ದಾವಣಗೆರೆ | ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಟಿಕೆಟ್ ನಮ್ಮ ಸಮಾಜದ ಹಕ್ಕು: ಮುಸ್ಲಿಂ ಮುಖಂಡರ ತಿರುಗೇಟು

Date:

“ಕೆಲ ದಿನಗಳ ಹಿಂದೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಕೆಲವು ಜನ ಮಾಜಿ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಕೇಳುತ್ತಿರುವ ಬಗ್ಗೆ ತಪ್ಪು ಅಭಿಪ್ರಾಯ ಸೃಷ್ಟಿಸುವಂತೆ ಮಾತನಾಡಿರುವುದನ್ನು ಖಂಡಿಸಿ ಮುಸ್ಲಿಂ ಸಮಾಜದ ಮುಖಂಡರು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಪಕ್ಷದ ಟಿಕೆಟ್ ಕೇಳುವುದು ನಮ್ಮ ಸಮಾಜದ ಹಕ್ಕು” ಎಂದು ತಿರುಗೇಟು ನೀಡಿದರು.‌

- Advertisement -

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು “2026, ಫೆಬ್ರವರಿ 17ರಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಕೆಲವು ಜನ ಮಾಜಿ ಸದಸ್ಯರು ಪತ್ರಿಕಾಗೋಷ್ಠಿ ಮಾಡಿರುವ ಕೆಲವು ತಪ್ಪು ಅಭಿಪ್ರಾಯದ ಸೃಷ್ಟಿಕರಣ ನೀಡಿರುವುದು ಮತ್ತು ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ವಿಚಾರ ಎಲ್ಲರ ಗಮನಕ್ಕೆ ತರಬಯಸುತ್ತೇವೆ.‌ ದಿವಂಗತ ಶ್ರೀ ಶಾಮನೂರು ಶಿವಶಂಕರಪ್ಪರವರಿಂದ ತೆರೆವಾಗಿರುವ ಸ್ಥಾನಕ್ಕೆ ನಡೆಯುವ ಉಪ-ಚುನಾವಣೆಗೆ ಅವರ ಕುಟುಂಬಕ್ಕೆ ಸ್ಥಾನ ನೀಡಬೇಕೆಂದು ಒತ್ತಾಯಿಸಿರುವುದು ಕುಟುಂಬ ರಾಜಕಾರಣಕ್ಕೆ ನಾಂದಿಯಾಗುತ್ತೆ. ಹಾಗಾಗಿ ಕುಟುಂಬ ರಾಜಕರಣ ಬಿಟ್ಟು ಬೇರೆಯಾವರಿಗೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...
1003724428

“ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಜನ ನಿಷ್ಠಾವಂತ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬೇಡಿಕೆ ಸಲ್ಲಿಸುತ್ತಿರುವುದು ನಿಮ್ಮ ಅಭಿಪ್ರಾಯದಲ್ಲಿ ತಪ್ಪೇ? ತಾವು ಪಕ್ಷದ ಹೈಕಮಾಂಡ್ ಯಾರಿಗೆ ಪಕ್ಷದ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಹೇಳಿದ್ದೀರಿ ಸರಿ. ಆದರೆ ನೀವು ಒತ್ತಾಯಪೂರ್ವಕವಾಗಿ ಒಂದು ಕುಟುಂಬಕ್ಕೆ ಎಂದಿರುವುದು ತಪ್ಪು. ನಿಷ್ಠಾವಂತ ಕಾರ್ಯಕರ್ತರನ್ನು ಅಪಮಾನ ಮಾಡಿದ್ದೀರಿ. ಹಾಗಾದರೆ ಕಾಂಗ್ರೇಸ್ ಪಕ್ಷದ ಟಿಕೆಟ್ ಕೇಳುವುದೇ ತಪ್ಪಾ? ಎಂದು ಪ್ರಶ್ನಿಸಿದರು.

