ಹುಬ್ಬಳ್ಳಿ | ಜಾಗತೀಕರಣದಿಂದ ಜೀವನದ ಮೌಲ್ಯಗಳು ಬದಲಾಗುತ್ತಿವೆ: ಐ. ಜಿ. ಸನದಿ

Date:

ಜಾಗತೀಕರಣದಿಂದಾಗಿ ಜೀವನದ ಮೌಲ್ಯಗಳು ಬದಲಾಗುತ್ತಿವೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಘಟಕದ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ದಿ. ವೀರಪ್ಪ ಮಡಿವಾಳಪ್ಪ ವಳಸಂಗ ಮತ್ತು ದಿ. ರುದ್ರಮ್ಮ ವಳಸಂಗ ದತ್ತಿ, ದಿ. ಸಾವಕ್ಕ ಹುಬ್ಳಿಕರ ದತ್ತಿ, ಲಿಂ. ಗುರುದೇವಿ ಮತ್ತು ಲಿಂ. ವೀರಯ್ಯ ಚಿಕ್ಕಮಠ ದತ್ತಿ ಉಪನ್ಯಾಸ ಕಾರ್ಯಕ್ರಮ ಮತ್ತು ಸುಮಧುರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

- Advertisement -

ಮುಂದುವರೆದು ಧಾವಂತದ ಬದುಕಿನಲ್ಲಿ ಸಂಪ್ರದಾಯ ಸಂಸ್ಕೃತಿಗಳು ಹೊಸ ರೂಪ ಪಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುಮ್ಮನೆ ಬದುಕಿ ಹೋಗುವುದು ಜೀವನದ ಉದ್ದೇಶವಲ್ಲ. ನಮ್ಮ ಕೆಲಸಗಳಿಂದ ಮತ್ತೊಬ್ಬರ ಮನಸ್ಸು ಅರಳಬೇಕು. ಸಾಹಿತ್ಯ, ಸಂಗೀತದ ಕಲೆಗಳು ಮತ್ತೊಬ್ಬರ ಮನಸ್ಸನ್ನು ಅರಳಿಸುವ ಕೆಲಸವನ್ನು ಮಾಡುತ್ತವೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.‌ರಮೇಶ ಮಹಾದೇವಪ್ಟನವರ ಮಾತನಾಡಿ, ಸಾರ್ವಜನಿಕರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದತ್ತಿ ಇಡುವುದರ ಮೂಲಕ ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚೆಚ್ಚು ಸ್ಪಂದಿಸಿ ಕೈ ಜೋಡಿಸಿದಾಗ ಕನ್ನಡ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಬಹುದು ಎಂದು ಕರೆನೀಡಿದರು.

ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ, ಈ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಎಲ್ಲರೂ ಸರ್ವ ರೀತಿಯಿಂದ ಸಹಕಾರ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಮಾಡಲು ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸುನಿಲ್ ಪತ್ರಿ ಸಂಗಡಿಗರಿಂದ ಕನ್ನಡ ಕವಿಗಳು ವಿರಚಿತ ಸುಮಧುರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಜೆ.ಎಂ.ವಿ.ಎಸ್
ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಂಭಯ್ಯ ಹಿರೇಮಠ, ವೈಷ್ಣವಿ ಹಾನಗಲ್, ಪೂರ್ಣಿಮಾ ಮುತ್ನಾಳ, ಪದ್ಮಾಕ್ಷೀ ಒಡಯರ, ಶಾಂತಾ ಲಕ್ಷ್ಮೇಶ್ವರ, ಭೀಮರಾಶಿ ಹೂಗಾರ, ಪ್ರಮೀಳಾ ಜಕ್ಕನ್ನವರ, ಮಂಜುನಾಥ ಯಲಿವಾಳ ಇವರನ್ನು ಸನ್ಮಾನಿಸಿದರು.

ಹುಬ್ಬಳ್ಳಿ ಕಸಾಪ ನಗರ ಘಟಕದ ಪದಾಧಿಕಾರಿಗಳು ಪ್ರಾರ್ಥಿಸಿದರು. ಸಂಧ್ಯಾ ದೀಕ್ಷಿತ್ ಸ್ವಾಗತಿಸಿದರು.‌ ವಿದ್ಯಾ ವಂಟಮುರಿ ವಂದಿಸಿದರು. ಪ್ರೊ. ಕೆ ಎಸ್ ಕೌಜಲಗಿ ನಿರೂಪಿಸಿದರು. ದತ್ತಿ ದಾನಿಗಲಾದ ಪ್ರೊ. ಜಿ ವಿ ಚಿಕ್ಕಮಠ, ವೀರಣ್ಣ ಹುಬ್ಳಿಕರ, ಪ್ರೊ ಜಿ ವಿ ವಳಸಂಗ ವೇದಿಕೆಯ ಮೇಲಿದ್ದರು.

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಕುರಾನ್ ಪಠಣಕ್ಕೂ ಮೊದಲು ಗಣೇಶ ಸ್ತುತಿ ಮಾಡಲಾಗಿದೆ: ನಾಗರಾಜ ಗೌರಿ

ಬಿ ಎ ಪಾಟೀಲ್, ಆರ್ ಟಿ ತವನಪ್ಟನವರ, ಜಯಪ್ರಕಾಶ್ ಟೆಂಗಿನಕಾಯಿ, ಎಸ್ ಕೆ ಆದಪ್ಪನವರ, ಶಶಿಧರ ಸಾಲಿ, ಮಹೇಶ ದ್ಯಾವಪ್ಪನರ, ವೆಂಕಟೇಶ್ ಮರೆಗುದ್ದಿ, ಮಲ್ಲಿಕಾರ್ಜುನ ಸಾವುಕಾರ, ಚನ್ನಬಸಪ್ಪ ಧಾರವಾಡಶೆಟ್ಟರ, ನೀತಿನ ಚಂದ್ರ ಹತ್ತಿಕಾಳ, ಆರ್ ಸಿ ಹಲಗತ್ತಿ,ಡಾ .ಡಿ ಟಿ ಪಾಟೀಲ್, ಮಹಾಂತೇಶ ನರೇಗಲ್, ರಮೇಶ್ ಭರಮಗೌಡರ, ರಮೇಶ್ ಸೋಲಾರಗೊಪ್ಪ, ಗುರುರಾಜ ಸಬನೀಸ, ಅನ್ವರ್ ಹುಬ್ಬಳ್ಳಿ, ಎಸ್ ಜಿ ಬಿಸೇರೊಟ್ಟಿ, ಡಾ. ಪ್ರಭಾಕರ ಲಗಮನ್ನವರ, ಸಿದ್ದಮ್ಮ ಅಡವೆಣ್ಣವರ, ಅನಸೂಯಾ ಪಾಟೀಲ್, ಗಿರಿಜಾ ಚಿಕ್ಕಮಠ, ಸುಮಂಗಲಾ ಅಂಗಡಿ, ಜಯಲಕ್ಷ್ಮಿ ಉಮಚಗಿ, ಡಾ. ಎಸ್ ಆರ್ ಕೆಂಚನ್ನವರ, ಕೆ ಎ ದೊಡಮನಿ, ಸುರೇಶ್ ಹೊರಕೇರಿ, ಪ್ರೊ. ಎಸ್ ಎಮ್ ಸಾತ್ಮಾರ ಮುಂತಾದವರು ಭಾಗವಸಿದ್ದರು.‌

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...