“ಪ್ರೊ.ಬಿ.ಕೃಷ್ಣಪ್ಪ ಅವರ ಜಯಂತಿ ಅಂಗವಾಗಿ ಗದಗ ಪಟ್ಟಣದಲ್ಲಿ ಜಿಲ್ಲಾ ಸಮಿತಿ ವತಿಯಿಂದ ಇದೇ ತಿಂಗಳು ಜೂನ್ 13 ರಂದು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ70% ಕ್ಕಿಂತ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಡಿಎಸ್ಎಸ್ ತಾಲೂಕು ಸಂಚಾಲಕ ಗುರುನಾಥ ಕೆಂಗಾರಕರ ಅವರು ತಿಳಿಸಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪೊ.ಬಿ.ಕೃಷ್ಣಪ್ಪ ಅವರ ಜಯಂತಿ ಆಚರಿಸಲಾಯಿತು.
“ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ನರಗುಂದ ಸಂಚಾಲಕರು ದತ್ತಾತ್ರೇಯ ಜೋಗನ್ನವರ್, ಮಹಿಳಾ ಒಕ್ಕೂಟದ ತಾಲೂಕ ಸಂಚಾಲಕರು ಶಾರದ ಹಳೆಮಣಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕರು ಸಂಜು ಜೋಗನವರ್ ಹತ್ತಿರ ಹೆಸರು ನೊಂದಾಯಿಸಬೇಕು” ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಮುಖಂಡರು ಮುತ್ತು ಸುರಕೋಡ ಮಾತನಾಡಿ, “ಪ್ರೊಫೆಸರ್ ಬಿ. ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿಯನ್ನು ದಲಿತರ ಮತ್ತು ಸಮಾಜದಲ್ಲಿ ಹಿಂದುಳಿದವರ ಮೇಲೆ ಆಗುತ್ತಿರುವ ಶೋಷಣೆ ದಬ್ಬಾಳಿಕೆಯನ್ನು ತಡೆಯಲು ಸಂಘಟನೆಯನ್ನು ಹುಟ್ಟು ಹಾಕಿದರು” ಎಂದು ಹೇಳಿದರು.
ಈ ಸಮಯದಲ್ಲಿ ನವೀನ ಜೋಗನವರ, ಮುತ್ತು ಮಾದರ, ಬಸು ದಂಡಾಪುರ, ನೀಲಗಂಗಾ ಮಾದರ, ಬಸ್ಸಮ್ಮ ಗುಡಿಕಾರ, ಸುಶೀಲ ನಾಗರಹಳ್ಳಿ, ಅನಸೂಯ ಮಾದರ, ಫಕೀರವ ರೋಗನ್ನವರ, ಸುಮಿತ್ರ ತಳವಾರ, ಭಾರತಿ ಮಾದರ, ಮಹಾಂತೇಶ ಪೂಜಾರ, ವಿಕ್ರಂ ಹೊನಕೇರಿ, ವೆಂಕಟೇಶ ಕಾನಪೆಟ, ಕಿರಣ ಜೋಗನವರ, ಸಂಜು ಜೋಗನ್ನವರ. ಕಾಸಿನಾಥ, ಹನುಮಂತ ಶಿರಹಟ್ಟಿ, ರಾಹುಲ್ ಲಂಬಾಣಿ, ಬಸು ಜೋಗಣ್ಣವರ, ಇನ್ನೂ ಅನೇಕರು ಉಪಸ್ಥಿತರಿದ್ದರು.





