ದಾವಣಗೆರೆ | ವೀರಶೈವ ಲಿಂಗಾಯತ ಸಮಾಜ ಒಡೆಯಲು ಬಿಡುವುದಿಲ್ಲ: ಶಾಮನೂರು ಶಿವಶಂಕರಪ್ಪ

Date:

ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಗಟ್ಟಿಯಾದ ನಿಲುವಿನಿಂದ ಸಮಾಜದ ವಿಘಟನೆಗೆ ಅವಕಾಶ ನೀಡಿಲ್ಲ. ಇನ್ನು ಮುಂದೆಯೂ ನೀಡುವುದಿಲ್ಲ ಎಂದು ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಭಯ ನೀಡಿದರು.

ದಾವಣಗೆರೆ ನಗರದ ಎಂಬಿಎಂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಮಾತನಾಡಿದರು.

“ಹಲವಾರು ದಶಕಗಳಿಂದ ವೀರಶೈವ ಲಿಂಗಾಯತ ಸಮಾಜ ವಿಘಟಿಸುವ ಹಲವಾರು ಪ್ರಯತ್ನಗಳು ನಡೆದಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇಂದಿನ ಕಂಪ್ಯೂಟರ್ ಯುಗದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಯುವ ಪೀಳಿಗೆಗೆ ನಮ್ಮ ಧರ್ಮದ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ–ವಿಚಾರಗಳನ್ನು ತಿಳಿಸಿಕೊಡಲು ಅಧಿವೇಶನದಲ್ಲಿ ಭಾಗವಹಿಸಿರುವ ನಮ್ಮ ಸಮಾಜದ ಹಿರಿಯರು, ಗುರುಗಳು ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳಲು ಮಾರ್ಗದರ್ಶನ ನೀಡಬೇಕೆಂದು ಆಶಿಸುತ್ತೇನೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಐತಿಹಾಸಿಕ 24ನೇ ಮಹಾ ಅಧಿವೇಶನದಲ್ಲಿ ಸಮಾಜದ ಮುಂದಿನ ಭವಿಷ್ಯದ ಅಭಿವೃದ್ಧಿಗಾಗಿ, ಸಮಾಜದ ಉನ್ನತಿಗಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಿದೆ. ಅವುಗಳನ್ನು ಸಮಾರೋಪ ಸಮಾರಂಭಕ್ಕೂ ಮುನ್ನಾ ಮಂಡಿಸಲಿದ್ದೇವೆ” ಎಂದರು.

“ಗೋಷ್ಠಿಗಳಲ್ಲಿನ ಚರ್ಚೆಗಳು ಹಲವು ಹೊಸ ಹೊಸ ಆಲೋಚನೆಗಳು, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಹೊರಹೊಮ್ಮುವ ಆಶಯ ನನ್ನದಾಗಿದೆ. ಇಂದಿನ ಯುವ ಪೀಳಿಗೆಗೆ ಮತ್ತು ಮುಂಬರುವ ಪೀಳಿಗೆಗಳಿಗೆ ಈ ಅಧಿವೇಶನದಲ್ಲಿ ಹೊರಹೊಮ್ಮುವ ಪರಿಹಾರಗಳು ದಾರಿದೀಪವಾಗಲಿ” ಎಂದು ಶಾಮನೂರು ಶಿವಶಂಕರಪ್ಪ ಆಶಯ ವ್ಯಕ್ತಪಡಿಸಿದರು.

“ಸಮಾಜದ ಸಂಘಟನೆಯ ಸಲುವಾಗಿ 1904ರಲ್ಲಿ ಪರಮಪೂಜ್ಯ ಲಿಂಗೈಕ್ಯ ಪೂಜ್ಯ ಹಾನಗಲ್ ಕುಮಾರಸ್ವಾಮಿ ಶ್ರೀಗಳ ದೂರದೃಷ್ಟಿಯಿಂದ ಪ್ರಾರಂಭಗೊಂಡ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆಗೆ 119 ವರ್ಷಗಳ ಸೇವಾ ಇತಿಹಾಸವಿದೆ. ಮಹಾಸಭೆಯು ಈವರೆಗೆ 22 ಮಂದಿ ಅಧ್ಯಕ್ಷರು ಸೇವೆಯನ್ನು ಪಡೆದಿದ್ದು, 23ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾಗಿದೆ. ಮಹಾಸಭೆಯ 24ನೇ ಮಹಾ ಅಧಿವೇಶನವು ನಡೆಯುತ್ತಿದ್ದು, 1917 ರ ಡಿಸೆಂಬರ್ 27, 28, 29 ಮತ್ತು 30 ರಂದು ಒಟ್ಟು 4 ದಿನಗಳ ಕಾಲ 8ನೇ ಅಧಿವೇಶನವು ಸರ್ ಕೆ ಪಿ ಪುಟ್ಟಣ್ಣ ಚೆಟ್ಟಿಯವರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ನೆರವೇರಿತ್ತು. 106 ವರ್ಷಗಳ ನಂತರ ಇಂದು ಮಹಾಸಭೆಯ 24ನೇ ಮಹಾ ಅಧಿವೇಶನವು ನನ್ನ ಕರ್ಮಭೂಮಿ, ಜನ್ಮಭೂಮಿ, ಬೆಣ್ಣೆನಗರಿಯೆಂದೇ ಖ್ಯಾತಿ ಹೊಂದಿರುವ ದಾವಣಗೆರೆಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ನನ್ನ ಸೌಭಾಗ್ಯ” ಎಂದರು.

