ಧಾರವಾಡ | ಆರ್‌ಎಸ್‌ಎಸ್ ಪಥಸಂಚಲನ; ಮಾರ್ಗ ಬದಲಾವಣೆಯಿಂದ ಪ್ರಯಾಣಿಕರ ಪರದಾಟ

Date:

ಧಾರವಾಡದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದ ಪರಿಣಾಮ ಸಾರ್ವಜನಿಕ ಪ್ರಯಾಣಿಕರು ಪರದಾಡುವಂತ ವಾತಾವರಣ ಸೃಷ್ಠಿಯಾಗಿತ್ತು. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಥಸಂಚಲನ ರೂಪಿಸಿಕೊಳ್ಳಬೇಕು ಎಂದು ಜನರು ಆಕ್ರೋಶಗೊಂಡರು.

- Advertisement -

ನಗರದ ಕೆ. ಇ. ಬೋರ್ಡ್ ಮೈದಾನದಿಂದ್ ಮೂರು ತಂಡವಾಗಿ ಪಥ ಸಂಚಲನ ಶುರುವಾಗಿ ಸಿಬಿಟಿ, ಜುಬಲಿ ಸರ್ಕಲ್ ಮಾರ್ಗವಾಗಿ ಕೆಸಿಡಿ ಮೈದಾನವನ್ನು ಬಂದು ತಲುಪಿತು. ಇದರಿಂದ ನಗರದಲ್ಲಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದ ಜನರು 3-4 ಕಿಮೀ ದೂರ ನಡೆದು ಬಸ್ಸುಗಳಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದವರೆಗೆ ಮಹಿಳೆಯರು, ಮಕ್ಕಳು, ವೃದ್ಧರು ನಡೆದುಕೊಂಡೇ ಹೋದರು. ಇನ್ನು ವಾಹನ ಸವಾರರು ಹಳೆ ಎಸ್.ಪಿ ಕೆಚೇರಿ, ರಾಣಿ ಚೆನ್ನಮ್ಮ ಪಾರ್ಕ್, ಸಬ್ ಜೈಲು ಮಾರ್ಗವಾಗಿ ಸಂಚರಿಸಲು ಹರಸಾಹಸಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...
IMG 20251013 142344 edited
ಬಸ್ ಇಲ್ಲದೆ ನಡೆದು ಹೊರಟ ಪ್ರಯಾಣಿಕರು

ಈ ಕುರಿತು ಸಾರ್ವಜನಿಕರು ಮಾತನಾಡುತ್ತಾ, ಈಗ ನಡೆಯುತ್ತಿರುವ ಆರ್.ಎಸ್.ಎಸ್ ಪಥ ಸಂಚಲನದಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ಬಸ್ಸಿನವರು ಜನರನ್ನು ಇಳಿಸಿ ಹೋಗುತ್ತಿದ್ದಾರೆ. ಈ ಪಾದಯಾತ್ರೆಯು ರಸ್ತೆಯ ಒಂದೇ ಬದಿ ಹಿಡಿದು ಹೋಗಿದ್ದರೂ ನಡೆಯುತ್ತಿತ್ತು. ಇನ್ನೊಂದು ಬದಿಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದವು. ಯಾವುದೇ ಕಾರ್ಯಕ್ರಮವಾಗಲಿ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಬಾರದು ಮೇಲಾಗಿ ಎಲ್ಲರಿಗೂ ಅನುಕೂಲ ಆಗುವಂತೆ ಇರಬೇಕು. ಇದೀಗ ವಯಸ್ಸಾದವರು, ಮಹಿಳೆಯರು 3 ಕಿಲೋಮೀಟರ್ ನಡೆದು ಹೋಗುವಂತ ಸ್ಥಿತಿ ಬಂದಿದೆ ಎಂದರು.

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಜಾಗತೀಕರಣದಿಂದ ಜೀವನದ ಮೌಲ್ಯಗಳು ಬದಲಾಗುತ್ತಿವೆ: ಐ. ಜಿ. ಸನದಿ

ಧಾರವಾಡ ನಗರವೆಲ್ಲ ಭಾಗಶಃ ಕೇಸರಿಮಯವಾಗಿತ್ತು. ತಲೆಯ ಮೇಲೆ ಕರಿಯ ಟೋಪಿ, ಬಿಳಿಯ ಅಂಗಿ, ಖಾಕಿ ಪ್ಯಾಂಟು, ಕೈಯಲ್ಲೊಂದು ಕೋಲು ಹಿಡಿದುಕೊಂಡ ದೃಶ್ಯ ಎದ್ದು ಕಾಣುತ್ತಿತ್ತು. ಅನೇಕ ಚಿಕ್ಕಮಕ್ಕಳೂ ಇದರಲ್ಲಿ ಭಾಗವಹಿಸಿದ್ದರು. ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ, ಈರೇಶ್ ಅಂಚಟಗೇರಿ ಸೇರಿದಂತೆ ಬಿಜೆಪಿಯ ವಿವಿಧ ರಾಜಕೀಯ ಮುಖಂಡರು, ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದರ ಹೊರಗೆ ಜನರು ಸಂತೆ ಚೀಲ ಹೊತ್ತು, ಹೆಣ್ಣುಮಕ್ಕಳು ಮಕ್ಕಳನ್ನು ಎತ್ತಿಕೊಂಡು, ವೃದ್ಧರು ಕಷ್ಟಪಟ್ಟು ನಡೆಯುವ ದೃಶ್ಯ ಕಣ್ಣಿಗೆ ಕಟ್ಟುವಂತೆ ಇತ್ತು. ಜನರನ್ನು ಇಳಿಸಲು ಸಾರಿಗೆ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುವುದು ಕಾಣುತ್ತಿತ್ತು. ಇದರಿಂದ ಸಾರ್ವಜನಿಕರು ಹಿಡಿ ಶಾಪ್ ಹಾಕುತ್ತಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...