ಮೊಳಕಾಲ್ಮೂರು | ಒಳ ಮೀಸಲಾತಿ ಜಾರಿಗೊಳಿಸಿ, ಇಲ್ಲವೇ ಕುರ್ಚಿ ಬಿಡಿ ; ದಸಂಸ ಒತ್ತಾಯ

Date:

ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ ಶೀಘ್ರವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳಮಿಸಲಾತಿಯನ್ನು ಜಾರಿಗೊಳಿಸಬೇಕು, ಎಸ್.ಸಿ.ಪಿ – ಟಿ.ಎಸ್.ಪಿ ಅನುದಾನದ ದುರ್ಬಳಕೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮೊಳಕಾಲ್ಮೂರು ಘಟಕದ ಮುಖಂಡರು ಮಂಗಳವಾರ ತಮಟೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.

- Advertisement -

ನಗರದ ಬಸ್‌ ನಿಲ್ದಾಣದಲ್ಲಿ ಜಮಾವಣೆಗೊಂಡ ಡಿಎಸ್ಎಸ್ ಕಾರ್ಯಕರ್ತರು ಒಳ ಮೀಸಲಾತಿ ಜಾರಿ ಮತ್ತು ಇತರೆ ಹಕ್ಕೊತ್ತಾಯಗಳಿಗಾಗಿ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಈ ವೇಳೆ ಮಾತನಾಡಿದ ದಸಂಸ ಮುಖಂಡ ಶ್ರೀನಿವಾಸ್, 30-40 ವರ್ಷಗಳಿಂದ ಹೋರಾಟ ನಡೆದಿದ್ದರೂ ಯಾವುದೇ ಸರ್ಕಾರಗಳು ಒಳ ಮೀಸಲಾತಿಯ ಪರವಾಗಿ ನಿರ್ಧಾರ ತೆಗೆದುಕೊಂಡು ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಈಗ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಕೊಡುವ ಅಧಿಕಾರವನ್ನು ನೀಡಿದ್ದು, ನಾನು ದಲಿತರ ಪರ, ಶೋಷಿತರ ಪರ ಎನ್ನುವ ಸಿದ್ದರಾಮಯ್ಯ ಸರ್ಕಾರ ಕೂಡಲೇ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಮೊಳಕಾಲ್ಮೂರು ತಾಲೂಕು ಅತ್ಯಂತ ಹಿಂದುಳಿದ ಬಯಲು ಸೀಮೆ ಪ್ರದೇಶವಾಗಿದ್ದು, ಇದುವರೆಗೂ ಯಾವುದೇ ಕೈಗಾರಿಕೆಗಳು ಅಭಿವೃದ್ಧಿಯಾಗಿಲ್ಲ. ಉದ್ಯೋಗ ಸೃಷ್ಟಿಯ ವಿಚಾರವಾಗಿ ಜನಪ್ರತಿನಿಧಿಗಳು ಜಾಣಮೌನ ತಾಳಿದ್ದಾರೆ. ಇದರಿಂದ ಜನ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿದ್ದಾರೆ. ಸಾಲ ಮಾಡಿ ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಆದ ಕಾರಣ ಸರ್ಕಾರ ಮತ್ತು ಜನಪ್ರತಿನಿಧಿಗಳು ಶಾಸಕರು, ಸಂಸದರು ಮತ್ತು ಸಚಿವರು ಗಮನಹರಿಸಿ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ತಾಲೂಕಿನ ಜನರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು. ಮೊಳಕಾಲ್ಮುರು ತಾಲೂಕಿನ ರೈತರಿಗೆ ನೀರನ್ನು ಕೊಡುವ, ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ತುರ್ತಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಪರಮೇಶ್ ಮಾತನಾಡಿ, ಚುನಾವಣೆಗೆ ಮುಂಚೆ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ನಮ್ಮಿಂದ ಮತ ಪಡೆದ ಸಿದ್ದರಾಮಯ್ಯ ಸರ್ಕಾರ ಒಂದುವರೆ ವರ್ಷಗಳಾದರೂ ಒಳ ಮೀಸಲಾತಿ ಬಗ್ಗೆ ತುಟಿ ಬಿಚ್ಚಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂವಿಧಾನ ಪೀಠ ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದ್ದು, ರಾಜ್ಯಗಳು ಒಳ ಮೀಸಲಾತಿಯನ್ನು ಜಾರಿಗೊಳಿಸಬಹುದು ಎಂದು ವಿವೇಚನಾ ಅಧಿಕಾರವನ್ನು ನೀಡಿದರೂ ಕೂಡ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಂದು ಅವರಿವರ ಮೇಲೆ ಆರೋಪ ಮಾಡುತ್ತ ಕಾಲ ತಳ್ಳುತ್ತಿದ್ದಾರೆ. ಈ ಕೂಡಲೇ ಒಳ ಮೀಸಲಾತಿಯ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಇದರ ಉಗ್ರ ಹೋರಾಟ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ನೀವು “ಸದಾಶಿವ ಆಯೋಗದ ವರದಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ತಾಲೂಕು ಸಂಚಾಲಕ ಚಿಕ್ಕೋಬನಳ್ಳಿ ಕರಿಬಸಪ್ಪ ಮಾತನಾಡಿ ದಲಿತರ ಪರ, ಅಹಿಂದ ವರ್ಗಗಳ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಕಾಲತಳ್ಳದೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುಧಾನ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳ ಅನುದಾನಕ್ಕೆ ಬಳಸದೆ ದುರ್ಬಳಕೆಯಾಗುತ್ತಿದ್ದು ಅದನ್ನು ತಡೆಗಟ್ಟಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೂಡ ಈ ಹಣ ದುರ್ಬಳಕೆಯಾಗುತ್ತಿದ್ದು, ಕೂಡಲೇ ಈ ಹಣ ದುರ್ಬಳಕೆ ಆಗುವುದನ್ನು ತಡೆಗಟ್ಟಬೇಕು. ಅದೇ ವರ್ಗಗಳ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಹಾಗೂ ಇತ್ತೀಚೆಗೆ ಕ್ಷೌರಿಕರೊಬ್ಬನಿಂದ ಕೊಲೆಯಾದ ದಲಿತ ಯುವಕನ ಮನೆಯವರಿಗೆ ಒಂದು ಕೋಟಿ ಪರಿಹಾರ ನೀಡಬೇಕು ಮತ್ತು ಈ ರೀತಿಯ ಪ್ರಕರಣಗಳ ವಿಚಾರಣೆಗೆ ಎಸ್ಐಟಿ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸದಾ ಜಾತಿಯ ಕುರಿತೇ ಚರ್ಚಿಸುವುದರಲ್ಲಿ ಒಂದು ಅಪಾಯವಿದೆ | thangalaan

ತಮಟೆ ಪ್ರತಿಭಟನೆಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಬಸಪ್ಪ,ಹನುಮಂತ, ಸೋಮಶೇಖರ, ತಿಪ್ಪೇ ಸ್ವಾಮಿ, ಶೇಖರಪ್ಪ, ಬಸವರಾಜು, ಕಾಡಪ್ಪ, ಅಂಜಿನಪ್ಪ, ಚಂದ್ರಪ್ಪ, ನಾಗರಾಜ್ ಎರ್ರಿಸ್ವಾಮಿ, ಸಿದ್ದಣ್ಣ, ಮರಿಸ್ವಾಮಿ ನಾಗಸಮುದ್ರ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಚಂದ್ರಪ್ಪ, ಆನಂದ, ಅಶೋಕ್, ಶಿವಣ್ಣ ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಕಲ್ಲುಕುಟುಕರ 3ಎಫ್ ಫಲಾನುಭವಿಗಳಿಗೆ ವಿನಾಕಾರಣ ತೊಂದರೆ ನೀಡದಿರಿ: ಬೋವಿ ಸಂಘ ಆಗ್ರಹ

ಬಡ ಕಲ್ಲುಕುಟುಕರ 3ಎಫ್ ಫಲಾನುಭವಿಗಳಿಗೆ ವಿನಾಕಾರಣ ತೊಂದರೆ ನೀಡುತ್ತಿರುವವರ ವಿರುದ್ಧ ಕಾನೂನು...

ಶ್ರೀನಿವಾಸಪುರ | ಕಡವೆ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನ?150ರಿಂದ 200 ಕೆ.ಜಿ. ಮಾಂಸ ವಶಕ್ಕೆ, ಓರ್ವ ಆರೋಪಿ ಬಂಧನ!

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಗುಂಟಪಲ್ಲಿ ಗ್ರಾಮದ ಸಮೀಪ...

ಸಿಂಧನೂರು | ತಿಡಿಗೋಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ: ದಲಿತರಿಗೆ ದೇವಸ್ಥಾನ ಪ್ರವೇಶ

ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ದಲಿತ ಸಮುದಾಯದವರು ದೇವಸ್ಥಾನ ಪ್ರವೇಶಿಸುವ ಮೂಲಕ ಸಾಮಾಜಿಕ...

ಕಲಬುರಗಿ | ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ಸಾವಿನ ದವಡೆಯಿಂದ ಪಾರಾದ ಒಂದೇ ಕುಟುಂಬದ ನಾಲ್ವರು

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಭಸ್ಮವಾಗಿರುವ...