ದಾವಣಗೆರೆ | ಸಮಾಜವಾದಿ ಸಮಾಜ ನಿರ್ಮಾಣಕ್ಕೆ ರಷ್ಯಾ ಕ್ರಾಂತಿ ಪ್ರೇರಣೆ: ಪಿ ಷಣ್ಮುಖಸ್ವಾಮಿ

Date:

ಜಗತ್ತಿನ ಬಹುತೇಕ ದೇಶಗಳ ಸಮಾಜವಾದಿ ಸಮಾಜ ನಿರ್ಮಾಣಕ್ಕೆ ರಷ್ಯಾ ದೇಶ ಪ್ರೇರಣೆಯಾಗಿದೆ ಎಂದು ಭಾರತೀಯ ಜನಕಲಾ ಸಮಿತಿ (ಇಪ್ಟಾ) ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಷಣ್ಮುಖಸ್ವಾಮಿ ಹೇಳಿದರು.

- Advertisement -

ದಾವಣಗೆರೆಯ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ನಡೆದ, ʻಪ್ರಪಂಚದ ವಿಮೋಚನಾ ಚಳುವಳಿ ಮತ್ತು ದೇಶದ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಪಾತ್ರ, ಎನ್ನುವ ವಿಚಾರ ಸಂಕಿರಣ ಕುರಿತು ಮಾತನಾಡಿದ ಪಿ. ಷಣ್ಮುಖಸ್ವಾಮಿ, “ನಾವುಗಳು ಇಂದು ಕ್ರಾಂತಿ ದಿನ ಆಚರಣೆ ಮಾಡುವುದರ ಮೂಲಕ ಜಗತ್ತಿನ ಶೋಷಿತ ಜನರಿಗೆ ಪ್ರೇರಣೆಯಾದ ಕ್ರಾಂತಿಯ ಮೂಲಕ ರಷ್ಯಾ ದೇಶದ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಿ ಸ್ವತಂತ್ರವನ್ನಾಗಿಸಿದ ಕಾಮ್ರೇಡ್ ಲೆನಿನ್‌ರನ್ನು ನೆನೆಯಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

“ಕಾರ್ಖಾನೆಗಳಲ್ಲಿ ಮತ್ತು ಜಮೀನುದಾರರ ಅಡಿಯಾಳುಗಳಾಗಿ ಕೆಲಸ ನಿರ್ವಹಿಸುತ್ತಿದ್ದ ದುಡಿಯುವ ಜನರಿಗೆ 8 ತಾಸು ಕೆಲಸ, ಸಂಘಟನೆಗೆ ಅವಕಾಶ, ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡಬೇಕೆನ್ನುವ ನಿಟ್ಟಿನಲ್ಲಿ ಭೂಗತವಾಗಿ ಸಂಘಟನಾ ಕೆಲಸ ನಿರ್ವಹಿಸಿ ಜನರನ್ನು ಜಾಗೃತಿ ಗೊಳಿಸಿ ಜಗತ್ತಿಗೆ ಮಾದರಿಯಾದವರು ಲೆನಿನ್ ರವರು. ಪ್ರಜೆಗಳ ವಿರೋಧಿಗಳಾಗಿ ಆಡಳಿತ ನಡೆಸುತ್ತಿದ್ದ ರಾಜ ಮಹಾರಾಜರುಗಳ ದುರಾಡಳಿತವನ್ನು ಕೊನೆಗಾಣಿಸಿ ಪ್ರಜಾತಂತ್ರ ವ್ಯವಸ್ಥೆ ನಿರ್ಮಿಸುವಲ್ಲಿ ರಷ್ಯಾ ನಮಗೆ ಮಾದರಿಯಾಗಿತ್ತು” ಎಂದು ಹೇಳಿದರು.

“ಜಗತ್ತಿನ ಹಲವಾರು ದೇಶಗಳಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಕಮ್ಯುನಿಷ್ಟರು ಎಷ್ಟೇ ಹೋರಾಟ ಮಾಡಿ ಅವರನ್ನು ಹಿಮ್ಮೆಟ್ಟಿಸಿದರೂ ,ಅವರುಗಳು ಬಲಪಂಥೀಯ ರಾಜಕೀಯ ಪಕ್ಷಗಳ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಇದರಿಂದ ಜನರು ಜಾಗೃತರಾಗಬೇಕು” ಎಂದು ಕರೆ ನೀಡಿದರು.

ಪಕ್ಷದ ಜಿಲ್ಲಾ ಮಂಡಳಿ ಸಹಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಪ್ರಾಸ್ತಾವಿಕ ಮಾತನಾಡಿ, ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಿಪಿಐ ಹಿರಿಯ ಮುಖಂಡರೂ,ಎಸ್ ಎಸ್ ಪಿ ಟ್ರಸ್ಟ್ ಖಜಾಂಚಿಗಳು ಆದ ಕಾಂ ಜಿ ಯಲ್ಲಪ್ಪ ರವರು ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್, ಜಿಲ್ಲಾ ಖಜಾಂಚಿ ಕೆರನಹಳ್ಳಿ ರಾಜು, ಮುಖಂಡರುಗಳಾದ ಹೆಚ್ ಕೆ ಕೊಟ್ರಪ್ಪ , ಕಾಂ ಕಲಿಗಾರ ರಫಿಉಲ್ಲಾ,ಗೊಲ್ಲರಹಳ್ಳಿ ತಿಪ್ಪೇಸ್ವಾಮಿ, ಸರೋಜಾ ,ಐರಣಿ ಚಂದ್ರು, ಹಾಲಮ್ಮ ,ಎಸ್ ಎಸ್ ಮಲ್ಲಮ್ಮ ಸೇರಿದಂತೆ ಇತರರು ಉಪಸ್ಥಿತಿ ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಸಿಯೂಟಕ್ಕೂ ಖಾಸಗೀಕರಣದ ಬಿಸಿ! ಕೆಲಸ ಕಸಿಯುವ ಹುನ್ನಾರ ವಿರೋಧಿಸಿ ಪ್ರತಿಭಟನೆ

ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸಿ, ಎನ್‌ಜಿಓ ಖಾಸಗಿ ಸಂಘ ಸಂಸ್ಥೆಗಳಿಗೆ...

ಧಾರವಾಡ | ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು: ಡಾ. ಬಿ.ಎಸ್. ಮಾಳವಾಡ

"ಕೆಎಲ್ಇ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಅಂತಹ ಮಹನೀಯರ...

ತೆಲಂಗಾಣ | ಗಿಗ್ ಕಾರ್ಮಿಕರಿಗೆ ₹15 ಲಕ್ಷ ವಿಮೆ, ವೈ-ಫೈ ವಿಶ್ರಾಂತಿ ವಲಯಕ್ಕೆ ರಾಹುಲ್ ಚಾಲನೆ!

ತೆಲಂಗಾಣ ಸರ್ಕಾರ ಜಾರಿಗೆ ತಂದಿರುವ ಗಿಗ್ ಕಾರ್ಮಿಕರ ಕಲ್ಯಾಣ ಕಾಯ್ದೆಯನ್ನು ಕಾಂಗ್ರೆಸ್...

ಧಾರವಾಡ | ತಂದೆ-ತಾಯಿ, ಶಿಕ್ಷಕರನ್ನು ಗೌರವದಿಂದ ಕಾಣಬೇಕು: ಅಧ್ಯಕ್ಷ ಗೋಪಾಲ್ ದೊಡ್ಡಮನಿ

"ಮಕ್ಕಳಾದವರು ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಉತ್ತಮ ಶಿಕ್ಷಣ ಪಡೆದು...