ಗದಗ | ಮನುಷ್ಯರನ್ನು ಮನುಷ್ಯರಾಗಿ ನೋಡುವವರು ಮಾತ್ರ ಸಂವಿಧಾನವನ್ನು ಅಪ್ಪಿಕೊಳ್ಳುವರು: ಎಚ್ ಕೆ ಪಾಟೀಲ್

Date:

ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವ ದಿನ. ದೇವನೂರು ಅವರು ಹೇಳಿದ ಮಾತು “ಅಂಬೇಡ್ಕರ್ ಅವರ ರಥ ಚಲಿಸುತ್ತಿದೆ” ಎಂಬ ಮಾತು. ಅಂಬೇಡ್ಕರ್ ಮನಸ್ಸುಗಳಿಗೆ ಯಶಸ್ಸು ಸಿಕ್ಕಿದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.

ಗದಗ ಪಟ್ಟಣದ ನಗರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಮಾತನಾಡಿದರು.

“ಸಂವಿದಾನವನ್ನು ಬದಲಾಯಿಸುವುದಕ್ಕೆ 400 ಸೀಟುಗಳು ಬೇಕೆಂಬ ಮಾತುಗಳು ಗರ್ವ ಅಹಂಕಾರದಿಂದ ಬಂದಂತವುಗಳು. ಅಂತಹವರಿಗೆ ಬುದ್ಧಿ ಕಲಿಸಬೇಕಿದೆ. ಈ ದೇಶದ ಸಂವಿಧಾನ ಒಂದು ಧರ್ಮ ಗ್ರಂಥ. ಮನುಷ್ಯರನ್ನು ಮನುಷ್ಯರಾಗಿ ನೋಡುವವರು ಮಾತ್ರ ಸಂವಿಧಾನವನ್ನು ಅಪ್ಪಿಕೊಳ್ಳುವರೇ ಹೊರತು, ಮನುಷ್ಯರನ್ನು ಮನುಷ್ಯರನ್ನಾಗಿ ನೋಡದವರು ಮಾತ್ರ ಸಂವಿಧಾನ ವಿರೋದಧಿಸಲು ಸಾಧ್ಯ. ಗ್ಯಾರಂಟಿ ಯೋಜನೆಗಳು ಬಡವರಿಗೆ ಅನುಕೂಲ ಆಗುವಂತಹವುಗಳು. ಅವುಗಳ ಕುರಿತು ಬಿಜೆಪಿಯವರು ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಇಂತಹ ಮಾತುಗಳು ಮುಂದುವರೆದರೆ ಸಂವಿಧಾನಕ್ಕೆ ಗಂಡಾತರ ಬರುವ ಮುಂಚೆಯೇ ಸಂವಿಧಾನ ರಕ್ಷಣೆ ಮಾಡಲು ಮುಂದಾಗಬೇಕು” ಎಂದು ಎಚ್ ಕೆ ಪಾಟೀಲ್ ಹೇಳಿದರು.

ರಾಜೇಂದ್ರ ಪ್ರಸಾದ ಹೇಳಿಕೆ ಉಲ್ಲೇಖಿಸಿದ್ದು,”ಅಂಬೇಡ್ಕರ್ ಅವರು ನಮಗೆ ಅದ್ಬುತ ಸಂವಿಧಾನ ಕೊಟ್ಟಿದ್ದಾರೆ. ಸಂವಿಧಾನ ನಿಜವಾಗಿಯೂ ಅನುಷ್ಠಾನ ಆಗಬೇಕಾದರೆ, ಮನುಷ್ಯನನ್ನು ಮನುಷ್ಯನ್ನಾಗಿ ನೋಡುವ ಮನಸ್ಸು ಇದ್ದವರಿಗೆ ಮಾತ್ರವೆಂದು ಕೆ ಪಾಟೀಲ್ ಹೇಳುತ್ತಾ, ನಮ್ಮ ಕರ್ನಾಟಕಕ್ಕೆ ಬರ ಪರಿಹಾರ ಬರಲಿಲ್ಲ. ಕಾನೂನಾತ್ಮಕವಾಗಿ ಬರಬೇಕಿತ್ತು. ಆದರೆ ಬರ ಪರಿಹಾರ ಬರಲಾರದ ಹಾಗೆ ಮಾಡುವಂತವರು ಮೇಲಿದ್ದಾರೆ. ಒಳ್ಳೆ ಮನಸ್ಸು, ಬಡವರ ಪರವಾಗಿ ಇರುವ ನಾಯಕ ಬರಬೇಕು ಎಂದರು.

ಈ ಸುದ್ದಿ ಓದಿದ್ದೀರಾ? ತುಮಕೂರ | ಸಂವಿಧಾನ ಉಳಿಸುವ ಸಂಕಲ್ಪ ಮಾಡೋಣ: ಗೃಹ ಸಚಿವ ಪರಮೇಶ್ವರ್ ಕರೆ

ಕಾರ್ಯಕ್ರಮಕ್ಕೂ ಮೊದಲು  ದಲಿತ ಕಲಾ ಮಂಡಳಿಯ ಶರೀಫ್ ಬಿಳಿಯಲಿ, ಮುತ್ತು ಬಿಳಿಯಲಿ, ಆನಂದ ಸಿಂಗಾಡಿ, ಕಲಾ ತಂಡದ ಸದಸ್ಯರು ಕ್ರಾಂತಿ ಗೀತೆಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಅನೇಕ ಅಂಬೇಡ್ಕರ್ ಅನುಯಾಯಿಗಳು, ಪ್ರಗತಿಪರ ಚಿಂತಕರು, ಬಸವ ಅನುಯಾಯಿಗಳು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಜನೆ ಬಾಲ್ಯವಿವಾಹ ತಡೆಗೆ ದಾರಿ: ಆರ್ ಕೆ ಸರ್ದಾರ್

ನಮ್ಮ ಭಾರತದ ಕಾನೂನಿನ ಅಡಿಯಲ್ಲಿ ಬಾಲ್ಯವಿವಾಹ ಕಾಯ್ದೆ ಪ್ರಕಾರ 18 ವರ್ಷದೊಳಗಿನವರಿಗೆ...

ಬಾಗೇಪಲ್ಲಿ | ಸಿಪಿಎಂ ಸಂಘಟಿಸುವ ಜವಾಬ್ದಾರಿ ಎಲ್ಲರ ಮೇಲಿದೆ; ಎಂ.ಪಿ.ಮುನಿವೆಂಕಟಪ್ಪ

ಆಧುನಿಕ ಶೋಷಣೆಯಂತಹ ದಬ್ಬಾಳಿಕಾ ಪ್ರವೃತ್ತಿಯನ್ನು ತಡೆದು, ಸಿಪಿಎಂ ಪಕ್ಷದ ಬಲಿಷ್ಟ ಸಂಘಟನೆಯ...

ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ

ಮೀಟರ್ ಬಡ್ಡಿ ದಂಧೆಗೆ ಬೇಕರಿ ಮಾಲೀಕ ಬಲಿಯಾದ ಘಟನೆ ಮಾಸುವ ಮುನ್ನವೇ...

ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ...