ಹಾಸನ ತಾಲೂಕು ಕೆ.ಆರ್. ಪುರಂ ಮೊದಲನೇ ಹಂತದಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಗೋದಾಮು ನಿರ್ಮಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದರೆ, ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳೇ ಅನುಮತಿ ನೀಡಿದ್ದಾರೆ ಎಂದು ಕಟ್ಟಡದ ಮಾಲೀಕರು ಹೇಳುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿದ್ಯಾ ಹರ್ಬ್ಸ್ ಕಾರ್ಖಾನೆಯಲ್ಲಿ ಪೋಷ್ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ
ಬಡವರ ಒತ್ತುವರಿ ತೆರವಿಗೆ ಜೆಸಿಬಿ, ಬುಲ್ಲೋಜರ್ ಬಳಸುವ ಪಾಲಿಕೆ ಅಧಿಕಾರಿಗಳು, ಉಳ್ಳವರ ವಿಚಾರದಲ್ಲಿ ಮಾತ್ರ ಏಕೆ ಮೌನವಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



