ಸೈಬರ್ ವಂಚನೆಯ ಮೂಲಕ ಇತರರಿಂದ ಹಣ ವರ್ಗಾಯಿಸಲು ಸ್ನೇಹಿತನ ಖಾತೆಯನ್ನೇ ದುರ್ಬಳಕೆ ಮಾಡಿರುವ ಪ್ರಕರಣದಲ್ಲಿ ಓರ್ವನ ಮೇಲೆ ಮಂಗಳೂರು ಸೆನ್ (CEN) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಹಮ್ಮದ್ ಝುಬೇರ್ ಅಲಿ ಎಂಬುವವರ ದೂರಿನ ಮೇರೆಗೆ ಮಂಗಳೂರಿನ ಅಂಗರಗುಂಡಿ ನಿವಾಸಿ ಅಶ್ವಿರ್ (34) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. 2025ರ ಮಾರ್ಚ್ ತಿಂಗಳಿನಲ್ಲಿ ಅಶ್ವಿರ್ ತನ್ನ ಖಾತ್ ಬ್ಲಾಕ್ ಆಗಿದ್ದು, ವಿದೇಶದಿಂದ ಹಣ ಬರಲು ಇರುವುದರಿಂದ ತನ್ನ ಬ್ಯಾಂಕ್ ಖಾತೆ ನೀಡಿದ್ದಲ್ಲಿ ಅವರು ತನ್ನ ಖಾತೆಗೆ ವರ್ಗಾಯಿಸುತ್ತಾರೆ, ಬಳಿಕ ಆ ಹಣವನ್ನು ನಗದು ರೂಪದಲ್ಲಿ ತೆಗೆದುಕೊಡುವಂತೆ ಝುಬೇರ್ ಅವರಿಗೆ ಅಶ್ವಿರ್ ತಿಳಿಸಿರುತ್ತಾನೆ.
ಮೊದಲು ಝುಬೇರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ನಂತನ ಸ್ನೇಹಿತನೆಂಬ ಕಾರಣಕ್ಕೆ ತನ್ನ ಬ್ಯಾಂಕ್ ಖಾತೆ ವಿವರಗಳನ್ನು ಅಶ್ವಿರ್ ಗೆ ನೀಡಿರುತ್ತಾರೆ. ನಂತರ ಮಾರ್ಚನಲ್ಲೇ ಝುಬೇರ್ ಖಾತೆಗೆ 5,20,000 ರೂ ಆರ್ಟಿಜಿಎಸ್ ಮೂಲಕ ವರ್ಗಾವಣೆಯಾಗಿದ್ದು, ಅಶ್ವಿರ್ ಸ್ಕ್ರೀನ್ಶಾಟ್ ತೋರಿಸಿದ್ದರಿಂದ ಚೆಕ್ ಮೂಲಕ 5,10,000ರೂ ತೆಗೆದುಕೊಟ್ಟಿರುತ್ತಾರೆ.
ನಂತರ ತನ್ನ ಖಾತೆಯ ಮೇಲೆ ಆನ್ಲೈನ್ನಲ್ಲಿ ದೂರುಗಳು ದಾಖಲುಗಿರುವುದರಿಂದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಸೈಬರ್ ವಂಚನೆಯ ಹಣ ವರ್ಗಾವಣೆಯಾಗಿರುವುದಾಗುಯೂ ವಿವಿಧ ರಾಜ್ಯಗಳಲ್ಲಿ ದೂರು ದಾಖಲಾಗಿರುವುದಾಗಿಯೂ ತಿಳಿದು ಬಂದಿದೆ.





