ಗದಗ | ಸತ್ತರ ಹೂಳಲು ಸುಡುಗಾಡಿಗಿಲ್ಲ ದಾರಿ; ಜಮೀನುಗಳಿಗೆ ಹೋಗಲು ರೈತರ ಪರದಾಟ

Date:

ಊರಲ್ಲಿ ಯಾರಾದ್ರೂ ಸತ್ತರೆ ಅವರನ್ನು ಹೂಳಲು, ಸುಡಲು ಸುಡುಗಾಡಿಗೆ ದಾರಿ ಇಲ್ಲ. ರೈತರಿಗೆ ಸುಡುಗಾಡು ದಾರಿ ಮೂಲಕ ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲ. ಸ್ಮಶಾನಕ್ಕೆ, ಜಮೀನಿಗೆ ಹೋಗಲು ರೈತರು, ಗ್ರಾಮಸ್ಥರು ಪರದಾಡುತ್ತಿದ್ದಾರೆ – ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದ ಜನರ ಪರಿಸ್ಥಿತಿ.

- Advertisement -

ಗ್ರಾಮದ ರೈತರು ಜಮೀನಿಗೆ ಮತ್ತು ಸ್ಮಶಾನಕ್ಕೆ ಹೋಗಲು ಸರ್ವೇ ನಂಬರ್ 112 ಹಾಗೂ ಸರ್ವೇ ನಂಬರ್ 1ರಲ್ಲಿರುವ ಜಮೀನುಗಳ ನಡುವೆ ಇದ್ದ ದಾರಿಯನ್ನು ಬಳಸುತ್ತಿದ್ದರು. ಹಲವಾರು ವರ್ಷಗಳಿಂದ ಎಲ್ಲರಿಗೂ ದಾರಿ ಮುಕ್ತವಾಗಿತ್ತು. ಇದೇ ದಾರಿಯನ್ನು ಇಡೀ ಗ್ರಾಮದ ಜನರು ಬಳಸುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

‘ಎಪ್ಸ್ಟೀನ್‌’ನದ್ದು ಆತ್ಮಹತ್ಯೆಯಲ್ಲ, ಕೊಲೆ! ತಜ್ಞರ ಹೊಸ ಅಧ್ಯಯನದಿಂದ ಸ್ಫೋಟ;...

ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ...

ಆದರೆ, ಇತ್ತೀಚೆಗೆ, ಆ ಜಮೀನಿನ ಮಾಲೀಕರು 7 ಅಡಿ, 6 ಇಂಚು ಅಳೆಯ ದಾರಿ ಬಿಟ್ಟು, ಕಾಂಪೌಂಡ್‌ ಹಾಕಿಕೊಂಡಿದ್ದಾರೆ. ಈ ಕಿರಿದಾದ ದಾರಿಯಲ್ಲಿ ಗ್ರಾಮಸ್ಥರು ಮೃಹದೇಹವನ್ನು ಹೊತ್ತುಕೊಂಡು ಹೊಗಲು ಸಾಧ್ಯವಾಗುತ್ತಿಲ್ಲ. ರೈತರು ತಮ್ಮ ಎತ್ತಿನ ಗಾಡಿಗಳಲ್ಲಿ ಜಮೀನಿಗೆ ಹೋಗಲೂ ಸಾಗುತ್ತಿಲ್ಲ. ಸರಿಯಾದ ದಾರಿ ಇಲ್ಲದೆ, ಗ್ರಾಮದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

“ಸುಡುಗಾಡು ದಾರಿಯಲ್ಲಿ ಊರಿನ ಸಾಕಷ್ಟು ರೈತರ ಜಮೀನುಗಳಿವೆ. ಸುಮಾರು ವರ್ಷಗಳಿಂದ ರೈತರು ಇದೆ ದಾರಿಯಲ್ಲಿ ಜಮೀನುಗಳಿಗೆ ಹೋಗುತ್ತಿದ್ದರು. ಆದರೆ, ಹುಬ್ಬಳ್ಳಿಯವರು ಗ್ರಾಮದಲ್ಲಿ ಜಮೀನು ಖರೀದಿಸಿದ್ದಾರೆ. ತಮ್ಮ ಜಮೀನಿನಲ್ಲಿದ್ದ ದಾರಿಯನ್ನೂ ಸೇರಿಸಿ ಕಾಂಪೌಂಡ್‌ ಹಾಕಿಕೊಂಡಿದ್ದಾರೆ. ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲು, ಸುಡುಗಾಡು ಗಟ್ಟಿಗೆ ಹೋಗಲು ದಾರಿ ಬಿಡುತ್ತಿಲ್ಲ” ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.

“ಊರಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಹೂಳಲು ಗ್ರಾಮದ ಜನರು ಇದೇ ದಾರಿ ಮೂಲಕ ಸುಡುಗಾಡು ಗಟ್ಟಿಗೆ ಹೋಗುತ್ತಿದ್ದರು. ಆದರೆ, ಈಗ ದಾರಿ ಇಲ್ಲದೆ, ಸ್ಮಶಾನಕ್ಕೆ ಹೋಗುವುದೂ ಕಷ್ಟವಾಗಿದೆ. ಹಲವಾರು ಜಮೀನುಗಳನ್ನು ಬಳಸಿಕೊಂಡು ಸ್ಮಶಾನಕ್ಕೆ ಬರುವಂತಹ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥ ಅಮರಪ್ಪ ಗುಡುಗುಂಟಿ ಈದಿನ.ಕಾಮ್‌ ಜೊತೆ ಮಾತನಾಡಿ, “ಬಹಳ ಹಿಂದಿನಿಂದಲೂ ಸುಡಗಾಡ ದಾರಿಯಲ್ಲಿಯೇ ಹೊಲಗಳಿಗೆ ಹೋಗಿ ಬದುಕು ನಡಿಸುತ್ತಿದ್ದೆವು. ಯಾರೋ ಹುಬ್ಬಳ್ಳಿಯವರಂತೆ ಹೊಲ ಖರೀದಿಸಿ, ಕಾಂಪೌಂಡ್‌ ಹಾಕಿಕೊಂಡಿದ್ದಾರೆ. ಸುಡುಗಾಡ ಗಟ್ಟಿಗೆ ಮತ್ತು ಹೊಲಕ್ಕೆ ಹೋಗಲು ದಾರಿ ಬಿಡುತ್ತಿಲ್ಲ. ನಮಗೆ ದಾರಿ ಮಾಡಿಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ಕೊಟ್ಟು ಸಾಕಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ರೈತ ಸಂಘದ ಅಧ್ಯಕ್ಷರಾದ ಸುರೇಶಪ್ಪ ಬಾಗಲದ ಮಾತನಾಡಿ, “ಗ್ರಾಮದ ರೈತರಿಗೆ ಹೊಲಗಳಿಗೆ ಹೋಗಲಿಕ್ಕೆ ಇದೇ ದಾರಿ ಬಳಸುತ್ತಿದ್ದರು. ಆದರೆ, ಈಗ ರೈತರು ಬೆಳೆದ ಫಸಲನ್ನು ಹೊಲದಿಂದ ಮನೆಗೆ ತರಲು ಆಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿದ್ದ ಲಕ್ಷ್ಮೇಶ್ವರ ತಹಶೀಲ್ದಾರ್ ವಾಸುದೇವ ಸ್ವಾಮಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, “ನಕಾಶೆಯಲ್ಲಿ ಇರುವಂತೆ ಗ್ರಾಮದ ಜನರಿಗೆ ದಾರಿಯನ್ನು ಒದಗಿಸುತ್ತೇವೆ. ಅಲ್ಲಿಯವರೆಗೆ ಇದೇ ದಾರಿಯನ್ನು ಉಪಯೋಗಿಸಬಹುದು” ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಲ್ಲೇಶ್ ಮಣ್ಣಮ್ಮನವರ
ಮಲ್ಲೇಶ್ ಮಣ್ಣಮ್ಮನವರ
ಸಿಟಿಜನ್ ಜರ್ನಲಿಸ್ಟ್, ಲಕ್ಷ್ಮೇಶ್ವರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಚಳಗೇರಿಯಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ; 103 ಮಂದಿಗೆ ಚಿಕಿತ್ಸೆ

ಚಳಗೇರಿ ಗ್ರಾಮದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಗ್ರಾಮ ಅಭಿವೃದ್ಧಿ ಸಮಿತಿ ಚಳಗೇರಿ...

ಯಲ್ಲಾಪುರ | ಆರತಿಬೈಲ್ ಘಟ್ಟದಲ್ಲಿ ಕರಿ ಚಿರತೆ ಸಾವು; ವಾಹನ ಡಿಕ್ಕಿ ಶಂಕೆ

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 52ರ ಆರತಿಬೈಲ್ ಘಟ್ಟದ ಬಳಿ ಸುಮಾರು ಎರಡು...

ಬಾಗೇಪಲ್ಲಿ| ಡಿಸಿಸಿ ಬ್ಯಾಂಕ್ ನನ್ನ ಹೃದಯಕ್ಕೆ ಸಮಾನ, ಬ್ಯಾಂಕಿನ ಸಾಧನೆಗೆ ಹಿನ್ನಡೆಯಾಗುವ ಕೆಲಸ ಸಹಿಸುವುದಿಲ್ಲ– ಕೊತ್ತನೂರು ಮಂಜುನಾಥ್

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ನನ್ನ ಹೃದಯಕ್ಕೆ ಸಮಾನವಾಗಿದೆ....

ಶಿರಹಟ್ಟಿ | ಸಮುದಾಯ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಐಇಸಿ ಸಂಯೋಜಕರ ಭೇಟಿ, ಪರಿಶೀಲನೆ

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೋಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಡುವು...