ಗದಗ | 16, 17ರಂದು ಹುಬ್ಬಳ್ಳಿಯಲ್ಲಿ  12ನೇ ಮೇ ಸಾಹಿತ್ಯ ಮೇಳ

Date:

“ಲಡಾಯಿ ಪ್ರಕಾಶನ ಗದಗ, ಚಿತ್ತಾರ ಕಲಾ ಬಳಗ ಧಾರವಾಡ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಮೇ ಸಾಹಿತ್ಯ ಮೇಳ ಹುಬ್ಬಳ್ಳಿ ಬಳಗದ ಸಹಯೋಗದಲ್ಲಿ ಮೇ 16, 17ರಂದು ಹುಬ್ಬಳ್ಳಿಯ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದಲ್ಲಿ 12ನೇ ಮೇ ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದೆ” ಎಂದು ಸಾಹಿತಿ ಡಾ. ರಾಮಚಂದ್ರ ಹಂಸನೂರ ಅವರು ಹೇಳಿದರು.

- Advertisement -

ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಪ್ರತಿ ವರ್ಷದ ಮೇ ಸಾಹಿತ್ಯ ಮೇಳ ಒಂದು ಶಿರ್ಷಿಕೆಯಡಿಯಲ್ಲಿ ನಡೆಯುತ್ತಿದ್ದು, ಅದರಂತೆ ‘ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ: ಚಹರೆ ಮತ್ತು ಹೊರದಾರಿಗಳು’ ಎಂಬ ಶಿರ್ಷಿಕೆಯಲ್ಲಿ 12ನೇ ಮೇ ಸಾಹಿತ್ಯ ಮೇಳ ನಡೆಯಲಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ಮುಖ್ಯವಾಗಿ ಈ ಮೇ ಸಾಹಿತ್ಯ ಮೇಳದಲ್ಲಿ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆ ಇರಲಿದ್ದು, ದ್ವಾರ ಒಂದು, ದ್ವಾರ ಎರಡು, ಆವರಣ ಮಾಡಿಕೊಂಡು ಹೋರಾಟಗಾರರು, ಸಾಹಿತಿಗಳ  ಹೆಸರಿನಲ್ಲಿ ಇರಲಿವೆ. ಈ ಮೇ ಮೇಳದಲ್ಲಿ ಒಟ್ಟು ಆರು ಗೋಷ್ಠಿಗಳಿವೆ” ಎಂದು ಹೇಳಿದರು.

12ನೇ ಮೇ ಸಾಹಿತ್ಯ ಮೇಳದಲ್ಲಿ ಚಿತ್ರಕಲಾ ಪ್ರದರ್ಶನ ಮಳಿಗೆ, ಹೋರಾಟದ ಹಾಡುಗಳು ಇರಲಿವೆ. ಉದ್ಘಾಟನಾ ಗೋಷ್ಠಿಯಲ್ಲಿ ಮಾನಸ, ಬೆಂಗಳೂರು ಅವರು ಉದ್ಘಾಟಿಸಲಿದ್ದಾರೆ. ನ್ಯಾ ಬಿ.ಜಿ.ಕೋಳ್ಸೆ ಪಾಟೀಲ್(ಮುಂಬಯಿ), ಪಾಣಿ (ಕರ್ನೂಲ್), ವಿ. ಬಾಲಸುಬ್ರಮಣಿಯನ್(ಬೆಂಗಳೂರು), ಕೆ ನೀಲಾ(ಕಲಬುರಗಿ) ಇವರು ಮೇಳದ ದಿಕ್ಸೂಚಿ ಮಾತುಗಳನ್ನಾಡುವರು.

ಮೇಳದಲ್ಲಿ ‘ಹುಬ್ಬಳ್ಳಿ ಘೋಷಣೆ’ ಮತ್ತು ಪಾಣಿ ಅವರ ಕಾದಂಬರಿ ‘ಶಿಕಾರಿ’ ಬಿಡುಗಡೆಗೊಳ್ಳಲಿದೆ. ಮೇಳದ ಮೊದಲ ಗೋಷ್ಠಿ ‘ಸಾಂವಿಧಾನಿಕ ಪ್ರಜಾಸತ್ತೆ: ಸ್ವರೂಪ-ಸಂಘರ್ಷ ಇತಿಹಾಸ’, ಎರಡನೇ ಗೋಷ್ಠಿ ‘ವರ್ತಮಾನ ಭಾರತದಲ್ಲಿ ಸಾಂವಿಧಾನಿಕ ಪ್ರಜಾಸತ್ತೆ: ಏನು ಎತ್ತ?’, ಮೂರನೇ  ಗೋಷ್ಠಿ ‘ಅನುಭವ ಕಥನ’ ಕವಿಗೋಷ್ಠಿ ನಡೆಯಲಿದೆ.

