ದಾವಣಗೆರೆ | ಮಾದಕ ವಸ್ತು ದಂಧೆ ಆರೋಪಿ ಬಳ್ಳಾರಿ ಜೈಲಿಗೆ: ನಿಯಂತ್ರಣಕ್ಕೆ ಕ್ರಮ ಎಂದ ಪೊಲೀಸ್ ಇಲಾಖೆ

Date:

ಪೂರ್ವ ವಲಯದಲ್ಲಿ ಇದೇ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ದಾವಣಗೆರೆಯಿಂದ ಬಳ್ಳಾರಿ ಜೈಲಿಗೆ ರವಾನೆ ಮಾಡಿದ್ದು, ಪೂರ್ವ ವಲಯದ ಜಿಲ್ಲೆಗಳಲ್ಲಿ ಅಕ್ರಮ ಮಾದಕ ವಸ್ತುಗಳ ಸಂಗ್ರಹ, ಸಾಗಾಟ ಹಾಗೂ ಮಾರಾಟವನ್ನು ಕಟ್ಟು ನಿಟ್ಟಾಗಿ ತಡೆಗಟ್ಟುವ ಉದ್ದೇಶದಿಂದ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ರವಿಕಾಂತೇಗೌಡ, ಬಿ.ಆರ್. ಐಪಿಎಸ್ ಇವರ ನಿರ್ದೇಶನದಂತೆ ಈ ಕ್ರಮ ಜರುಗಿಸಿದ್ದು, ಪೂರ್ವ ವಲಯದಲ್ಲಿಯೇ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೈಗೊಂಡ ಮೊದಲ ಪ್ರಕರಣವಾಗಿದೆ.

- Advertisement -

ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಸಂಗ್ರಹ, ಸಾಗಾಟ ಹಾಗೂ ಮಾರಾಟ ನಡೆಸುತ್ತಿದ್ದ ಆರೋಪಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂತೇಬೆನ್ನೂರು ಗ್ರಾಮ ನಿವಾಸಿ ಜಾಕೀರ್ (55 ವರ್ಷ) ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ–1988 ಕಲಂ 3(1) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...
1003780041

ನಿಷೇಧಿತ ಮಾದಕ ವಸ್ತುಗಳ ಅಕ್ರಮ ಚಟುವಟಿಕೆಯನ್ನು ಜಾಕೀರ್ ನಿರಂತರವಾಗಿ ಮುಂದುವರೆಸುತ್ತಿರುವುದು ಹಾಗೂ ಮುಂದೆಯೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ, PIಖಿ ಓಆPS ಕಾಯ್ದೆ 1988 ಕಲಂ 2(ಇ) ಅನ್ವಯ ಆರೋಪಗಳು ದೃಢಪಟ್ಟಿವೆ.

ಆರೋಪಿ ಜಾಕೀರ್ ವಿರುದ್ಧ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಅಕ್ರಮ ಸಂಗ್ರಹ, ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು 06 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 04 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯ ದಂಡ ಹಾಗೂ ಶಿಕ್ಷೆ ವಿಧಿಸಿದ್ದು, ಉಳಿದ 02 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ, ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ ದಾವಣಗೆರೆ ಇವರ ಆದೇಶದಂತೆ, ಜಾಕೀರ್ ಅನ್ನು ದಿನಾಂಕ 25/02/2026ರಂದು ಬಳ್ಳಾರಿ ಕಾರಾಗೃಹಕ್ಕೆ ರವಾನಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತರಳಬಾಳು ಬಡಾವಣೆಯಲ್ಲಿ ಶಿವಸಂಚಾರ-25 ನಾಟಕೋತ್ಸವ ಪ್ರದರ್ಶನ


ಆರೋಪಿತನನ್ನು PIಖಿ ಓಆPS ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ರವಾನಿಸುವಲ್ಲಿ ಯಶಸ್ವಿಯಾದ ಸಂತೆಬೆನ್ನೂರು ಸಿಪಿಐ ಶ್ರೀಮತಿ ಮಲ್ಲಮ್ಮ ಚೌಬೆ, ಪಿಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರು ಪ್ರಶಂಸಿಸಿದ್ದಾರೆ.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಯ ದಿನ: ಭಯಮುಕ್ತ ಬದುಕಿನ ಭರವಸೆಗೆ ನಾಂದಿ

ವೈದ್ಯಕೀಯ ವೃತ್ತಿಯನ್ನು ಸಮಾಜದಲ್ಲಿ ಅತ್ಯಂತ ಪವಿತ್ರವಾದ ಸೇವೆ ಎಂದು ಪರಿಗಣಿಸಲಾಗುತ್ತದೆ. ರೋಗಿಗಳ...

ಕೆ ಎಸ್ ಬಸವಂತಪ್ಪ ಹೋರಾಟದ ಹೆಜ್ಜೆಗುರುತು: ಪೌರಕಾರ್ಮಿಕರ ಮಗನಿಂದ ಸಚಿವ ಸ್ಥಾನದವರೆಗೆ

ಪೌರಕಾರ್ಮಿಕ ಕುಟುಂಬದಿಂದ ಆರಂಭವಾದ ಬದುಕಿನ ಪಯಣ ಇದೀಗ ರಾಜ್ಯ ಸಚಿವ ಸಂಪುಟದವರೆಗೆ...

ದಾವಣಗೆರೆ | ಜಾತಿ ದೌರ್ಜನ್ಯ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹಲ್ಲೆ

ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಐವರು ದಲಿತ ಯುವಕರನ್ನು ಪ್ರಬಲ ಜಾತಿಯ ಜಾತಿವಾದಿಗಳು...

ದಾವಣಗೆರೆ | ಕಾವೇರಿ ನಿಯಂತ್ರಣ ಸಮಿತಿ ನಿರ್ಧಾರ ತಿರಸ್ಕರಿಸಿ, ರೈತರ ಹಿತ ಕಾಯಲು ರೈತಸಂಘದ ಆಗ್ರಹ

ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯೂಆರ್‌ಸಿ) ನಿರ್ಧಾರ ತಿರಸ್ಕರಿಸಿ ಕಾವೇರಿ...