ಟ್ರಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ರಾಣಿಬೆನ್ನೂರು-ಹಂಸಭಾವಿ ಮಾರ್ಗ ಮದ್ಯದಲ್ಲಿ ಇಂದು ನಡೆದಿದೆ.
ಮೃತಪಟ್ಟ ಬೈಕ್ ಸವಾರ ವೀರಾಪಾಕ್ಷಪ್ಪ ಕರೇಗೌಡ್ರು (60) ಹಿರೇಕೆರೂರ ತಾಲೂಕಿನ ಸುತ್ತಕೋಟೆ ಗ್ರಾಮದವರು.
ರಾಣಿಬೆನ್ನೂರ ಕಡೆಗೆ ಹೊರಟಿದ್ದ ಕಬ್ಬಿನ ಖಾಲಿ ಟ್ರಾಕ್ಟರ್, ಓವರ್ ಟೇಕ್ (ಹಿಂದಿಕ್ಕಲು) ಮಾಡುವಾಗ ಪಕ್ಕದ ಬೈಕ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಟ್ರಾಕ್ಟರ್ ಹಿಂಭಾಗದ ಟೇಲರ್ ಗಾಲಿಗೆ ಸಿಕ್ಕು ಬೈಕ್ ಸವಾರ ಮೃತಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಬಿ.ಸಿ.ಪಾಟೀಲ್ ಅವರು ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



