ಗದಗ | ಕರ್ನಾಟಕಕ್ಕೆ 50ರ ಸಂಭ್ರಮ: ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

0
173

ಮೈಸೂರು ರಾಜ್ಯವು ಕರ್ನಾಟಕವೆಂದು ಮರುನಾಮಕರಣಗೊಂಡು 50 ವರ್ಷಗಳು ಸಂಧಿವೆ. 50ರ ಸಂಭ್ರಮದ ಹಿನ್ನೆಲೆಯಲ್ಲಿ ಗದಗ ನಗರದ ಡಿ. ದೇವರಾಜ ಮಂಟಪದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿದೆ. ಕಾರ್ಯಕ್ರಮಕ್ಕೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್ ಹಾಗೂ ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಚಾಲನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, “ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣ ಮಾಡಿ 50 ವರ್ಷಗಳು ಪೂರೈಸಿದ ಸಂಭ್ರಮದಲ್ಲಿ ನಾವಿದ್ದೇವೆ. ಇಂತಹ ಸುಸಂದರ್ಭದಲ್ಲಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವುದೇ ಒಂದು ದೊಡ್ಡ ಸಂಭ್ರಮ. ಇಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೂ ಸಾರ್ಥಕವಾಯಿತು” ಎಂದು ಹೇಳಿದರು.

ಅದರಲ್ಲೂ ಕಾರ್ಯಕ್ರಮದಲ್ಲಿ ಬರದ ನಾಡಿನಲ್ಲಿ ನೀರನ್ನು ಹರಿಸಿ ಕಾಡನ್ನಾಗಿ ಮಾಡಿದ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರಸಿಂಗ್ ಹಾಗೂ ಗದಗ-ಬೆಟಗೇರಿ ಅವಳಿ ನಗರದ 100 ಕೋಟಿಗೂ ಅಧಿಕ ಮೌಲ್ಯದ ವಕಾರಸಾಲನ್ನು ಸರಕಾರದ ಸ್ವಾಮ್ಯಕ್ಕೆ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಂದಿನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಆಗಮಿಸಿರುವುದು ಕಾರ್ಯಕ್ರಮದ ಘನತೆ ಹೆಚ್ಚಿಸಿದೆ ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತ, ಗದಗ ನಗರದ ಹುಡ್ಕೋ ಲಾಸ್ಟ್ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ, ಗದಗ ಜಿಲ್ಲಾ ಘಟಕ ವತಿಯಿಂದ ರಾಜ್ಯೋತ್ಸವದ ಪ್ರಯುಕ್ತ 68ನೇ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಜನಪದ ಕಲಾವಿದರಿಗೆ ಕರವೇ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ. ಎಸ್. ಮಾಲಿಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧ್ವಜಾರೋಹಣವನ್ನು ಕರವೇ ಜಿಲ್ಲಾಧ್ಯಕ್ಷರಾದ ಶರಣು ಗೋಡಿ ಮತ್ತು ಸಿದ್ದಲಿಂಗ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾರ್ವತಿ ವಸ್ತ್ರದವರು ನೇರವೇರಿಸಿದರು.

ಶರಣು ಎಸ್. ಗೋಡಿ ಮಾತನಾಡಿ ಕರ್ನಾಟಕ ಏಕೀಕರಣಕ್ಕೋಸ್ಕರ ಹಲವಾರು ಮಹನೀಯರ ತ್ಯಾಗ ಬಲಿದಾನವಾಗಿದೆ. ಅದರಲ್ಲಿ ವಿಶೇಷವಾಗಿ ನಮ್ಮ ಜಿಲ್ಲೆಯವರಾದ ಅಂದಾನಪ್ಪ ದೊಡ್ಡಮೇಟಿ, ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾವ, ಮುಂಡರಗಿಯ ಭೀಮರಾಯರುರವರು ಇನ್ನು ಮುಂತಾದವರ ಹೋರಾಟದ ಫಲವಾಗಿ ಇಂದು ಕರ್ನಾಟಕ ಅಖಂಡ ಕರ್ನಾಟಕವಾಗಿ ಉಳಿದಿದೆ.