1003383543

17ರಂದು ಎಸ್ಐಆರ್ ರದ್ದುಗೊಳಿಸಿ: ಪ್ರತಿಭಟನಾ ಜಾಥಾ ಚೆನ್ನಮ್ಮ ಸರ್ಕಲ್ನಿಂದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದ ವರೆಗೆ ನಡೆಯಲಿದೆ. ನಂತರ ಎರಡನೇ ಕವಿಗೋಷ್ಠಿ ನಡೆಯಲಿದೆ. ನಾಲ್ಕನೇ ಗೋಷ್ಠ ‘ಪ್ರಜಾಸತ್ತೆಯ ಮೇಲಿನ ದಾಳಿ: ಸೃಜನಶೀಲ ಸ್ಪಂದನೆ’, ಐದನೇ ಗೋಷ್ಠಿ ‘ಪ್ರಜಾಸತ್ತೆಯ ಅಡಿಯಲ್ಲಿ ಅಸ್ಮಿತೆಯ ರಾಜಕಾರಣ’, ಆರನೇ ಗೋಷ್ಠಿ ‘ಎಸ್ಐಆರ್: ಸಮಸ್ಯೆ-ಜನಾಂದೋಲನ’ ನಡೆಯಲಿವೆ.

ಮೇಳದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದ್ದು, ನ್ಯಾ. ಎಚ್. ನಾಗಮೋಹನ ದಾಸ್ ಸಮಾರೋಪ ನುಡಿ ಆಡಲಿದ್ದಾರೆ. ಮೇಳದಲ್ಲಿ ಪ್ರಶಸ್ತಿ ಪುರಸ್ಕೃತರು ವಿಭಾ ಸಾಹಿತ್ಯ ಪ್ರಶಸ್ತಿ-ಸಂತೇಬೆನ್ನೂರು ಫೈಜ್ನಟ್ರಾಜ್, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ- ಎಸ್.ಕೆ.ಕಾಂತಾ(ಕಲಬುರಗಿ), ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ-ಬಾ.ಹ.ರಮಾಕುಮಾರಿ(ತುಮಕೂರು), ನಿಂಗಪ್ಪ ಸಂಶಿ ರೈತಚೇತನ ಪ್ರಶಸ್ತಿ- ಲಕ್ಷ್ಮಣ ಹೂಗಾರ, ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ- ಪಿ.ಅಬ್ದುಲ್ಲಾ(ಹೊಸಪೇಟೆ), ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ-ಕೃಷ್ಣಮೂರ್ತಿ ಚಮರಂ(ಮೈಸೂರು), ಲಕ್ಷ್ಮೀಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ- ಚಂದ್ರಮ್ಮ(ಬೆಂಗಳೂರು), ವಿ.ಎಚ್ ತಳವಾರ ಫುಲೆ ಮಾರ್ಗಿ ಶಿಕ್ಷಕರು- ತುಕಾರಾಂ ಚಂಚಲಕರ(ವಿಜಯಪುರ) ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮುತ್ತು ಬಿಳಿಯಲಿ, ನೂರೊಂದಪ್ಪ ಕೊಳೂರು, ಪ್ರೊ. ಬಸವರಾಜ ಪೂಜಾರ, ಶರಣು ಪೂಜಾರ, ಆನಂದ ಶಿಂಗಾಡಿ, ಸರೋಜಾ ಕೊಳೂರು, ಪರಶು ಕಾಳೆ, ರಮೇಶ ಕೊಳೂರು, ಶಿವಾನಂದ ತಮ್ನನ್ನವರ, ಅಶೋಕ ಬರಗುಂಡಿ, ಶರೀಫ್ ಬಿಳಿಯಲಿ, ಯೂಸೂಫ್ ಮಜ್ಜಗಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ, ಅಭಿಮನ್ಯು ಬೀಳ್ಕೊಡುಗೆಗೆ ಗಾಯನದ ಸ್ಪರ್ಶ

ವಿಶ್ವವಿಖ್ಯಾತ ಮೈಸೂರು ದಸರಾ ಹಾಗೂ ದಸರಾ ಆನೆ ಅಭಿಮನ್ಯುವಿನ ಬೀಳ್ಕೊಡುಗೆಯನ್ನು ಒಳಗೊಂಡ...

ಹವಾಮಾನ ವೈಪರೀತ್ಯ: ಮುನ್ನೆಚ್ಚರಿಕೆ ವಹಿಸಿ-ಸಚಿವ ಪಿ.ಎಂ. ನರೇಂದ್ರಸ್ವಾಮಿ

ಹವಾಮಾನ ವೈಪರೀತ್ಯದಿಂದ ಮುಂದಿನ ಎರಡು-ಮೂರು ತಿಂಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಜನರು...

ಮುಂಡಗೋಡ, ಶಿರಸಿಯಲ್ಲಿ ಗಾಂಜಾ ಸೇವನೆ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ...

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆಯಿಲ್ಲ: ಸಚಿವ ಸಿ. ಪುಟ್ಟರಂಗಶೆಟ್ಟಿ

ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಸಮಸ್ಯೆ ಪರಿಹಾರಕ್ಕೆ...