ಧಾರವಾಡ | ಕವಿತೆ ಬರೆಯುವವರಿಗೆ ದಿಟ್ಟತನ ಇರಬೇಕು: ಸಾಹಿತಿ ಎ ಎ ದರ್ಗಾ

Date:

ಧಾರವಾಡ ತಾಲೂಕು ಕಸಾಪ ವತಿಯಿಂದ ಚಂದ್ರಶೇಖರ ಬಸನಗೌಡ ಪಾಟೀಲ ಹಾಗೂ ಡಾ. ರಾ ಯ ಧಾರವಾಡಕರ ದತ್ತಿ ಅಂಗವಾಗಿ ಕರ್ನಾಟಕ ಸಂಭ್ರಮ-50 ಸಾಪ್ತಾಹಿಕ ಸಾಹಿತ್ಯ ಮಾಲಿಕೆಯಡಿಯಲ್ಲಿ, ಬುಧವಾರ ಸಾಯಂಕಾಲ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಗಣರಾಜ್ಯೋತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದತ್ತು ಉಪನ್ಯಾಸ ಮತ್ತು ಕವಿಗೋಷ್ಠಿ ಹಮ್ಮಿಕೊಂಡಿದ್ದರು.

- Advertisement -

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಸಾಹಿತಿ ಎ ಎ ದರ್ಗಾ ಮಾತನಾಡಿ, ಕವಿಯಾದವರಿಗೆ ದಿಟ್ಟತನ ಇರಬೇಕು. ಕವಿತೆ ರಂಗೋಲಿ ಇದ್ದಂತೆ. ಸಂಗೀತ ಭಾವ ಮತ್ತು ಪದಪುಂಜ ಯಾರಲ್ಲಿದೆಯೊ ಅಂತವರು ಕವಿಗಳಾಗಬಹುದು. ಕವನದಲ್ಲಿ ವಿಷಯದ ಗಹನತೆ ಇದ್ದರೆ, ವಾಚಿಸುವ ರೂಢಿ ಬರುತ್ತದೆ. ಒಬ್ಬರ ಕವನ ಮತ್ತೊಬ್ಬರಿಗೆ ಕವಿತೆ ಬರೆಯಲು ಆಹ್ವಾನ ಮಾಡಬೇಕು. ಕವಿತೆಯಲ್ಲಿ ಲಯ ಮತ್ತು ಹಿತವಾಗಿರಬೇಕು. ಕವಿತೆ ನಿಜಾಕಾರವೂ ಹೌದು ನಿರಾಕಾರವೂ ಹೌದು. ಇವತ್ತಿನ ಕವಿತೆಗಳಲ್ಲಿ ಅಂಬೇಡ್ಕರ್ ಬಗ್ಗೆ ಬರೆದಿರುವುದು ಸಂತಸದ ವಿಚಾರ. ನಮ್ಮ ವಿಚಾರಗಳನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವಾಗ ನೆರವಾಗಿ ಹೇಳುವುದು ಕಡಿಮೆ ಆಗಬೇಕು ಏಕೆಂದರೆ ಗುರಿಯಾಗುತ್ತೇವೆ. ಆದರೆ ದಿಟ್ಟತನ ಇರುವುದು ಒಳ್ಳೆಯದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಕಾರ್ಯಕ್ರಮ ಉದ್ಘಾಟಿಸಿ ಡಾ. ಎಸ್ ಎಸ್ ದೊಡಮನಿ ಮಾತನಾಡಿ, ಪಂಪನಿಂದ ಹಿಡಿದುಕೊಂಡು ಇಲ್ಲಿಯವರೆಗೂ ಕನ್ನಡಕ್ಕೆ ತನ್ನದೇ ಆದ ಕಾವ್ಯ ಮೀಮಾಂಸೆ ಇದೆ. ಕಾವ್ಯದ ವಸ್ತು, ಭಾಷೆ ಮತ್ತು ಅಲಂಕಾರದ ಬಗ್ಗೆ ಬರಹಗಾರರಲ್ಲಿ ತಿಳುವಳಿಕೆ ಇರಬೇಕು. ಹೊಸಗನ್ನಡದ ಕಾವ್ಯ ಚಿಂತನೆಯು ಕವಿ ಮತ್ತು ಆತನ ಅಂತರಂಗಕ್ಕೆ ಸಂಬಂಧಿಸಿವೆ. ಕವಿ ಲೋಕದ ಅನುಭವಗಳಿಗೆ ಸ್ಪಂದಿಸುವ ಸಾಹಿತ್ಯ ಅರಗಿಸಿಕೊಂಡು ಕಟ್ಟಿಕೊಡುವ ಸಾಮರ್ಥ್ಯವೇ ಕವಿತೆಯಾಗಿದೆ ಎಂದರು.

ಶ್ರೀನಿವಾಸ ವಾಡಪ್ಪಿ ಮಾತನಾಡಿ, ಡಾ. ರಾ ಯ ಧಾರವಾಡಕರ ಅವರ ಜೀವನದ ಪರಿಚಯ ಮಾಡಿಕೊಟ್ಟರು. ಕಾವ್ಯ ಬರೆಯಬೇಕು ಎನ್ನುವವರು ಎಲ್ಲ ಸಾಹಿತ್ಯವನ್ನೂ ಮನದಲ್ಲಿ ಯಾವುದೇ ಗೊಂದಲವಾಗಿಟ್ಟುಕೊಳ್ಳದೆ ಓದಬೇಕು. ಎಲ್ಲವನ್ನೂ ಓದಿಕೊಂಡು ನಮ್ಮೊಳಗಿನಿಂದ ಯಾವ ಒಂದು ತೀರ್ಮಾನ ಬರುತ್ತದೆಯೋ ಅದನ್ನು ವ್ಯಕ್ತಪಡಿಸಬೇಕು. ಎಲ್ಲದರ ಕುರಿತಾಗಿ ನಮ್ಮಲ್ಲಿ ಅರಿವಿರಬೇಕು. ಅಂದಾಗ ಮಾತ್ರ ನಾವೊಬ್ಬ ಅದ್ಭುತ ಕವಿಯಾಗಿ ಹೊರಹೊಮ್ಮಬಹುದು ಮತ್ತು ನಾವು ಮತ್ತೊಬ್ಬರನ್ನು ಅನುಕರಣೆ ಮಾಡಬಾರದು ಎನ್ನಬಹುದು.

