ಗುರುಪುರ | ನೂತನ ಕಾರ್ಮಿಕ ಸಂಹಿತೆ ರದ್ದತಿಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

Date:

ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಇಂದು ದಕ್ಷಿಣ ಕನ್ನಡದ ಗುರುಪುರ ಕೈಕಂಬದಲ್ಲಿ ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.

- Advertisement -

ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಕ್ಷಿಸಬೇಕು, ಕಲ್ಯಾಣ ಮಂಡಳಿಯ ಹಣ ದುರುಪಯೋಗ ತಡೆಯಬೇಕು ಎಂದು ಒತ್ತಾಯಿಸಿ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ (CWFI) ಕೇಂದ್ರ ಸಮಿತಿ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಅದರ ಭಾಗವಾಗಿ ಗುರುಪುರ, ಕೈಕಂಬದಲ್ಲಿ ನಿರ್ಮಾಣ ಕಾರ್ಮಿಕರ ಸಂಘವು ಕೈಕಂಬ ಜಂಕ್ಷನ್ನಿಂದಿ ನಾಡ ಕಚೇರಿವರೆಗೆ ಮೆರವಣಿಗೆ ನಡೆಸಿದರು‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕರ್ನಾಟಕ ಏಕೀಕರಣಕ್ಕೆ 70 ವರ್ಷ: ಕನ್ನಡ ಅನ್ನದ ಭಾಷೆಯಾಗುವುದೆಂದು?

ಕರ್ನಾಟಕ ಏಕೀಕರಣಗೊಂಡು ಈ ವರ್ಷಕ್ಕೆ 70 ವರ್ಷ. ಆದರೆ, ಎಪ್ಪತ್ತು ವರ್ಷಗಳ ಕನ್ನಡ ನಾಡಿನ ನಡೆಯತ್ತ ಒಂದು ನೋಟ ಹರಿಸಿದರೆ ಕಾಣಿಸುವ ಚಿತ್ರವೇ ಬೇರೆಯಾಗಿದೆ. “ಇಷ್ಟು ವರ್ಷವಾದರೂ, ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ....

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಮುಖಂಡ ಸದಾಶಿವ ದಾಸ್ “50 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದ ನಿರ್ಮಾಣದಲ್ಲಿ ಕೆಲಸ ಮಾಡುವವರನ್ನು ನಿರ್ಮಾಣ ಕಾರ್ಮಿಕರು ಎಂದು ಪರಿಗಣಿಸದಿರಲು ತೀರ್ಮಾನಿಸುವ ಮೂಲಕ ಕಟ್ಟಡ ನಿರ್ಮಾಣ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, “ಕಾರ್ಮಿಕ ಕಾಯ್ದೆಗೆ ಬದಲಿಯಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಭಾರತದ ಕಾರ್ಮಿಕ ವರ್ಗದ ಕೊರಳಿಗೆ ಬಿಗಿದಿರುವ ಉರುಳಾಗಿದೆ‌. ಮೋದಿ ಸರಕಾರ ಕಾರ್ಪೊರೇಟ್ ಬಂಡವಾಳದಾರರ ಉದ್ದಾರಕ್ಕೆ ಟೊಂಕ ಕಟ್ಟಿದೆ. ಅದಕ್ಕಾಗಿ ಕಾರ್ಮಿಕ ವರ್ಗದ ಹಕ್ಕುಗಳನ್ನು ನಿರ್ದಯವಾಗಿ ಕಿತ್ತುಹಾಕುತ್ತಿದೆ. ಕಾರ್ಮಿಕರು ಎಚ್ಚೆತ್ತುಕೊಳ್ಳದಿದ್ದರೆ ಬೀದಿಪಾಲಾಗಬೇಕಾಗುತ್ತದೆ ಎಂದು ಎಚ್ಚರಿಸಿದರು‌.

ಪ್ರತಿಭಟನೆಯ ನೇತೃತ್ವವನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರುಗಳಾದ ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ಹರೀಶ್ ಮಂಗಲ್ಚಾರ್, ಇಬ್ರಾಹಿಂ ಕುಪ್ಪೆಪದವು, ಲೋಕೇಶ್, ರಾಮ ಶೆಟ್ಟಿಗಾರ್ ಕೊಂಪದವು, ರವೀಂದ್ರ ಶೆಟ್ಟಿಗಾರ್, ಆನಂದ ದೇವಾಡಿಗ, ಜನಾರ್ದನ ಗೌಡ ಎಡಪದವು, ರೋಹಿತ್ ಶೆಟ್ಟಿಗಾರ್, ಪುತ್ತು ಗೌಡ ಎಡಪದವು, ದಿನೇಶ್ ಇರುವೈಲು, ಭೋಜ ಇರುವೈಲು, ಆನಂದ ಪೂಜಾರಿ ಇರುವೈಲು, ರಾಜೇಶ್ ನಾಯ್ಕ್, ಸುರೇಶ್ ಆಚಾರ್ಯ, ಅಶೋಕ ವಾಮಂಜೂರು, ಹೊನ್ನಯ್ಯ ಅಮೀನ್, ಜಯಶೀಲ ವಾಮಂಜೂರು, ಗೋಪಾಲ ಮೂಲ್ಯ ಮಳಲಿ, ಯಶೋಧ ಮಳಲಿ, ಜನಾರ್ಧನ ಮಳಲಿ, ವೆಂಕಪ್ಪ ಸಾಲ್ಯಾನ್, ಬಾಬು ಗೌಡ ಕೊಂಪದವು ವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯ್‌ ರೀತಿ ರಾಜಕೀಯಕ್ಕಾಗಿ ಸಿನಿಮಾ ಬಿಡಬೇಡಿ: ಧನುಷ್‌ಗೆ ಸಾಯಿ ಪಲ್ಲವಿ ಕಿವಿಮಾತು

 ‘ರಾಮಾಯಣ’ ಚಿತ್ರದ ಯಶಸ್ಸಿನ ಬೆನ್ನಲ್ಲೇ, ನಟಿ ಸಾಯಿ ಪಲ್ಲವಿ ಅವರು ಧನುಷ್...

ಮಳವಳ್ಳಿ | ವಿಷಮುಕ್ತ ಭೂಮಿಗೆ ಸಾವಯವ ಕೃಷಿ ಅನುಸರಿಸಿ: ಕೃಷಿಕರ ಸಂಘ ಮನವಿ

ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಮಳವಳ್ಳಿಯ, ಸಾತೇನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ...

ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ದೇಶದ ರೈತರು ಒಗ್ಗಟ್ಟಾಗಿ ಹೋರಾಡಬೇಕು; ಬೃಂದಾ ಕಾರಟ್‌

ಜನವಿರೋಧಿ, ರೈತವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ದೇಶದ ರೈತರು ಒಗ್ಗಟ್ಟಾಗಿ ಹೋರಾಟ...

ಹಾಸನ | ಕಾಡಾನೆ ದಾಳಿ: ಕಾರ್ಮಿಕ ಸಾವು; ಗ್ರಾಮಸ್ಥರ ಆಕ್ರೋಶ 

ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಸಾವನಪ್ಪಿರುವ ಘಟನೆ ನಡೆದಿದೆ....