ಹಾಸನ | ಜನವಸತಿ ಪ್ರದೇಶದಿಂದ ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

Date:

  • 70 ವರ್ಷಗಳಿಂದ ಮಳಲಿ ಗ್ರಾಮದಲ್ಲಿ ವಾಸವಿರುವ 80 ಕಟುಂಬಗಳು
  • ಮನೆಗಳಿಂದ ಕೆಲವೇ ಮೀಟರ್‌ ದೂರದಲ್ಲಿ ಘಟಕಕ್ಕೆ 11 ಎಕರೆ ಮಂಜೂರು

ಜನವಸತಿ ಪ್ರದೇಶದಿಂದ ಕೆಲವೇ ಮೀಟರ್‌ಗಳ ದೂರದಲ್ಲಿರುವ ಕಸ ವಿಲೇವಾರಿ ಘಟಕವನ್ನು ಮತ್ತೆ ಆರಂಭಿಸಬಾರದು ಎಂದು ಆಗ್ರಹಿಸಿ ಜೆಡಿಎಸ್‌ ಮುಖಂಡ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಪ್ರದೀಪ್‌ ಯಜಮಾನ್‌ ನೇತೃತ್ವದಲ್ಲಿ ಮಳಲಿ ಗ್ರಾಮಸ್ಥರು ಧರಣಿ ಆರಂಬಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಪುರಸಭೆ ಅಧಿಕಾರಿಗಳು ಕಸ ವಿಲೇವಾರಿ ಘಟಕದ ಕಾಮಗಾರಿಯನ್ನು ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಡೆಸಿದ್ದರು. ಗುರುವಾರವೂ ಕಾಮಗಾರಿ ಮುಂದುವರಿದಿರುವುದರಿಂದ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ, ಅಂಬೇಡ್ಕರ್‌ ಫೋಟೊ ಇರಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಮಳಲಿ ಗ್ರಾಮಸ್ಥರ ವಿರೋಧದಿಂದ ಪಾಳುಬಿದಿದ್ದ ಸುಮಾರು 11 ಎಕರೆ ವಿಸ್ತೀರ್ಣದ ಕಸ ವಿಲೇವಾರಿ ಘಟಕದ ಕಾಮಗಾರಿಯನ್ನು ಈಗ ಮತ್ತೆ ಆರಂಭಿಸಲಾಗಿದೆ. ಸಕಲೇಶಪುರ ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಸಾರ್ವಜನಿಕರು ಪುರಸಭೆಯ ವಿರುದ್ಧ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಸೇರಿಂದತೆ ಹಿಂದಿನ ಅಧಿಕಾರಿಗಳು ಹಲವು ಬಾರಿ ಗ್ರಾಮಸ್ಥರೊಂದಿಗೆ ಸಂಧಾನ ಸಭೆ ನಡೆಸಿದರು ಗ್ರಾಮಸ್ಥರು ಪಟ್ಟು ಬಿಡದ ಕಾರಣ ಕಸ ವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ಕಸ ವಿಲೇವಾರಿ ಸಮಸ್ಯೆಯನ್ನು ಗ್ರಾಮಸ್ಥರ ವಿಶ್ವಾಸಗಳಿಸಿಕೊಂಡು, ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಬಗ್ಗೆ ಹರಿಸಲು ಪ್ರಮಾಣಿಕ ಪ್ರಯತ್ನ ಪಡುತ್ತೇನೆ ಎಂದು ಹೇಳಿದ್ದರು. ಅದರಂತೆ ಕಳೆದ ವಾರ ಮಳಲಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್‌ ಆದೇಶದ ಮೇರೆಗೆ ಪುರಸಭಾ ಮುಖ್ಯ ಅಧಿಕಾರಿ ಡಾಕ್ಟರ್ ಜಯಣ್ಣ ಮತ್ತು ಸಿಬ್ಬಂದಿ ಮಳಲಿ ಗ್ರಾಮದ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು ಹೇಳಿದ ಮೇರೆಗೆ ಹಲವು ವರ್ಷಗಳಿಂದ ನಿಗ ವಹಿಸದ ಪರಿಣಾಮ ಬೆಳದಿದ್ದ ಗಿಡಗಂಟಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವು ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಗ್ರಾಮಸ್ಥರ ವಿರೋಧವನ್ನು ಕಡಗಣಿಸಿ ಸಿಬ್ಬಂದಿಗಳಿಗೆ ಕಾಮಾಗಾರಿ ಮುಂದುವರೆಸಲು ಹೇಳಿ ಸ್ಥಳದಿಂದ ತೆರಳಿದರು.

