಯುಮಾಲಿನ್ಯದಿಂದ ಲಕ್ಷಾಂತರ ಸಾವು: ಮೋದಿ ಸರ್ಕಾರದ ‘ನಿರಾಕರಣೆ’ ಧೋರಣೆಗೆ ಕಾಂಗ್ರೆಸ್ ತೀವ್ರ ಆಕ್ರೋಶ

ದೇಶದಲ್ಲಿ ಉಲ್ಬಣಿಸುತ್ತಿರುವ ವಾಯುಮಾಲಿನ್ಯ ಮತ್ತು ಅದರಿಂದ ಉಂಟಾಗುತ್ತಿರುವ ಅಪಾರ ಪ್ರಾಣಹಾನಿಯ ಕುರಿತು...