ಕಾಂಗ್ರೆಸ್‌-ಬಿಜೆಪಿ ನಡುವಿನ ಹೋರಾಟವಲ್ಲ, ಕೋಮುವಾದ ವಿರುದ್ಧದ ಜನರ ಹೋರಾಟ: ಸಿಎಂ ಸಿದ್ದರಾಮಯ್ಯ

Date:

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಡೆದಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಹೋರಾಟವಲ್ಲ, ಕೋಮುವಾದ ಮತ್ತು ಜನರ ನಡುವಿನ ಹೋರಾಟ. ಇಂದು ಸಮಾಜದಲ್ಲಿ ಬಸವಣ್ಣ, ಕುವೆಂಪು, ಎಚ್‌.ಎಸ್‌ ದೊರೆಸ್ವಾಮಿ ಅವರ ಆಶಯಗಳನ್ನು ಈಡೇರಿಸಲು ಎಲ್ಲರೂ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಸಮಯದಲ್ಲಿ ಕೋಮುವಾದದ ವಿರುದ್ಧ ಜನರಲ್ಲಿ ಜಾಗೃತ್ತಿ ಮೂಡಿಸಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಹಲವಾರು ಸಂಘಟನೆಗಳು ‘ಎದ್ದೇಳು ಕರ್ನಾಟಕ’ ಅಭಿಯಾನದಡಿ ದುಡಿದಿದ್ದವು. ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದ ಎಲ್ಲ ಕಾರ್ಯಕರ್ತರಿಗೂ ಅಭಿನಂದನೆ ಮತ್ತು ಹೊಸ ಸರ್ಕಾರಕ್ಕೆ ಹೊಣೆಗಾರಿಕೆಗಳನ್ನು ಸಲ್ಲಿಸಲು ಅಭಿಯಾನವು ಸಮಾವೇಶ ಆಯೋಜಿಸಿತ್ತು.

ಸಮಾವೇಶದಲ್ಲಿ ಭಾಗಿಯಾಗಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿದ್ದ ಕಾರಣ, ತಮ್ಮ ಮಾತುಗಳನ್ನು ಬರೆದು ಕಳಿಸಿದ್ದರು. ಅವರ ಮಾತುಗಳು ಹೀಗಿದ್ದವು, “ಸಂವಿಧಾನದ ಆಶಯಗಳಿಗಾಗಿ ದುಡಿದ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ, ಗೌರಿ ಲಂಕೇಶ್, ಎಂ.ಎಂ ಕಲಬುರಗಿ ಅವರನ್ನು ಸ್ಮರಿಸುತ್ತಿರುವ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಬರಲಾಗಲಿಲ್ಲ. ಜನಾಂದೋಲನಗಳು ಚುನಾವಣಾ ಸಮಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಚುನಾವಣೆ ವೇಳೆ, ರೈತ ಸಂಘಟನೆಗಳು, ದಲಿತ ಸಂಘಟನೆಗಳ ನಿರ್ಣಯವೇನು ಎಂದು ಎದುರು ನೋಡುತ್ತಿದ್ದ ಕಾಲವೊಂದಿತ್ತು” ಎಂದು ಅವರು ಹೇಳಿದ್ದಾರೆ.

“ಆದರೆ, ಅಂತಹದೊಂದು ಸಂದರ್ಭದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣೆಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ. ಕೋಮುವಾದಿ ಶಕ್ತಿಗಳು ಪ್ರಬಲವಾಗುತ್ತಿವೆ. ಇಂತಹ ಸಮಯದಲ್ಲಿ ಎದ್ದೇಳು ಕರ್ನಾಟಕ ಆಂದೋಲನ ನಡೆದದ್ದು ಪ್ರಶಂಸನೀಯ” ಎಂದಿದ್ದಾರೆ.