ಪ್ರೇಮಾ ಹೊರಟ್ಟಿ ಮಾತನಾಡಿ, ಶರಣರು ಸ್ತ್ರೀ ಸ್ವಾತಂತ್ರ್ಯ, ಜಾತಿ‌ ನಿರ್ಮೂಲನೆಗಾಗಿ ಹೋರಾಡಿದವರು. ನಾನು ಯಾರು? ಎಲ್ಲಿಂದ ಬಂದೆ? ಎಂದು ತಿಳಿಯುವುದೇ ಆತ್ಮಜ್ಞಾನವಾಗಿದೆ. ಆತ್ಮಜ್ಞಾನವೆಂದರೆ ಸತ್ಯದ ಇರುವಿಕೆಯಾಗಿದೆ. ಅರ್ಥಾತ್ ಅಂತರ್ಯಾತ್ರೆ ಎಂದು ಕರೆಯಬಹುದು. ಆತ್ಮಜ್ಞಾನದ ಕುರಿತಾಗಿ ಬಾಲಸಂಗಯ್ಯ, ಅಕ್ಕ ಮಹಾದೇವಿ ಹೀಗೆ ಬಹುತೇಕ ಶರಣರು ಬರೆದಿದ್ದಾರೆ. ನಮ್ಮಲ್ಲೇ ಅರಿವು ಸ್ವಯವಾಗಿರುವಾಗ ಬೇರೆಯವರ ಕೇಳುವ ಅವಶ್ಯವಿಲ್ಲ ಎಂಬ ಶರಣರ ಸಂದೇಶ ನೆನಪಿಸಿಕೊಂಡರು.

ಸನ್ಮಾನ ಸ್ವೀಕರಿಸಿದ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಮಾತನಾಡಿ, ನಮ್ಮ‌ ಕೆಲಸದಲ್ಲಿ ಬದ್ಧತೆ ಇರಬೇಕು. ನಮ್ಮ ಕೆಲಸದ ಕುರಿತು ಎಲ್ಲರೂ ವಿಮರ್ಶೆ ಮಾಡುತ್ತಾರೆ. ಪತ್ರಿಕೋದ್ಯದಲ್ಲಿಯೂ ಸಾಹಿತ್ಯವು ಸತ್ತು ಹೋಗುತ್ತಿದೆ. ಪತ್ರಕರ್ತರು ಯಾಕೆ ಪುಸ್ತಕಗಳನ್ನು ಬರೆಯಲು ಮುಂದಾಗುತ್ತಿಲ್ಲ? ಇವತ್ತಿನ ದಿನಗಳಲ್ಲಿ ಪತ್ರಿಕೆಗಳನ್ನು ಮೊಬೈಲ್’ನಲ್ಲಿ ಕಟಿಂಗ್ ಮಾಡಿ ಓದುತ್ತಿರುವ ಪರಿಸ್ಥಿತಿ ಬಂದೊದಗಿದೆ. ಸಾಹಿತ್ಯವನ್ನು ಪತ್ರಕೊಧ್ಯಮವು ಅತಿಹೆಚ್ಚು ಪ್ರಚಾರ ಮಾಡಬೇಕಿದೆ.‌ ಮಾದ್ಯಮದ ಜೊತೆಗೆ ಸಾಹಿತ್ಯ ಬೆಳೆಸುವ ಕಾರ್ಯವಾಗಲಿ ಎಂದರು.

ಈ ವರದಿ ಓದಿದ್ದೀರಾ? ಧಾರವಾಡ | ಒಂದೇ ತಾಯಿ ಮಕ್ಕಳಾದರೂ; ಬೇರೆ-ಬೇರೆ ಜಾತಿ ಮಾಡಿಕೊಂಡಿದ್ದೇವೆ: ಗೀತಾ.ಸಿ.ಡಿ

ದತ್ತಿ ದಾನಿ ಅನಿಲ ಧಾರವಾಡಕರ ಮಾತನಾಡಿದರು. ಪ್ರಾಸ್ತಾವಿಕವಾಗಿ ಪ್ರೋ. ಕೌಜಲಗಿ ಮಾತನಾಡಿದರು. ದತ್ತಿ ದಾನಿ ಚಂದ್ರಶೇಖರ ಪಾಟೀಲ, ಶಾಂತವೀರ ಬೆಟಗೇರಿ, ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಮಾರ್ತಾಂಡಪ್ಪ ಕತ್ತಿ ವೇದಿಕೆ ಮೇಲಿದ್ದರು. ಕವಿಗಳು ಕವಿಯತ್ರಿಯರು ಕವಿತೆಗಳ ವಾಚಿಸಿದರು. ಮೇಘ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಉಮಾ ಬಾಗಲಕೋಟ, ಪರಿಷತ್ತಿನ ಪದಾಧಿಕಾರಿಗಳು, ಕಾವ್ಯಸಕ್ತರು, ಮಾಧ್ಯಮ‌ಮಿತ್ರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...