ದಾವಣಗೆರೆ ಜಿಲ್ಲೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು ಭತ್ತ, ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು ₹10.90 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ 3 ಎಕರೆ, ಜರೀಕಟ್ಟೆ ಗ್ರಾಮದಲ್ಲಿ 2.15 ಎಕರೆಯಲ್ಲಿ ಅಡಿಕೆ ಬೆಳೆ ಹಾಳಾಗಿದ್ದು, 1 ಲಕ್ಷ ರೂ. ನಷ್ಟವಾಗಿದೆ. ಗಿರಿಯಾಪುರದಲ್ಲಿ ಜಿ ಎಸ್ ಅಜ್ಜಪ್ಪ ಹಾಗೂ ನಾಗರಾಜಪ್ಪ ಅವರಿಗೆ ಸೇರಿದ ಹತ್ತಾರು ಎಕರೆ ಪ್ರದೇಶದ ಭತ್ತ ನಾಶವಾಗಿದೆ ಎಂದು ವರದಿಯಾಗಿದೆ.
ಹರಿಹರ ತಾಲೂಕು ವ್ಯಾಪ್ತಿಯ ಇಂಗಳಗೊಂದಿ, ಧೂಳೆಹೊಳೆ ಗ್ರಾಮದಲ್ಲಿ 30 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ₹1.80 ಲಕ್ಷ ಹಾನಿಯಾಗಿರುವುದಾಗಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಅಗತ್ಯವಿದೆ 658 ಕಿ.ಮೀ ಒಳಚರಂಡಿ
ಜಗಳೂರು ತಾಲೂಕು ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 2 ಕಚ್ಚಾ ಮನೆ, 15 ಎಕರೆ ಬಾಳೆ, 5 ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನಷ್ಟವಾಗಿದ್ದು, 6 ಲಕ್ಷ ನಷ್ಟವಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 20 ಎಕರೆ ಭತ್ತ ಹಾನಿಯಾಗಿದ್ದು, 2 ಲಕ್ಷ ರೂ. ನಷ್ಟವಾಗಿದೆ. ಚನ್ನಗಿರಿ ತಾಲೂಕು ವ್ಯಾಪ್ತಿಯಲ್ಲಿ 1 ಎಕರೆ ಬಾಳೆ ಹಾನಿಯಾಗಿದ್ದು, ₹10,000 ನಷ್ಟವಾಗಿದೆ.
ಹರಿಹರ ತಾಲೂಕಿನಲ್ಲಿ 14.5 ಮಿ.ಮೀ, ಹೊನ್ನಾಳಿಯಲ್ಲಿ 13.1 ಮಿ.ಮೀ. ದಾವಣಗೆರೆಯಲ್ಲಿ 3 ಮಿ.ಮೀ, ನ್ಯಾಮತಿಯಲ್ಲಿ 12.1 ಮಿ.ಮೀ, ಜಗಳೂರಿನಲ್ಲಿ 5 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.