ಈ ಸಂದರ್ಭದಲ್ಲಿ ಕೆಲವು ಚುನಾಯಿತ ಪ್ರತಿನಿಧಿಗಳು ಉತ್ತರ ಕರ್ನಾಟಕವನ್ನು ತುಂಡರಿಸುವ ಹೇಳಿಕೆಯನ್ನು ನೀಡುತ್ತಿದ್ದಾರೆ ಇದು ಖಂಡನೀಯ. ಇತ್ತೀಚಿಗೆ ಉತ್ತರ ಕರ್ನಾಟಕ ತುಂಡರಿಸುವ ಹೇಳಿಕೆಯನ್ನು ನೀಡಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಂಮಾಣಿ ಅವರ ಹೇಳಿಕೆಯನ್ನು ಖಂಡಿಸಿದರು. ಕನ್ನಡಿಗರ ಮೇಲೆ ಒತ್ತಾಯ ಪೂರಕವಾಗಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಕನ್ನಡದ ಭಾಷೆ ಅತ್ಯಂತ ಸುಂದರವಾದ ಭಾಷೆಯಾಗಿದೆ.  ಜಗತ್ತಿನಲ್ಲಿ ಯಾವುದಾದರೂ ಭಾಷೆಗೆ ಲಿಪಿ ಇದೆ ಎಂದರೆ ಅದು ಕನ್ನಡ ಭಾಷೆಗೆ ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ ಭಾಷೆ. ನಾವು ನವೆಂಬರ್ ಒಂದರ ಕನ್ನಡಿಗರಾಗುವ ಬದಲು ಇಡೀ ವರ್ಷದ 365ದಿನಗಳ ಕನ್ನಡಿಗರಾಗೋಣ ಎಂದರು.

34ನೇ ವಾರ್ಡಿನ ನಗರಸಭೆ ಮಾಜಿ ಸದಸ್ಯರಾದ ಅನಿಲ್ ಗರಗ್,  ಕರವೇ ಮುಖಂಡ ಡಾ. ಜಯಕುಮಾರ್ ಬ್ಯಾಳಿ, ಸಿದ್ದು ಅಂದಾನಿ ಗೌಡ್ರು, ಕರವೇ ಜಿಲ್ಲಾ ಉಪಾಧ್ಯಕ್ಷರಾದ ಹನುಮಂತ್ ಪೂಜಾರ್ , ಆನಂದ್ ಹೊಸಮನಿ, ನಾಗಪ್ಪ ಅಣ್ಣಿಗೇರಿ, ಕೃಷ್ಣ ಲಮಾಣಿ, ಜಯಶ್ರೀ ಅಣ್ಣಿಗೇರಿ, ಎಂ.ವೈ. ಶಿವನಗೌಡ,  ಎಸ್.ಎಸ್.ಪಾಟೀಲ್, ಬಕ್ಸಿ ನದಾಫ್, ಹುಸೇನ್ ಸಾಬ್, ನಾಗರಾಜ್ ಬಂಡಿ ವಡ್ಡರ್, ಪ್ರವೀಣ್ ಬಣಗೊಳ, ಸೋಮಶೇಖರ್ ಹಳ್ಳಣ್ಣವರ್ ಪತ್ರಿಕೆ ವರದಿಗಾರರು ಮಂಜುನಾಥ್ ಮಾಲಿಪಾಟೀಲ್ ಹಲವಾರು ಕರವೇ ಯುವ ಮುಖಂಡರು ಮತ್ತು ನಗರದ ಗುರುಹಿರಿಯರು ಹಾಗೂ  ಶಾಲಾ ವಿದ್ಯಾರ್ಥಿಯರು ಕಾರ್ಯಕ್ರಮದಲ್ಲಿ ಇದ್ದರು.

LEAVE A REPLY

Please enter your comment!
Please enter your name here