ಮಳವಳ್ಳಿ | ವಿಷಮುಕ್ತ ಭೂಮಿಗೆ ಸಾವಯವ ಕೃಷಿ ಅನುಸರಿಸಿ: ಕೃಷಿಕರ ಸಂಘ ಮನವಿ

Date:

ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಮಳವಳ್ಳಿಯ, ಸಾತೇನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಅವರ ತೋಟದಲ್ಲಿ ರೈತರ ಸಭೆ ನಡೆಸಲಾಯಿತು. ಸಂಘದ ಅಧ್ಯಕ್ಷ ಮಹೇಶ್ ಕುಮಾರ್, ಕಾರ್ಯದರ್ಶಿ ಚಿಕ್ಕಣ್ಣ ಶಿವಕುಮಾರ್ ಹಾಗೂ ನಿರ್ದೇಶಕ ಸುವರ್ಣ ಅವರು ಸುಮಾರು 150 ರೈತರನ್ನು ಸಂಘದ ವತಿಯಿಂದ ಕರೆತಂದಿದ್ದರು.

- Advertisement -

ಸಾವಯವ ರೈತ ಕುಮಾರಸ್ವಾಮಿ ತಮ್ಮ ಅನುಭವ ಮತ್ತು ಆದಾಯದ ವಿವರಗಳನ್ನು ಹಂಚಿಕೊಂಡರು. “ಕೇವಲ ಎಂಟು ಕುಂಟೆ ಜಮೀನಿನಲ್ಲಿ ಸುಮಾರು 30 ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಯುತ್ತೇನೆ. ನನ್ನದೇ ಮಾರುಕಟ್ಟೆಯನ್ನು ಸಿದ್ಧಪಡಿಸಿಕೊಂಡು ಸದಸ್ಯರನ್ನು ನೇಮಕ ಮಾಡಿ ಅವರಿಗೆ ತರಕಾರಿ ಮಾರಾಟ ಮಾಡುತ್ತೇನೆ. ವಿವಿಧ ತರಕಾರಿಗಳನ್ನು ಬೆಳೆದು ಮಾರುಕಟ್ಟೆ ಬೆಲೆಗೆ ಮಾರುತ್ತೇನೆ” ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

“ನಮ್ಮ ತಂದೆ-ತಾತಂದಿರ ಕಾಲದಲ್ಲಿ ಕೃಷಿ ಅಂದರೆ ಸಗಣಿ ಗೊಬ್ಬರ, ಎಲೆ ಗೊಬ್ಬರ, ಬೇವಿನ ಹಿಂಡಿ. ಮಣ್ಣಿಗೆ ಯಾವುದೇ ಕೇಡಾಗುತ್ತಿರಲಿಲ್ಲ. ಬೆಳೆದ ಅಕ್ಕಿ, ರಾಗಿ, ತರಕಾರಿ ತಿಂದರೆ ಆರೋಗ್ಯ ಉತ್ತಮವಾಗಿತ್ತು. ಹೆಚ್ಚು ಬೆಳೆ, ಹೆಚ್ಚು ಹಣ ಬೇಕೆಂದು ರಾಸಾಯನಿಕ ಗೊಬ್ಬರ ಮತ್ತು ವಿಷದ ಔಷಧಿ ಸಿಂಪಡಿಸಲು ಆರಂಭಿಸಿದೆವು. ಸ್ವಲ್ಪ ಕಾಲ ಬೆಳೆ ಹೆಚ್ಚಾಯಿತು ನಿಜ. ಆದರೆ ನಂತರ ಮಣ್ಣು ಸತ್ತುಹೋಯಿತು, ನೀರು ಕೆಟ್ಟುಹೋಯಿತು, ನಮ್ಮ ಆರೋಗ್ಯವೂ ಕೆಟ್ಟುಹೋಯಿತು. ಇಂದು ಆಸ್ಪತ್ರೆಗೆ ಹೋದರೆ ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್ ಎಂದು ಸರತಿ ನಿಂತಿದೆ. ಇದಕ್ಕೆಲ್ಲಾ ಮೂಲ ಕಾರಣ ನಾವು ತಿನ್ನುವ ವಿಷ. ಇನ್ನು ಮುಂದೆ ನಾವು ಸಾವಯವದ ಕಡೆಗೆ ಹೋಗಲೇಬೇಕು” ಎಂದರು.

