ವಿಶೇಷ ತೀವ್ರ ಮತ ಪರಿಷ್ಕರಣೆ (ಎಸ್ ಐ ಆರ್) ರದ್ದು ಗೊಳಿಸಲು ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಆನಿವಾಸಿ ಭಾರತೀಯರು ಅಂತ ಅನುಮಾನ ಪಟ್ಟು ಜನರಿಗೆ ಸುಳ್ಳು ನೋಟಿಸ್ ನೀಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಿಲ್ದಾರ ಕಛೇರಿ ಎದುರು ಎಸ್ಎಫ್ಐ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡರಸಿದರು.
ಮನವಿ ಸಲ್ಲಿಸಿದ ನಂತರ ಎಸ್ಎಫ್ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೇಂದ್ರ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಮತ ಪರಿಷ್ಕರಣೆ ಹೆಸರಿನಲ್ಲಿ ಅನಾವಶ್ಯಕವಾಗಿ ದೇಶದ ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ಯುವಕರನ್ಮು ಗುರಿಯಾಗಿಸಿ ಮತದಾನದಿಂದ ವಂಚಿಸಿ, ಮತದಾನದ ಹಕ್ಕುನ್ನು ಕಸಿದುಕೊಳ್ಳುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈಗಾಗಲೇ ಭಾರತ ಸಂವಿಧಾನದ 326ನೇ ವಿಧಿಯಲ್ಲಿ ತಿಳಿಸಿರುವಂತೆ ಜಾತಿ, ಮತ, ಧರ್ಮ, ಲಿಂಗ, ಭೇದವಿಲ್ಲದೆ ಹದಿನೆಂಟು ವರ್ಷ ತುಂಬಿದ ನಂತರ ಭಾರತ ಪ್ರಜೆಗಳಿಗೆ ಸಮಾನ ಮತದಾನ ಹಕ್ಕನ್ನು ಭಾರತ ಸಂವಿಧಾನ ನಿಡಿದೆ. ಅದರಂತೆ, ಈ ಹಿಂದೆ ಪ್ರತಿ ಮತ ಪರೀಕ್ಷರಣೆ ಹೆಸರಿನಲ್ಲಿ ಆಯಾ ತಾಲೂಕಿನ ಚುನಾವಣಾ ಅಧಿಕಾರಿಗಳು ಲೆಕ್ಕಾಧಿಕಾರಿಗಳ ಮೂಲಕ ಪೋತಿ ಆದವರ ಹಾಗೂ ಇತರೆ ಮಾಹಿತಿಗಳ ಆಧಾರದಲ್ಲಿ ಮತಪಟ್ಟಿಯನ್ನು ಅಂತಿಮವಾಗಿಸುತ್ತಿತ್ತು” ಎಂದರು.
“ಪ್ರಸ್ತುತ ಕೇಂದ್ರ ಸರ್ಕಾರ ಏಕಾಧಿಪತ್ಯ ಹಿಡಿತ ಸಾಧಿಸಿ ಒಂದು ದೇಶ ಒಂದು ಚುನಾವಣೆ, ಒಂದು ಪಕ್ಷ, ಒಂದು ಧರ್ಮ, ಅನ್ನುವ ಆರ್. ಎಸ್.ಎಸ್ ಪರಿಕಲ್ಪನೆಯನ್ನು ದೇಶದ ಜನರ ಮೇಲೆ, ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಏಕಾಧಿಪತಿ ಹಿಡಿತವನ್ನು ಸಾಧಿಸಲಿಕ್ಕೆ ಹೊರಟಿದೆ. ಆದ್ದರಿಂದ ಈಗಾಗಲೇ ದೇಶಾದ್ಯಂತ ಎಸ್ಐಆರ್ ಪ್ರಾರಂಭದಿಂದಲೂ ಕೂಡ ದೇಶದಲ್ಲಿ ವಿದ್ಯಾರ್ಥಿ ಯುವಜನ, ರೈತ ಕಾರ್ಮಿಕ ಸಂಘಟನೆಗಳು ಮತ ಪರಿಷ್ಕರಣೆ ಹಾಗೂ ಸಂವಿಧಾನಿಕ ಹುದ್ದೆಯಾದ ಚುನಾವಣಾ ಅಧಿಕಾರಿಗಳು ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬಾರದೆಂದು ವಿರೋಧಿಸಿ ದೇಶಾದ್ಯಂತ ಹೋರಾಟವನ್ನು ನಡೆಸುತ್ತಿದೆ. ಕೇಂದ್ರ ಸರ್ಕಾರ SIR ಹಿಂಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನೋಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ತಹಶೀಲ್ದಾರರಾದ ಕಿರಣ್ ಕುಮಾರ್ ಕುಲ್ಕರ್ಣಿ, ತಾಲೂಕ ಅಧ್ಯಕ್ಷರು ಅನಿಲ ಆರ್ ತಾಲೂಕ ಮುಖಂಡರು ರವಿತೇಜ ಮಾದಿ, ವಿರುಪಾಕ್ಷಿ ಕೋಟಗಿ, ಬಸವರಾಜ ಬಳಿಗೆರ,ವಾಹಿದ ಕಲಕಾಪುರ,ರಮೇಶ ಬಡಿಗೇರ,ಈರಪ್ಪ ಬಂಡಿವಡ್ಡರ , ಮಂಜು,ಇತರರು ಇದ್ದರು.




