ಹಾವೇರಿ | ರಸ್ತೆ ದುರಸ್ತಿ ಕಾಮಗಾರಿ ವೇಳೆ ಭೀಕರ ಅಪಘಾತ: ಇಬ್ಬರು ಮಹಿಳಾ ಕಾರ್ಮಿಕರ ಮೃತ

Date:

ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಕೂಲಿ ಕಾರ್ಮಿಕ ಮಹಿಳೆಯರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಗುಡ್ಡದ ಆನ್ವೇರಿ ಗ್ರಾಮದ ಬಳಿ  ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

- Advertisement -

ಮೃತರನ್ನು ಹಾವೇರಿ ತಾಲ್ಲೂಕಿನ ಬೆಳವಿಗಿ ಗ್ರಾಮದ ಶೈಲವ್ವ ಮೇಕಳಿ (55) ಹಾಗೂ ಪವಿತ್ರಾ ಚೂರಿ (40) ಎಂದು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’:...

ದೇಶಾದ್ಯಂತ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ 'ವೋಟ್‌ ಚೋರಿ' ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಗಾಗಿ ನಡೆದ ಮತದಾರರ ಹಕ್ಕು ಹರಣ, ಮತಗಳತನದ ಎಸ್‌ಐಆರ್‌ ರದ್ದಾಗಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ...

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ,...

ಮನುಷ್ಯತ್ವದ ಮುಖವಾಡ ಕಳಚಿದಾಗಒಳಗಿನ ಮೃಗ ಎಚ್ಚರಗೊಳ್ಳುತ್ತದೆ…ವಿವೇಕದ ಬೆಳಕು ಆರಿದಾಗಕ್ರೋಧವೇ ದಾರಿದೀಪವಾಗುತ್ತದೆ… ಬುದ್ಧಿಯೇ ಅದರ ಆಯುಧವಾದಾಗಸೇಡಿನ ಯೋಚನೆ ಸಂಚಾಗುತ್ತದೆ…ಪರರ ನೋವಿನಲ್ಲಿ ಸುಖ ಕಾಣುವ ಮನಸ್ಸುಕ್ರೌರ್ಯದ ಪರಮಾವಧಿ ತಲುಪುತ್ತದೆ… ಸುತ್ತಲಿನವರ ಮೌನ, ನಿರ್ಲಕ್ಷ್ಯಕೆಲವೊಮ್ಮೆ ಅಪಾಯಕ್ಕೆ ಆಹ್ವಾನವಾಗುತ್ತದೆ…ಕಾಲ ಮಿಂಚುವ ಮುನ್ನ...

ಇಬ್ಬರೂ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಲು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಗುತ್ತಲದಿಂದ ರಾಣೇಬೆನ್ನೂರು ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಕಾರು ಕಾರ್ಮಿಕ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ರಾಣೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಲಿಂಗಸುಗೂರು ಹಿರೇಉಪ್ಪೇರಿ ಗ್ರಾಮದಲ್ಲಿ ಸಾಗವಾನಿ ಮರ ಅಕ್ರಮ ಸಾಗಾಟ ಜಪ್ತಿ

ತಾಲ್ಲೂಕಿನ ಹಿರೇಉಪ್ಪೇರಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದು ದೇವದುರ್ಗ ತಾಲ್ಲೂಕಿನ ಊಟಿ...

ಸಿಂಧನೂರು | ಭೀಕರ ರಸ್ತೆ ಅಪಘಾತ, ಪತಿ-ಪತ್ನಿ ಸಾವು

ನಗರದ ಗಂಗಾವತಿ ರಸ್ತೆಯ ಹೊಸಳ್ಳಿ ಕ್ರಾಸ್ ಬಳಿ ಶನಿವಾರ ತಡರಾತ್ರಿ ಭೀಕರ...

ಸಿಂಧನೂರು | ತಿಡಿಗೋಳದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್‌ ಪ್ರತಿಭಟನೆ

ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ...

ಉಡುಪಿ | ಅಕ್ಕಿ ಬೆಲೆ ಏರಿಕೆ ಬೆನ್ನಲ್ಲೇ ಭತ್ತಕ್ಕೂ ಬೆಲೆ ಹೆಚ್ಚಳಕ್ಕೆ ರೈತರ ಆಗ್ರಹ

ರಾಜ್ಯದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಭತ್ತಕ್ಕೂ ಸೂಕ್ತ...