“ಯಾವುದೇ ಪಕ್ಷದ ಟಿಕೆಟ್ ನೀಡುವುದು ಆಸ್ಥಿತೆಯ ಆಧಾರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಸದಸ್ಯರಾಗಿ ತಾವು ಮೇಯರ್ ಆಗಿರುವುದು ನೆನಪಿದೆಯಲ್ಲವೇ, ಸಮುದಾಯದ ಆಧಾರದ ಮೇಲೆಯೇ ಎಲ್ಲಾ ಪಕ್ಷಗಳು ಟಿಕೆಟ್ ಕೊಡುವುದು. ಯಾರಿಗಾದರೂ ಮುಸ್ಲಿಂರಿಗೆ ಸಮುದಾಯ ಬಿಟ್ಟು ಬೇರೆ ಕಡೆಗೆ ಟಿಕೆಟ್ ನೀಡಿರುವ ಒಂದೇ ಒಂದು ಉದಾಹರಣೆ ಇದೆಯಾ ಮಾನ್ಯರೇ. ನೀವು ತಿಳಿಸಿರುವ ಹಾಗೆ 1978ರಿಂದಲೂ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿರುವ ಹಾಗೇ ಜನರಲ್ಲಿ ಬಿಂಬಿಸಿದ್ದೀರಿ. ಸ್ಪಷ್ಟವಾಗಿ ಸುಳ್ಳಿನ ಹೇಳಿಕೆ ನೀಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“1978ರ ಖಾಜಾಮೂಹಿದ್ದಿನ್, 1983 ಎಚ್.ಇಕ್ಬಾಲ್ ಸಾಬ್ ಪಕ್ಷೇತರರು. 1989ರಲ್ಲಿ ಮೊಹಿದ್ದೀನ್ ಸಾಬ್ ಜನತಾಪಕ್ಷದಿಂದ, 1994 ಕೆ.ಎಸ್. ಅತಾವುಲ್ಲಾ ಖಾನ್. ಕೆಸಿಪಿ ಪಕ್ಷ, 1999ರಲ್ಲಿ ಅಮಾನುಲ್ಲಾ ಖಾನ ಪಕ್ಷೇತರರು. ಹಾಗೆಯೇ ದಾವಣಗೆರೆ ದಕ್ಷಿಣ ಕ್ಷೇತ್ರ 2008 ಜೆ.ಅಮಾನುವುಲ್ಲಾ ಖಾನ ಜೆಡಿ(ಎಸ್)ನಿಂದ ಸ್ಪರ್ದಿಸಿರುವುದು ಬೇರೆ ಪಕ್ಷದ ವಿಷಯವಾಗಿದೆ. ನೀವು ಜನರಲ್ಲಿ ತಪ್ಪು ಅಭಿಪಾಯ ಸೃಷ್ಟಸಿ ಕಾಂಗ್ರೆಸ್‌(ಐ) ಪಕ್ಷದಿಂದಲೇ ಇವರು ಸ್ಪರ್ಧಿಸಿರುವ ಹಾಗೆ ಬಿಂಬಿಸಿರುತ್ತೀರಿ. ಆದರೆ ನಮ್ಮ ಸಮಾಜದಲ್ಲಿ ಯಾವುದೇ ಧರ್ಮ, ಜಾತಿ, ಸಮುದಾಯಕ್ಕೆ ಮಣೆ ಹಾಕದೆ ಇವರನ್ನು ಬಿಟ್ಟು ಈ ಎಲ್ಲಾ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಪಕ್ಷ ನಿಷ್ಟೆ ತೋರಿದ್ದೆವೇ ವಿನಃ ಸ್ವಾಮಿ ನಿಷ್ಟೆ ಅಲ್ಲ ಎಂಬುವುದು ನೆನೆಪಿರಲಿ” ಎಂದು ನೆನಪಿಸಿದರು.

