ಗದಗ | ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ: ವಕೀಲರು ಮೈಲಾರಪ್ಪ ಡಿ ಎಚ್

Date:

“ಏಪ್ರಿಲ್ 5 ರಾಷ್ಟ್ರೀಯ ಸಮಾನತೆಯ ದಿನ’ ಸ್ವತಂತ್ರ ಹೋರಾಟಗಾರ, ಹಸಿರು ಕ್ರಾಂತಿ ಹರಿಕಾರ, ಭಾರತ ದೇಶದ ಮಾಜಿ ಉಪ ಪ್ರಧಾನಮಂತ್ರಿ, “ಬಾಬೂಜಿ” ಎಂದೇ ಪ್ರಖ್ಯಾತರಾದ ಡಾಕ್ಟರ್ ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ‘ರಾಷ್ಟ್ರೀಯ ಸಮಾನತೆಯ ದಿನ’ ಎಂದು ಆಚರಿಸಲಾಗುತ್ತದೆ” ಎಂದು ವಕೀಲರು ಮೈಲಾರಪ್ಪ ಡಿ ಎಚ್ ಹೇಳಿದರು.

- Advertisement -

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಪ್ರವಾಸಿ ಮಂದಿರದಲ್ಲಿ  ಹಸಿರು ಕ್ರಾಂತಿಯ ಪ್ರತಿಪಾದಕರು ಡಾ.ಬಾಬು ಜಗಜೀವನ್‌ರಾಂ ಅವರ 119ನೇ ಜಯಂತಿಯನ್ನು ಆಚರಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

“ಡಾ. ಬಾಬು ಜಗಜೀವನರಾಮ್ ಅವರು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಇವರು ಒಬ್ಬರು. ಸ್ವತಂತ್ರ ಭಾರತ ಸರ್ಕಾರದಲ್ಲಿ ಅನೇಕ ಮಂತ್ರಿ ಖಾತೆಗಳನ್ನು ನಿರ್ವಹಿಸಿದವರು. ಸ್ವತಂತ್ರ ಭಾರತ ಮೊದಲ ಕಾರ್ಮಿಕ ಸಚಿವರಾಗಿ, ರಕ್ಷಣಾ ಸಚಿವರಾಗಿ, ಕಾರ್ಯನಿರ್ವಹಿಸಿದ್ದಾರೆ” ಎಂದು ಹೇಳಿದರು.

“ಭಾರತದ ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ರೈತರ ಹಸಿವು ನೀಗಿಸಿದ  ಮಹಾನ್ ಶಕ್ತಿ ಇವರು. “ಹೊಲದಲ್ಲಿ ಬೆಳೆ ಬೆಳೆದರೆ ಸಾಲದು, ಸಮಾಜದಲ್ಲಿ ಸಮಾನತೆ ಬೆಳೆಯಬೇಕು” ಎಂಬುದು ಇವರ ಆಶಯವಾಗಿತ್ತು. ದುರಂತವೆಂದರೆ ಇಂದಿಗೂ ರೈತರಿಗಾಗಿ, ಕಾರ್ಮಿಕರಿಗಾಗಿ  ಅಹೋರಾತ್ರಿ ಶ್ರಮಿಸಿದ ಬಾಬೂಜಿ ಯವರನ್ನು ಕೇವಲ ಜಾತಿಯ ಕಾರಣಕ್ಕಾಗಿ ಸರಿಯಾಗಿ ಗೌರವಿಸುತ್ತಿಲ್ಲ. ಇದು ಬದಲಾಗಬೇಕು” ಎಂದು ವಕೀಲರಾದ ಮೈಲಾರಪ್ಪ ಡಿ ಎಚ್ ಹೇಳಿದರು.