“ಅಂದು ನಡೆದ ಮಹಾ ಅಧಿವೇಶನದಲ್ಲಿ ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಧಿವೇಶನ ನಡೆಸುವ ಸಲುವಾಗಿ ಚಿರಸ್ಥಾಯಿ ನಿಧಿ ಸ್ಥಾಪಿಸಿದರು. ಈ ಸಂದರ್ಭದಲ್ಲಿ ಪೂಜ್ಯರನ್ನೂ ಕೂಡ ಸ್ಮರಿಸುವುದು ನನ್ನ ಆದ್ಯ ಕರ್ತವ್ಯ. ಕಾರಣಾಂತರಗಳಿಂದ ಎರಡು ಸಲ ಮಹಾ ಅಧಿವೇಶನವನ್ನು ಮುಂದೂಡಲಾಗಿತ್ತು. ಈ ಮಹಾ ಆಧಿವೇಶನ ನಡೆಸಲು ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ” ಎಂದು ಸ್ಮರಿಸಿದರು.

ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಸಿರಿಗೆರೆ ಶ್ರೀಗಳು, ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, “ಆನ್‌ಲೈನ್ ಮೂಲಕ ಜಾತಿಗಣತಿ ನಡೆಯಲಿ. ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ಇದು ಕಷ್ಟವಾಗದು ಎಂಬುದು ತಮ್ಮ ಭಾವನೆ. ಆನ್‌ಲೈನ್ ಗಣತಿ ಮಾಡಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಿ. ಆ ಬಳಿಕ ಸರ್ಕಾರ ಸರಿಯಾಗಿದ್ದರೆ ವರದಿ ಸ್ವೀಕಾರ ಮಾಡಲಿ” ಎಂದು ಶ್ರೀಗಳು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವೀರಶೈವ ಸಮಾಜಕ್ಕೆ ಹೊರಗಿನವರಿಗಿಂತ ಒಳಗಿನ ಶತ್ರುಗಳೇ ಹೆಚ್ಚು: ಸಿರಿಗೆರೆ ತರಳಬಾಳು ಶ್ರೀಗಳು

“ಸಮಾಜ ಸಂಘಟನೆ ಬಯಸುತ್ತಿದೆ. ಸಂಘಟನೆ ಒಡೆದವರು ಯಾರು? 1914-15ನೇ ಸಾಲಿನಲ್ಲಿ ಅಕ್ಷರಸ್ಥರ ಸಂಖ್ಯೆ ಅಧ್ಯಯನ ಮಾಡಲಾಗಿದೆ. ನೂರು ಜನಕ್ಕೆ 9 ಮಂದಿ ಕನ್ನಡ ಅಕ್ಷರಸ್ಥರು, ಹತ್ತು ಸಾವಿರಕ್ಕೆ ಇಂಗ್ಲೀಷ್ ಬಲ್ಲವರು ಹತ್ತು ಮಂದಿ ವೀರಶೈವ ಲಿಂಗಾಯತ ಸಮುದಾಯದವರಿದ್ದರು. ಒಕ್ಕಲಿಗರಲ್ಲಿ ಕನ್ನಡ ಬಲ್ಲವರು ನೂರಕ್ಕೆ ಮೂವರು, ಹತ್ತು ಸಾವಿರಕ್ಕೆ ಇಂಗ್ಲೀಷ್ ಬಲ್ಲವರು ಆರು ಮಂದಿ ಇದ್ದರು. ಕ್ರೈಸ್ತರಲ್ಲಿ ನೂರಕ್ಕೆ 25 ಮಂದಿಗೆ ಕನ್ನಡ, ಹತ್ತು ಸಾವಿರಕ್ಕೆ 900 ಕ್ರೈಸ್ತರಿಗೆ ಇಂಗ್ಲೀಷ್ ಬರುತ್ತಿತ್ತು. ಆದರೆ, ಈಗ ಇದೇ ಗಣತಿ ಮಾಡಿದರೆ ವೀರಶೈವ ಲಿಂಗಾಯತ ಸಮುದಾಯ ಎಷ್ಟು ಸಾಧಿಸಿದೆ ಎಂಬುದು ಗೊತ್ತಾಗುತ್ತದೆ” ಎಂದು ಉದಾಹರಣೆ ಸಹಿತ ಸಿರಿಗೆರೆ ಶ್ರೀಗಳು ವಿವರಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | 29ರಂದು ಚಡಚಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಜಾಗೃತಿ ಸಭೆ

ವಿಜಯಪುರ ಜಿಲ್ಲೆಯ ಚಡಚಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಫೆಬ್ರವರಿ 29ರಂದು ಜಾಗೃತಿ...

ಬಾಗಲಕೋಟೆ | ಶೇ.60ರಷ್ಟು ಕನ್ನಡ ಬಳಸದ, ಅನ್ಯ ಭಾಷೆಯ ನಾಮಫಲಕಗಳ ತೆರವಿಗೆ ಆಗ್ರಹ

ರಾಜ್ಯ ಸರ್ಕಾರದ ಆದೇಶದಂತೆ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸದ, ಅನ್ಯ ಭಾಷೆಯ...

ಕುಡಿಯುವ ನೀರು ಕೊಡದೆ ಯಾವ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ; ಮೋಹನ್ ದಾಸರಿ ಪ್ರಶ್ನೆ

ಟ್ಯಾಂಕರ್ ಮಾಫಿಯಾದಲ್ಲಿ ಕಾರ್ಪೊರೇಟರ್‌ಗಳು, ಮಾಜಿ ಕಾರ್ಪೊರೇಟರ್‌ಗಳು, ಶಾಸಕರ ಸಂಬಂಧಿಗಳು ಮತ್ತು ಶಾಸಕರ...

ಬಿಎಂಟಿಸಿ | 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಖಾಲಿ ಇರುವ ಸುಮಾರು 2,500...