“ನನ್ನ ರೈತ ಬಾಂಧವರಲ್ಲಿ ನಾನು ಕೈಮುಗಿದು ಕೇಳಿಕೊಳ್ಳುವುದು ಒಂದೇ – ಒಮ್ಮೆಲೆ ಇಡೀ ಜಮೀನನ್ನು ಬದಲಾಯಿಸಬೇಡಿ. ಮೊದಲು ಅರ್ಧ ಎಕರೆ ಅಥವಾ ಒಂದು ಎಕರೆ ಸಾವಯವ ಮಾಡಿ ನೋಡಿ. ಫಲಿತಾಂಶ ನೋಡಿದ ಮೇಲೆ ನೀವೇ ಮುಂದೆ ಬರುತ್ತೀರಿ” ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದ ಶ್ರೀ ಮಾತನಾಡಿ, “ನಮ್ಮ ಭೂಮಿ ತಾಯಿ. ಅವಳಿಗೆ ವಿಷ ಹಾಕುವುದು ಮಹಾಪಾಪ. ಗೋಮಾತೆಯ ಸಗಣಿ, ಗೋಮೂತ್ರವೇ ನಮ್ಮ ಭೂಮಿಗೆ ಅಮೃತ. ರಾಸಾಯನಿಕದಿಂದ ಬೆಳೆದ ಆಹಾರ ದೇಹವನ್ನೂ, ಮನಸ್ಸನ್ನೂ ಕೆಡಿಸುತ್ತದೆ. ಸಾವಯವ ಕೃಷಿಯೇ ನಮ್ಮ ಋಷಿ-ಮುನಿಗಳು ತೋರಿಸಿದ ಧರ್ಮದ ಮಾರ್ಗ. ವಿಷವಿಲ್ಲದ ಅನ್ನವನ್ನೇ ದೇವರಿಗೆ ನೈವೇದ್ಯ ಮಾಡಬೇಕು. ರೈತನು ಆರೋಗ್ಯವಾಗಿದ್ದರೆ ಮಾತ್ರ ದೇಶ ಆರೋಗ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಸಾವಯವಕ್ಕೆ ಮರಳಿ, ಭೂಮಿತಾಯಿಯನ್ನು ರಕ್ಷಿಸೋಣ” ಎಂದು ಹೇಳಿದರು.

ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, “ನಮ್ಮ ಸಂಘ ಯಾವುದೇ ಸಮುದಾಯ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ರಾಜಕೀಯವಾಗಿ ದೂರವಿದೆ. ಸದ್ಯ 480 ಸದಸ್ಯರು ಇದ್ದಾರೆ. ಕರ್ನಾಟಕ ಸರ್ಕಾರಕ್ಕೆ ನಮ್ಮ ವಿನಂತಿ – ಈ ಬಾರಿಯ ಬಜೆಟ್‌ನಲ್ಲಿ ಪ್ರಥಮ ಬಾರಿಗೆ ಕೃಷಿಗೆ ಆದ್ಯತೆ ನೀಡಬೇಕು. ವಿಶೇಷವಾಗಿ ಸಾವಯವ ಕೃಷಿಗೆ ಪ್ರತ್ಯೇಕ ಆದ್ಯತೆ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆಯ ಚಳಿಗಾಲದ ಅಧಿವೇಶನ; ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಗೆ ಬಿಜೆಪಿ ತಯಾರಿ

ಕೇಂದ್ರ ಬಿಜೆಪಿ ಸರ್ಕಾರವು ಮುಂಬರುವ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಸಂಸತ್ತಿನ ವಿಶೇಷ...

ಹಾಸನ | ಕಾಡಾನೆ ದಾಳಿಗೆ ಕಾರ್ಮಿಕ ಸಾವು 

ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಸಾವನಪ್ಪಿರುವ ಘಟನೆ ನಡೆದಿದೆ. ಕಾಡಾನೆ...

Aurad Ground Report | ನೀರಿನ ತ್ರಾಸ ಭಾಳ ಅದಾ, ಟ್ಯಾಂಕರ್‌ ನೀರು ಭ್ಯಾಡಾ, ನಮ್ಗ್ ನಳ ನೀರೇ ಬೇಕ್!

"ಎಂಟು ದಿನಕ್ಕೊಮ್ಮೆ ನೀರಿನ ಟ್ಯಾಂಕರ್‌ ಬರ್ತದೆ, ಅವರು ಮನೆಗೊಂದು ಬ್ಯಾರಲ್‌ ನೀರಷ್ಟೇ...

ರಸ್ತೆ ಅಪಘಾತ | ರಾಜ್ಯದಲ್ಲಿ ವರ್ಷಕ್ಕೆ 11 ಸಾವಿರಕ್ಕೂ ಹೆಚ್ಚು ಬಲಿ; ಪ್ರತಿದಿನ ಸರಾಸರಿ 31 ಮಂದಿ ಸಾವು!

ರಾಜ್ಯದಲ್ಲಿ ರಸ್ತೆ ಅಪಘಾತಗಳು ಆತಂಕಕಾರಿ ಮಟ್ಟ ತಲುಪಿದ್ದು, ಪ್ರತಿ ವರ್ಷ 11...