“ನನಗೆ ತಿಳಿದಂತೆ, ಎದ್ದೇಳು ಕರ್ನಾಟಕ ಅಭಿಯಾನದಲ್ಲಿ 100ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿ, 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಶ್ರಮಿಸಿದ್ದಾರೆ. ತಮ್ಮಲ್ಲಿದ್ದ ಸಂಪನ್ಮೂಲಗಳ ಹೊರತಾಗಿಯೂ ಬೃಹತ್ ರ್ಯಾಲಿ, ಸಮಾವೇಶಗಳನ್ನು ನಡೆಸದೇ, ತಳಮಟ್ಟದಲ್ಲಿ ದುಡಿದು, ಜನರನ್ನು ಜಾಗೃತಗೊಳಿಸಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಅಭಿಯಾನದಲ್ಲಿ ಸಾಹಿತಿ ದೇವನೂರ ಮಹಾದೇವ, ದಲಿತ ಸಂಘಟನೆಗಳು, ಕರ್ನಾಟಕ ಜನಶಕ್ತಿ, ರೈತ ಸಂಘಟನೆ, ಗ್ರಾಮೀಣ ಕೂಲಿಕಾರರ ಸಂಘಟನೆಗಳ ಶ್ರಮವಹಿಸಿ ದುಡಿದಿದ್ದಾರೆ. ಈ ಸಮಯದಲ್ಲಿ ದೊರೆಸ್ವಾಮಿ ಅವರು ಇದ್ದಿದ್ದರೆ, ಖಂಡಿತಾ ಇಲ್ಲಿರುತ್ತಿದ್ದರು. ಗೌರಿ ಲಂಕೇಶ್, ಕೆ.ಎ ಸುಬ್ಬಯ್ಯ ಇರುತ್ತಿದ್ದರು. ದೊರೆಸ್ವಾಮಿ ಅವರು ನಮ್ಮನ್ನು ಸ್ವಲ್ಪ ಹೊಗಳಿ, ಸ್ವಲ್ಪ ಬೈದು, ಈ ರೀತಿಯಲ್ಲಿ ಕೆಲಸಗಳು ಆಗಬೇಕೆಂದು ಎಚ್ಚರಿಸುತ್ತಿದ್ದರು” ಎಂದು ಎಲ್ಲರನ್ನಗಲಿದ ದೊರೆಸ್ವಾಮಿ, ಗೌರಿ, ಸುಬ್ಬಯ್ಯರನ್ನು ಸ್ಮರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ವಿಜಯಪುರ | ಮೇ 27ರಿಂದ ‘ಮೇ ಸಾಹಿತ್ಯ ಮೇಳ’: ಹರ್ಷ ಮಂದರ್, ತೀಸ್ತಾ, ಪ್ರಕಾಶ್ ಅಂಬೇಡ್ಕರ್ ಭಾಗಿ

“ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಷಂಡ್ಯತ್ರ ರೂಪಿಸುತ್ತಿದೆ. ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಅದಕ್ಕೆಲ್ಲ ಬಗ್ಗದೆ, ಜನರ ಆಶೋತ್ತರಗಳನ್ನು ಈಡೇರಿಸಲು ಕೆಲಸ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿಯೂ ಈ ಅಭಿಯಾನ ನಮ್ಮೊಂದಿಗಿರಬೇಕು. ನಮ್ಮಿಂದ ತಪ್ಪಾದಾಗ ಎಚ್ಚರಿಸಬೇಕು” ಎಂದು ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ, ಶಾಸಕ ಬಿ.ಆರ್ ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎದ್ದೇಳು ಕರ್ನಾಟಕ ಅಭಿಯಾನದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಬಡಗಲಪುರ ನಾಗೇಂದ್ರ, ರಾಘವೇಂದ್ರ ಕುಷ್ಠಗಿ, ಡಾ. ವಿಜಯ, ಗೌರಿ, ಮಲ್ಲಿಗೆ ಸೇರಿದಂತೆ ಹಲವರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಸಚಿವರು | ಆರ್‌ ಬಿ ತಿಮ್ಮಾಪೂರ್‌ ಮಂತ್ರಿಯಾದರೂ ಮುಧೋಳ ಕ್ಷೇತ್ರದ ಜನರಿಗೆ ನೀಗದ ಬವಣೆ  

ಬಾಗಲಕೋಟೆ ಜಿಲ್ಲೆಯ ಏಕೈಕ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ,...

ಮಂಡ್ಯ | ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ : ಸಚಿವ ಎನ್ ಚೆಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಹರಿಸಿ, ಜಿಲ್ಲೆಯ...

ರಾಮನಗರ | ಕಾಡಾನೆ ದಾಳಿಗೆ ಸಾವು; ಕುಟುಂಬಕ್ಕೆ ಸಚಿವರಿಂದ ಪರಿಹಾರದ ಚೆಕ್‌ ವಿತರಣೆ

ರಾಮನಗರ ಜಿಲ್ಲೆ ಕನಕಪುರ ಬಳಿಯ ಮುತ್ತುರಾಯನ ದೊಡ್ಡಿ ಗ್ರಾಮಕ್ಕೆ ಅರಣ್ಯ ಜೀವಿಶಾಸ್ತ್ರ...

ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿರುವ 1500 ಪ್ರಯಾಣಿಕರಿಗೆ ಅಗತ್ಯ ನೆರವು

1500 ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ನೆರವು ಕಾರ್ಮಿಕರ ನೆರವಿಗೆ...