“ನಾವು ಎಲ್ಲ ಸಮಾಜದ ಹಿಂದೂ ಭಾಂದವರ ಜೊತೆಯಲ್ಲಿ ಪಕ್ಷದ ಸಿದ್ಧಾಂತಕ್ಕೆ ಹೊಂದಿಗೊಂಡಿರುವ ವ್ಯಕ್ತಿಯನ್ನ ಮುಂದಿನ ಎಂ.ಎಲ್.ಎ ಆಗಿ ನಮ್ಮ ಹಕ್ಕನ್ನು ಕೇಳುವುದು ತಪ್ಪೇ? ಪಕ್ಷದ ಟಿಕೆಟ್ ನೀಡುವುದು ಕೆಪಿಸಿಸಿ ಮತ್ತು ಎಐಸಿಸಿ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಟಿಕೆಟ್ ಕೇಳುವುದು ನಮ್ಮ ಹಕ್ಕು, ನೀವು ಏಕೆ ಪತ್ರಿಕಾಗೋಷ್ಠಿಯಲ್ಲಿ ಕೇಳುತ್ತಿರಿ? ನೀವು ಹೋಗಿ ದೆಹಲಿಯಲ್ಲಿ ಎಐಸಿಸಿಯಲ್ಲಿ ಕೇಳಿ ಸ್ವಾಮಿ, ನಮ್ಮ ಶಕ್ತಿ ಜನ, ಪಕ್ಷದ ಕಾರ್ಯಕರ್ತರು, ಎಲ್ಲ ಸಮಾಜದ ಮುಖಂಡರು. ಅವರ ಬಳಿ ಕೇಳಿ ಅವರ ಆಶೀರ್ವಾದ ಪಡೆದು ಮುಂದಿನ ದಿನದಲ್ಲಿ ಕೆಪಿಸಿಸಿ, ಎಐಸಿಸಿ ಎಲ್ಲಾ ಪಕ್ಷದ ಮುಖಂಡರಲ್ಲಿ ಮನವಿ ಸಲ್ಲಿಸುವುದು ಹಾಗೂ ಹಕ್ಕು ಮಂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಪಕ್ಷದ ನಿರ್ದಾರಕ್ಕೆ ನಾವು ಬದ್ದವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಕಳೆದ ಚುನಾವಣೆಯ ಫಲಿತಾಂಶದ ಒಂದು ಪತ್ರ ಇದರೊಂದಿಗೆ ನೀಡಿರುತ್ತೇವೆ. ತಾವೇ ತೀರ್ಮಾನಿಸಿ ಮಿತ್ರರೇ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ ಎಂದು ತಿಳಿದು ಮುಂದೆ ಹೆಜ್ಜೆಯನ್ನು ಇಡುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? http://ದಾವಣಗೆರೆ | ಸಾಮಾಜಿಕ ನ್ಯಾಯದಡಿ ಕಾಂಗ್ರೆಸ್ ಟಿಕೆಟ್ ನಮ್ಮ ಸಮಾಜದ ಹಕ್ಕು: ಮುಸ್ಲಿಂ ಮುಖಂಡರ ತಿರುಗೇಟು

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಅಬ್ದುಲ್ ಘನಿ ತಾಹಿರ್, ಮಕ್ಸೂದ್ಅಲಿಖಾನ್, ಸೈಯದ್ ಶಾಫಿ ಅಹಮದ್, ಎಸ್ ಕೆ ಅಮ್ಜದುಲ್ಲಾ, ನೂರ್ ಅಹ್ಮದ್, ಇನಾಯತ್ ಅಲಿ ಖಾನ್, ಖಾಸಿಂ ಸಾಬ್,‌ ಮೊಹಮದ್ ಸಿರಾಜ್, ಷಾ ನವಾಜ್ ಖಾನ್, ರಿಯಾಜ್ ಅಹ್ಮದ್ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಫಾರ್ಮ್‌-7 ವಿವಾದ | ಆರೋಪಿಗಳ ರಕ್ಷಣೆಗೆ ನಿಂತರೇ ಎಚ್‌ಡಿಕೆ?

ರಾಜ್ಯದಲ್ಲಿ ಸದ್ಯ ಭಾರೀ ಗದ್ದಲ ಎಬ್ಬಿಸಿರುವ SIR ಮತ್ತು ದಂಡು ದಂಡಾಗಿ...

ರಾಜ್ಯದಲ್ಲಿ ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ವಾಪಸಾತಿಗೆ ಹೆಚ್ಚಿದ ಒತ್ತಡ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ...

SIR | ‘ಫಾರ್ಮ್-7’ ಅಕ್ರಮ: ಕರ್ನಾಟಕದಲ್ಲಿ ಬಿಜೆಪಿ ಎಲ್ಲೆಲ್ಲಿ ಏನೇನು ಮಾಡಿತು? ಸಮಗ್ರ ವರದಿ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಈ ಕಡೆಯ...