ಮಳಲಿ

ಕಸ ವಿಲೇವಾರಿ ಘಟಕ ಸ್ಥಳಾಂತರ ಮಾಡಿ

ಈ ವೇಳೆ ಮಳಲಿ ಗ್ರಾಮಸ್ಥರಾದ ಶಿವಣ್ಣ ಮತನಾಡಿ, “ಕಳೆದ ಏಳು ದಶಕಗಳಿಂದ ಸುಮಾರು 80 ದಲಿತ ಕುಟುಂಬಗಳು ಕಸ ವಿಲೇವಾರಿ ಘಟಕದ ಸಮೀಪವೇ ಮನೆ ನಿರ್ಮಿಸಿಕೊಂಡು ವಾಸವಾಗಿದ್ದೇವೆ. ಈ ವಿಷಯವನ್ನು ಪುರಸಭೆಯು ಅಧಿಕಾರಿಗಳಿಗೆ ತಿಳಿಸದೆ ಕೆಲವು ಅಧಿಕಾರಿಗಳು ಸತ್ಯ ಮರೆಮಾಚಿದ್ದಾರೆ. ಅಕ್ರಮವಾಗಿ ಜನ ವಸತಿ ಪ್ರದೇಶದ ಮಧ್ಯೆ ಕಸವಿಲೇವಾರಿ ಘಟಕಕ್ಕೆ ಜಾಗವನ್ನು ಮಂಜೂರು ಮಾಡಿಕೊಡಲಾಗಿದೆ” ಎಂದು ಆರೋಪಿಸಿದರು.

“ಕಳೆದ 70 ವರ್ಷಗಳಿಂದ ವಾಸವಿರುವ ಕುಟುಂಬಗಳ ಭವಿಷ್ಯ ಅತಂತ್ರವಾಗಿದೆ. ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ 100 ಮೀಟರ್ ಅನ್ನು ಬಫರ್ ಜೊನ್ ಎಂದು ಪರಿಗಣಿಸಿದ್ದರೂ ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿಯ ಮೂಲ ಸೌಕರ್ಯ ಕಲ್ಪಿಸಿಲ್ಲ. ಆ ಕಾರಣಕ್ಕಾಗಿ ಜನವಸತಿ ಪ್ರದೇಶದ ಒಳಗೆ ಕಸ ವಿಲೇವಾರಿ ಘಟಕ ಸ್ಥಗಿತಗೊಳಿಸಿ ಬೇರೆಡೆಗೆ ಸ್ಥಳಾಂತರ ಮಾಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಸಂಘಪರಿವಾರದ ಹೇಡಿಗಳಿಗೆ ಪಠ್ಯದಲ್ಲಿ ಜಾಗವಿಲ್ಲ: ಬಿಕೆ ಹರಿಪ್ರಸಾದ್

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು

“ಕಳೆದ ಎರಡು ದಶಕಗಳಿಂದ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು 11 ಎಕ್ಕರೆ ಸರ್ಕಾರಿ ಜಾಗವನ್ನು ಮಳಲಿ ಗ್ರಾಮದಲ್ಲಿ ಮೀಸಲಿಡಲಾಗಿದೆ. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಕಸವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಘಟಕ ಪ್ರಾರಂಭವಾದರೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರಲ್ಲಿ ಹಲವು ಆತಂಕ ಇರುವುದರಿಂದ ವಿರೋಧ ಮಾಡುತ್ತಿರುವುದು ಸಹಜ. ಆದರೆ, ಕಸ ವಿಲೇವಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನಿರ್ಮಿಸಲಾಗುವುದು. ಜನರು ಈ ಬಗ್ಗೆ ಆತಂಕಪಡುವುದು ಬೇಡ” ಎಂದು ಸಕಲೇಶಪುರ ಪುರಸಭೆ ಮುಖ್ಯ ಅಧಿಕಾರಿ ಡಾ. ಜಯಣ್ಣ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಪ್ರದೀಪ್ ಯಜಮಾನ್, ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಶಿವ ಕುಮಾರ್, ಯೋಗೇಶ್‌ ಹಾಗೂ ಇತರರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ: ವಿನಯ್ ಕುಮಾರ್

ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್ ಎಸ್...

ಕಲಬುರಗಿ | ನನ್ನನ್ನು ಎನ್‌ಕೌಂಟರ್ ಮಾಡುವ ಜೀವ ಬೆದರಿಕೆ ಪತ್ರ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಗಲಭೆ ಸೃಷ್ಟಿಸಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ...