ಧಾರವಾಡ | ಕಿತ್ತೂರಿನ ಇತಿಹಾಸದ ಸಮಗ್ರ ಸಾಹಿತ್ಯ ಇನ್ನೂ ಪ್ರಕಟವಾಗದೇ ಇರುವುದು ವಿಪರ್ಯಾಸ: ರಾಜಶೇಖರ ಬಿರಾದಾರ

Date:

ಕಿತ್ತೂರ ನಾಡಿನ ಮೊದಲ ಇತಿಹಾಸ ಸಂಶೋಧಕರಾದ ದೊಡ್ಡಭಾವೆಪ್ಪ ಮೂಗಿ ಕಿತ್ತೂರಿನ ಇತಿಹಾಸದ ವಿಶ್ವಕೋಶದಂತಿದ್ದರು. ಜನಪದರಿಂದ ಲಾವಣಿ, ಗೀಗೀ ಪದಗಳನ್ನು ಹಾಡಿಸಿ ದಾಖಲೆ ರೂಪದಲ್ಲಿ ಸಂಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೀಡಿದರು. ಆದರೆ ಕಿತ್ತೂರಿನ ಇತಿಹಾಸದ ಸಮಗ್ರ ಸಾಹಿತ್ಯ ಇನ್ನೂ ಪ್ರಕಟವಾಗದೇ ಉಳಿದಿದ್ದು ವಿಪರ್ಯಾಸ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದೊಡ್ಡಭಾವೆಪ್ಪ ಮೂಗಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ‘ಹೃದಯವಂತ ಸಂಶೋಧಕ ದೊಡ್ಡಭಾವೆಪ್ಪ ಮೂಗಿ’ ವಿಷಯದ ಕುರಿತು ಯರಗಟ್ಟಿ ಸರಕಾರಿ ಪ್ರಥಮ ದರ್ಜೆಯ ಪ್ರಾಧ್ಯಾಪಕ ರಾಜಶೇಖರ ಬಿರಾದಾರ ಮಾತನಾಡಿದರು.

- Advertisement -

ದೊಡ್ಡಭಾವೆಪ್ಪ ಮೋಗಿಯವರು ಬಾಲ್ಯದಿಂದಲೇ ಕಿತ್ತೂರ ಸಂಸ್ಥಾನದ ವೀರಗಾಥೆ ರಾಜರುಗಳ ಸ್ವಾಭಿಮಾನದ ಧೈರ್ಯದ ಕಥೆಗಳನ್ನು ಕೇಳುತ್ತಲೇ ಬೆಳೆದವರು. ಹೃದಯವಂತರಾದ ದೊಡ್ಡ ಭಾವೆಪ್ಪನವರು ಒಬ್ಬ ಸಂಶೋಧಕನಲ್ಲಿರಬಹುದಾದ ಚಿಕಿತ್ಸಕತೆ ಕುತೂಹಲ ಪ್ರವೃತ್ತಿ ಹೊಂದಿದವರಾಗಿದ್ದರು. ಕಿತ್ತೂರಿನ ಇತಿಹಾಸ ತಿಳಿಯಲು ತಲಸ್ಪರ್ಶ ಅಧ್ಯಯನ ಮಾಡಿದರು. ಹಳ್ಳಿ-ಹಳ್ಳಿಗಳಿಗೂ ಸಂಚರಿಸಿ ಕಾಗದಪತ್ರಗಳನ್ನು ಪೂರಕ ದಾಖಲೆಗಳನ್ನು ಸಂಗ್ರಹಿಸಿದರು. ಅವರು ಒಬ್ಬ ಇತಿಹಾಸ ಸಂಶೋಧಕರು ಮಾತ್ರವಲ್ಲ. ಮಹಾನ್ ದೇಶಭಕ್ತರು. ಗಾಂಧೀಜಿ ಹಾಗೂ ಸುಭಾಸಚಂದ್ರ ಭೋಸರಿಂದ ಸ್ಫೂರ್ತಿಗೊಂಡ ಅವರು ದೇಶದ ಏಕತೆ ಹಾಗೂ ಸಮಗ್ರತೆಯ ಚಿಂತನೆಗಳನ್ನು ಹೊಂದಿದ್ದರು. ಕಿತ್ತೂರಿಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಪ್ರಕಟಿಸಿದ ಇವರು ಇತಿಹಾಸದ ಸಂಶೋಧಕನಾಗಿ ಉರ್ದು, ಮರಾಠಿ ಭಾಷೆಗಳನ್ನು ಅಧ್ಯಯನ ಮಾಡಬೇಕಾಯಿತು. ಮೂಗಿಯವರು ಸುಸಂಸ್ಕೃತ ಸಂಸಾರವುಳ್ಳ ಶರಣ ಸಂಸ್ಕೃತಿಯ ಮನೆತನದವರಾಗಿದ್ದು, ದಾನಧರ್ಮದ ಕಾರ್ಯಗಳಲ್ಲಿ ಸದಾ ಎತ್ತಿದ ಕೈ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕಿತ್ತೂರ ಸಂಸ್ಥಾನ ಮಲ್ಲಸರ್ಜ ದೇಸಾಯಿ ಹಾಗೂ ಅಲ್ಲಪ್ಪಗೌಡ ದೇಸಾಯಿ ಅವರ ಆಡಳಿತದಲ್ಲಿ ವೈಭವಯುತವಾಗಿತ್ತೆಂದು ಹೇಳಿ, ಕಿತ್ತೂರಿನ ಆಂತರಿಕ ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿಸಿದರು. ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಲಹೊಂಗದ ಮೂಗಿಯವರ ಮನೆತನಕ್ಕೆ ತಮ್ಮದೇ ಆದ ಇತಿಹಾಸವಿದೆ. ನಾಡು ಕಟ್ಟಿದವರಲ್ಲಿ ಆ ಮನೆತನದ್ದು ಪಾತ್ರವಿದೆ. ದೊಡ್ಡಭಾವೆಪ್ಪನವರ ಜೀವನದ ಯಶೋಗಾಥೆ ನಮಗೆಲ್ಲಾ ಪ್ರೇರಣೆ ಎಂದರು.

ಇದನ್ನೂ ಓದಿ ಧಾರವಾಡ | ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರೂಪಿಸುವಲ್ಲಿ ಪೋಷಕರ, ಶಿಕ್ಷಕರ ಸಮಾನ ಜವಾಬ್ದಾರಿ ಇದೆ: ಜಿಲ್ಲಾಧಿಕಾರಿ ದಿವ್ಯಪ್ರಭು

ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ವಾಡಪ್ಪಿ, ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಸಿ.ಎಸ್. ಪಾಟೀಲ, ರಾಜೇಂದ್ರ ಸಾವಳಗಿ, ಬಿ.ಡಿ. ಪಾಟೀಲ, ಎಸ್.ಎಚ್. ಪಾಟೀಲ, ಎಂ.ಆರ್. ಮಾಮಲೇದೇಸಾಯಿ, ಶಂಕರಲಿಂಗ ಶಿವಳ್ಳಿ ಸೇರಿದಂತೆ ಮುಂತಾದವರಿದ್ದರು. ಪ್ರಾರಂಭದಲ್ಲಿ ಶಕುಂತಲಾ ಹಾದಿಮನಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಗುರುಬಸವ ಮಹಾಮನೆ, ಅಲ್ಲಮಪ್ರಭು ಕಡಕೋಳ, ಬಸವರಾಜ ಹೂಗಾರ ಸಂಗೀತಕ್ಕೆ ಸಾಥ್ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...