ಸೋಮವಾರ ಗದಗದ ಲಯನ್ಸ್ ಕ್ಲಬ್‌ನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಮ್ಮೇಳನದಲ್ಲಿ ಮುಂದಿನ 3 ವರ್ಷಗಳ ಅವಧಿಗೆ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ವಿಶೇಷ ವೀಕ್ಷಕರಾಗಿದ್ದ ಹೈ ಕೋರ್ಟ್ ವಕೀಲ ಪೂರ್ಣ ರವಿಶಂಕರ್, ಚಿತ್ರದುರ್ಗದ ಹಿರಿಯ ಹೋರಾಟಗಾರ ರಾಜಣ್ಣ, ಸಹಕಾರಿ ಕ್ಷೇತ್ರದ ತಿರುಮಲಯ್ಯ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಚುನಾವಣಾ ಪ್ರಕ್ರಿಯೆಯಲ್ಲಿ 18 ಜಿಲ್ಲೆಗಳಿಂದ ಆಯ್ಕೆಯಾದ 96 ರಾಜ್ಯ ಸಮಿತಿ ಪ್ರತಿನಿಧಿಗಳು ಸೇರಿ ರಾಜ್ಯ ಸಂಚಾಲಕರನ್ನಾಗಿ ಎ.ನರಸಿಂಹಮೂರ್ತಿ ಹೆಸರನ್ನು ಬಿಜಾಪುರ ಸ್ಲಂ ಸಮಿತಿಯ ಹಿರಿಯರಾದ ಅಕ್ರಮ್ ಮಾಶಳ್ಕರ್ ಸೂಚಿಸಿದರು, ಎಲ್ಲರು ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕರಾಗಿ ಕಲ್ಯಾಣ ಕರ್ನಾಟಕಕ್ಕೆ ಜನಾರ್ಧನ ಹಳ್ಳಿಬೆಂಚಿ, ಕಿತ್ತೂರು ಕರ್ನಾಟಕಕ್ಕೆ ಇಮ್ತಿಯಾಜ್ ಮಾನ್ವಿ, ಖಜಾಂಚಿಯಾಗಿ ಬೆಂಗಳೂರಿನ ಮಂಜುಬಾಯಿ ಅವಿರೋಧ ಆಯ್ಕೆಯಾದರು.
ವಿಭಾಗಿಯ ಸಂಚಾಲಕರಾಗಿ ಬೆಂಗಳೂರು ವಿಭಾಗಕ್ಕೆ ಚಂದ್ರಮ್ಮ, ಬೆಳಗಾವಿ ವಿಭಾಗಕ್ಕೆ ಶೋಭಾ ಕಮತರ್, ಕಲಬುರ್ಗಿ ವಿಭಾಗಕ್ಕೆ ರೇಣುಕಾ ಸೂರ್ಯಕಾಂತ ಅವಿರೋಧ ಆಯ್ಕೆಯಾದರು.
ರಾಜ್ಯ ಸಮಿತಿಯ ಹಿರಿಯ ಸದಸ್ಯರಾಗಿ ದೀಪಿಕಾ, ಅಕ್ರಮ್ ಮಾಶಾಳ್ಕರ್, ಕೆ. ರಾಜಣ್ಣರವರನ್ನು ಆಯ್ಕೆ ಮಾಡಲಾಯಿತು, ಮಾಧ್ಯಮ ವಿಭಾಗದ ಸಂಚಾಲಕರನ್ನಾಗಿ ತೇಜಸ್ ಕುಮಾರ್, ಶಿವಕುಮಾರ್, ಕೃಷ್ಣಮೂರ್ತಿ ಆಯ್ಕೆಯಾದರೆ, ಕಲಾ ಮಂಡಳಿಯ ಸಂಚಾಲಕರನ್ನಾಗಿ ತುಮಕೂರಿನ ಅರುಣ್ ಟಿ.ಜಿ, ವೆಂಕಮ್ಮ ಆಯ್ಕೆಯಾದರು.
ಬೆಂಗಳೂರು ವಿಶೇಷ ಪ್ರತಿನಿಧಿಗಳನ್ನಾಗಿ ಹನುಮಂತ ಕಟ್ಟಿಮನಿ, ಅಸಂಘಟಿತ ವಿಭಾಗದ ಸಂಚಾಲಕರನ್ನಾಗಿ ಧಾರವಾಡದ ರಸೂಲ್ ನದಾಫ್, ಲಿಂಗತ್ವ ಅಲ್ಪಸಂಖ್ಯಾತರ ವಿಭಾಗಕ್ಕೆ ಪುಷ್ಪ ಬಿಜಾಪುರ ಆಯ್ಕೆಯಾದರೆ. ಜಿಲ್ಲಾ ಸಂಚಾಲಕರಾಗಿ ಯಾದಗಿರಿಯ ಈರಮ್ಮ, ಬಳ್ಳಾರಿಯ ಶೇಖರ್ ಬಾಬು, ದಾವಣಗೆರೆಯ ಪರ್ವೀನ್ ಭಾನು, ಗಂಗಾವತಿಯ ರೇಷ್ಮಾಭಾನು, ಕೊಪ್ಪಳದ ನಾಗರತ್ನ ಅಳವಂಡಿ, ವಿಜಯಪುರದ ಮುತ್ತುಭೋವಿ, ಚಿತ್ರದುರ್ಗದ ಸುಧಾ ಡಿ, ಬೆಳಗಾವಿ ಪಕೀರಪ್ಪ ತಳವಾರ್ ರವರನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.




