ಧಾರವಾಡ | ಹಳಗನ್ನಡ ಓದು; ಸರಳೀಕರಿಸಿ ಓದುವುದು ಕನ್ನಡ ಅಧ್ಯಾಪಕರಿಗೆ ಅಗತ್ಯ: ಕುಲಪತಿ ಡಾ.ಎಂ.ಎಂ.ಖಾನ್

Date:

“ಹಳಗನ್ನಡದ ಓದು, ಅದನ್ನು ಸರಳೀಕರಿಸುವ ವಿಧಾನವನ್ನರಿಯುವುದು ನಮ್ಮ ಕನ್ನಡ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಕನ್ನಡ ಭಾಷೆಯ ಒಳನೋಟವನ್ನರಿತು ಪ್ರತಿಯೊಂದು ವಾಕ್ಯದ, ಶಬ್ದದ ಅರ್ಥವನ್ನು ಪರಿಣಾಮಕಾರಿಯಾಗಿ ವಿವರಿಸುವುದು ಅವಶ್ಯವಾಗಿದೆ” ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ.ಖಾನ್ ಹೇಳಿದರು. 

- Advertisement -

ಧಾರವಾಡ ಪಟ್ಟಣದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ವಿಶ್ವನಿಕೇತನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕವಿವಿ ಕನ್ನಡ ಅಧ್ಯಾಪಕರ ಪರಿಷತ್ತು ವತಿಯಿಂದ “ಹಳಗನ್ನಡ ಓದು: ಬೋಧನಾ ವಿಧಾನ” ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾನತಾಡಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

“ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಗಮನಿಸಿದಾಗ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು, ಅವರು ಪ್ರಭಾವಗೊಳ್ಳುವಂತೆ ಪಾಠ ಮಾಡುವ ಸಾಮಥ್ರ್ಯವನ್ನು ಅಧ್ಯಾಪಕರು ಹೊಂದಬೇಕು.  ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ, ಸಂಸ್ಕøತಿಯ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತನೆಗೆ ಹಚ್ಚುವ ಕಾರ್ಯಮಾಡಬೇಕು” ಎಂದರು.  

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಅವರು ಮಾತನಾಡಿ, “ಸೌಂದರ್ಯದ ದೃಷ್ಟಿಯಿಂದ ಗದ್ಯಕ್ಕಿಂತ ಪದ್ಯ ಹೆಚ್ಚು ಆನಂದ ಕೊಡುತ್ತದೆ.  ಸಾಹಿತ್ಯ ಹುಟ್ಟಬೇಕಾದರೆ ಭಾಷೆ ಮುಖ್ಯವಾಗುತ್ತದೆ.  ಮನುಷ್ಯ ಸಂಶೋಧಿಸಿದರಲ್ಲಿ ಮುಖ್ಯವಾಗಿ ಭಾಷೆ, ಬೆಂಕಿ ಮತ್ತು ಚಕ್ರ ಅಥವಾ ಪ್ರಗತಿ ಪ್ರಮುಖವಾದುದಾಗಿದೆ.  ಭಾಷೆಯ ಮಹತ್ವ ತಿಳಿದಾಗ ಮಾತ್ರ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಾಗುತ್ತದೆ. ಒಳ್ಳೆಯ ಶಬ್ದಗಳ ಉತ್ತಮ ಜೋಡಣೆಯೇ ಕಾವ್ಯವಾಗಿದೆ. ಪ್ರಾಧ್ಯಾಪಕ ವೃತ್ತಿಗೆ ಬಂದಾಗ ಸಾಕಷ್ಟು ಪ್ರಬಲವಾದ ಆಸಕ್ತಿ, ಶ್ರದ್ಧೆ, ಸಾಕಷ್ಟು ಸಿದ್ಧತೆಯಿಂದ ವರ್ಗಕ್ಕೆ ತೆರಳಿದಾಗ ಮಾತ್ರ ವಿಷಯದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ” ಎಂದರು. 

“ಹಳಗನ್ನಡ ಓದು ಸುಲಭ, ಆದರೆ ಅದಕ್ಕೆ ಬೇಕಾಗುವ ಆಸಕ್ತಿ, ಶೃದ್ಧೆ ಹಾಗೂ ಪ್ರಯತ್ನ ಬೇಕು.  ಹಳಗನ್ನಡದ ಓದಲು ಹೆದರಬಾರದು, ಮರಳಿ ಯತ್ನವ ಮಾಡು, ಅದು ಸುಲಭವಾಗುತ್ತದೆ. ವಿಷಯದಲ್ಲಿ ಪರಕಾಯ ಪ್ರವೇಶವಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಹಳಗನ್ನಡ ಅರ್ಥವಾಗುತ್ತದೆ” ಎಂದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ ಅವರು ಮಾತನಾಡಿ, ಕಬ್ಬಿಣದ ಕಡಲೆ ಎಂದು ಭಾವಿಸುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ಹಳಗನ್ನಡದ ಓದನ್ನು ಸರಳೀಕರಿಸಿ, ಪರಿಣಾಮಕಾರಿಯಾಗಿ ಬೋಧಿಸುವ ವಿಧಾನವನ್ನು ಕನ್ನಡ ಪ್ರಾಧ್ಯಾಪಕರುಗಳಿಗೆ ಅರ್ಥೈಸುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಈ ಒಂದು ವಿಶಿಷ್ಠ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಇದರಿಂದ ಹಳಗನ್ನಡದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.   

ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಕೃಷ್ಣ ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು. 

ಉಡುಪಿ ಜಿಲ್ಲೆ ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಜೆ.ಪಿ.ಶೆಟ್ಟಿ ಅವರು “ಹಳಗನ್ನಡ ಪಠ್ಯಗಳನ್ನು ಸಮಕಾಲೀನಗೊಳಿಸುವ ಬಗೆ” ಕುರಿತು  ಪರಿಣಾಮಕಾರಿಯಾಗಿ ಗೋಷ್ಠಿ ನಡೆಸಿಕೊಟ್ಟರು.  ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ವೀರೇಶ್ ಬಡಿಗೇರ “ಹಳಗನ್ನಡ ಪಠ್ಯಗಳ ಬೋಧನೆಯ ನೆಲೆಗಳು” ಕುರಿತು ಪ್ರಾಯೋಗಿಕವಾಗಿ ವಿವರಿಸಿದರು.  

ಕಾಲೇಜಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಸುಧಾ ಕೌಜಗೇರಿ ಅವರು ಸಮಾರೋಪ ಭಾಷಣ ಮಾಡಿದರು. ಡಾ.ಬಿ.ಎಸ್.ಭಜಂತ್ರಿ, ಕವಿವಿ ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷ ಡಾ.ರಾಜಶೇಖರ ದಾನರಡ್ಡಿ, ಪರಿಷತ್ತಿನ ಪದಾಧಿಕಾರಿಗಳಾದ ಎಸ್.ಎಸ್.ದೊಡಮನಿ ವೇದಿಕೆಯಲ್ಲಿದ್ದರು. 

ಡಾ.ಗಿರೀಶ್ ದೇಸೂರ ಸ್ವಾಗತಿಸಿದರು. ಡಾ. ಬಾಹುಬಲಿ ಜೈನರ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಿಗೆ ಹಾಗೂ ಪಿಎಚ್.ಡಿ. ಪುರಸ್ಕೃತರ ಕನ್ನಡ ಪ್ರಾಧ್ಯಾಪಕರುಗಳಿಗೆ ಅಧ್ಯಾಪಕರ ಪರಿಷತ್ತಿನಿಂದ ಸನ್ಮಾನಿಸಲಾಯಿತು. ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಡಾ. ವಿ.ಎಲ್.ಪಾಟೀಲ, ಡಾ.ನಿಂಗಪ್ಪ ಮುದೇನೂರ, ಡಾ. ರಂಗನಾಥ ಕೆ.ಆರ್. ಡಾ.ಪುಷ್ಪಾ ಬಸನಗೌಡರ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ: ಆರ್. ಶ್ರೀನಿವಾಸನ್

ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ...

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಆಲಗೂರ ಪುನರ್ವಸತಿ ಕೇಂದ್ರವನ್ನು ಮರಳಿ ಗ್ರಾಮ ಪಂಚಾಯತಿಗೆ ಸೇರಿಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಆಲಗೂರ ಪುನರ್ವಸತಿ ಕೇಂದ್ರವನ್ನು...

ಬಾಗಲಕೋಟೆ | ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ; ಯೋಜನೆ ಸದುಪಯೋಗಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಕರೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯ ರೈತರಿಂದ ಸೂರ್ಯಕಾಂತಿ,...