“ಇದೇ ಸೆ.12ರಂದು ಕೇಂದ್ರ ಸರ್ಕಾರವು ರೈತರ ನಿಯೋಗವನ್ನು ಕರೆದಿದ್ದು ಆ ಸಭೆಯಲ್ಲಿ ರೈತರ ಬೇಡಿಕೆಗಳು ಇಡೆರದಿದ್ದಲ್ಲಿ ಸೆ.13ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದರು.
ಹಾವೇರಿ ಪಟ್ಟಣದ ಶಿಗ್ಗಾವಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ರೈತ ಮುಖಂಡರು “ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಾಕ್ಷರಾದ ಚುನಪ್ಪ ಪೂಜಾರ ರಾಜ್ಯ ಗೌರವ ಅಧ್ಯಕ್ಷರಾದ ಶಶಿಕಾಂತ ಗುರುಜಿ ಹಾಗೂ ಜಿಲ್ಲಾ ಅಧ್ಯಾಕ್ಷರು ಹನುಮಂತಪ್ಪ ಹುಚ್ಚಣ್ಣನವರ ಇವರ ಆದೇಶದ ಮೇರಿಗೆ ಕೇಂದ್ರ ಸರ್ಕಾರಕ್ಕೆ ರೈತರ-ನಿಯೋಗದಲ್ಲಿನ ಬೇಡಿಕೆಗಳನ್ನು ಈಡೇರಿಸಬೇಕು” ಆಗ್ರಹಿಸಿದರು.
“ಈ ವರ್ಷ ಭೀಕರ ಬರಗಾಲಯಿರುವುದರಿಂದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಎಮ್.ಎಸ್.ಪಿ. ಸಕ್ಕರೆ ದರ ₹60 ಆಗಬೇಕು. ರಾಜ್ಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹5500 ನಿಗದಿ ಮಾಡಬೇಕು. ಎಮ್.ಎಸ್.ಸ್ವಾಮಿನಾಥ ವರದಿ ಜಾರಿಯಾಗಬೇಕು. ವಿ.ಬಿ.ಜಿ.ರಾಮಜಿಯಲ್ಲಿ ರೈತರ ಜಮೀನಿನಲ್ಲಿ ಕೃಷಿ ಕೂಲಿ ನೀಡಬೇಕು” ಎಂದು ರೈತರು ಆಗ್ರಹಿಸಿದರು.
ಈ ಮೇಲಿನ ಬೇಡಿಕೆಗಳು ಇಡೆರದಿದ್ದಲ್ಲಿ ಇದೇ ಸೆ.13ರಂದು ಹಾವೇರಿ ಜಿಲ್ಲೆಯ ಎಲ್ಲ ರೈತ ಪರ ಸಂಘಟನೆಗಳ ನೇತ್ರತ್ವದಲ್ಲಿ ಬಂಕಾಪೂರ ಟೋಲ್ ನಾಕ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರವಾದ ಹೊರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಮನವಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಜಡಿಮಠ, ಉಪಾಧ್ಯಕ್ಷ ಗಂಗಾಧರ ಲಂಗೋಟಿ, ಕಾರ್ಯದರ್ಶಿ ವಿರುಪಾಕ್ಷಿಗೌಡ ಪಾಟೀಲ್, ಚಂದ್ರಗೌಡ ಪಾಟೀಲ್ ಈರಣ್ಣ ಪಾಸಿ, ಮುತ್ತಪ್ಪ ತೆಗ್ಗಿ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.