ಕೋಟೇಶ ಪೂಜಾರ ಮಾತನಾಡಿ, “ರೈತರ ಹಾಗೂ ಕಾರ್ಮಿಕರ ಪಾಲಿನ ನಿಜವಾದ ಆಶಾಕಿರಣವಾದ ಇವರನ್ನು ಜಾತಿ-ಧರ್ಮಗಳ ಭೇದ ಮರೆತು ಪ್ರತಿಯೊಬ್ಬ ರೈತರು, ಕಾರ್ಮಿಕರು ಪೂರ್ಣವಾಗಿ ಗೌರವಿಸೋಣ. ಶ್ರಮಜೀವಿಗಳ ಬದುಕಿನಲ್ಲಿ ಬೆಳಕು ತಂದ ಈ ಮಹಾನ್ ಚೇತನಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

“ಡಾ.ಬಾಬು ಜಗಜೀವನ ರಾಂ ಅವರು ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ. ರಕ್ಷಣಾ ಮಂತ್ರಿಗಳಾಗಿ ದೇಶದ ರಕ್ಷಣೆಗೆ ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದರು. ಕೃಷಿ ಸಚಿವರಾಗಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದು ಆಹಾರ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಮಾಡಿ, ದೇಶದ ಆರ್ಥಿಕತೆಗೆ ಮತ್ತಷ್ಟು ಶಕ್ತಿ ತುಂಬಿ ಹಸಿರು ಕ್ರಾಂತಿಯ ಯಶಸ್ವಿಗೆ ಕಾರಣೀಕರ್ತರಾದರು” ಎಂದು‌ ಬಣ್ಣಿಸಿದರು‌.

ನಂತರ ಪಿಎಸ್ಐ ನಿಯಾಲ್ ನದಾಫ್ ಅವರು ಮಾತನಾಡಿ, “ಅಸ್ಪ್ರಶ್ಯತೆ ಮತ್ತು ಅಸಮಾನತೆ ವಿರುದ್ಧ ಜೀವಮಾನದುದ್ದಕ್ಕೂ ಹೋರಾಡಿದ ಅಪ್ರತಿಮ ನಾಯಕ ಬಾಬೂಜಿ. 3 ಬಾರಿ ಪ್ರಧಾನಿಯಾಗುವ ಮತ್ತು ಒಮ್ಮೆ ರಾಷ್ಟ್ರಪತಿಯಾಗುವ ಅವಕಾಶವನ್ನು ಕಳೆದುಕೊಂಡ ದುರಂತ ನಾಯಕ. ಆದರೆ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಸತತವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿ ನೇತಾರರಾಗಿ ಗುರುತಿಸಿಕೊಂಡಿದ್ದಾರೆ. ಅಪ್ರತಿಮ ರಾಷ್ಟ್ರಭಕ್ತರಾಗಿ, ದೇಶಕ್ಕಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಕಾರ್ಮಿಕ ಸಚಿವರಾಗಿ ಕಾರ್ಮಿಕರ ಏಳಿಗೆ, ಸಾರಿಗೆ, ಸಂಪರ್ಕ, ವಿಮಾನಯಾನ ಇಲಾಖೆ ಮಾತ್ರವಲ್ಲದೇ ಕೃಷಿ ಸಚಿವರಾಗಿ ಹಸಿವು ಮುಕ್ತ ಭಾರತ ನಿರ್ಮಾಣದ ಪ್ರಮುಖ ಕರ್ತೃವಾಗಿ ಇಂದಿಗೂ ಗುರುತಿಸಲ್ಪಡುತ್ತಾರೆ” ಎಂದು ಸ್ಮರಿಸಿದರು.

ಈ ಸಂಧರ್ಭದಲ್ಲಿ ಅಣ್ಣಪ್ಪ ಗುತ್ತೆಮ್ಮನವರ, ಆನಂದ ಸತ್ಯಮ್ಮನವರ, ಗೌತಮ ಹಲ್ಲೆಮ್ಮನವರ, ಹಣಮಂತ ಹರಿಜನ, ಹಣಮಂತ ಗುತ್ತೆಮ್ಮನವರ, ನವೀನ್ ಗುತ್ತೆಮ್ಮನವರ, ಸುಯುಲ್ ನದಾಫ್, ಅಜಯ್ ಕೋಪ್ಪಿ, ವಿನಾಯಕ ಕಲಾಲ್, ಇನ್ನೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...

ರಾಯಚೂರು | ಭೀಕರ ಬರ: ₹11 ಕೋಟಿ ಬಿಡುಗಡೆ: ಸಚಿವ ಅಜಯ್ ಸಿಂಗ್

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ: ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ

ಉತ್ತರ ಕನ್ನಡ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್...

ರಾಯಚೂರು | ಲಿಂಗಸುಗೂರು ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ವರ್ಗಾವಣೆ

ಲಿಂಗಸುಗೂರ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ಅವರನ್ನು ವರ್ಗಾವಣೆ...