“ಶಿಕ್ಷಣದ ಮೂಲಕ ಸಾಕಷ್ಟು ಬದಲಾವಣೆ ಮಾಡಲು ಅವಕಾಶ ವಿದೆ. ಶಿಕ್ಷಣಕ್ಕೆ ಒತ್ತನ್ನು ಕೊಡಬೇಕು. ಎಲ್ಲರೂ ಸಂವಿಧಾನದ ಮೂಲಕ ಸಮಾನತೆ ರೂಪಿಸುವ ಶಿಕ್ಷಣ ಕೊಟ್ಟರೇ ಎಲ್ಲರೂ ಉಳಿಯಲಿಕ್ಕೆ ಆಗುತ್ತದೆ. ಈ ನಾಡಿಗೆ ಏನಾದರು ಕೊಡಬೇಕು ಎನಿಸಿದರೇ, ಬುದ್ಧ, ಬಸವ ಅಂಬೇಡ್ಕರ್, ಅವರಿಗೆ ಕೋಡವೇಕು ಏನಿಸಿದರೇ ಜಾತಿ, ದ್ವೇಷ, ಅಸೂಯೆ ಬೀಡಬೇಕು. ಕಾಯಕ ಮಾಡಿ ಬದುಕುತ್ತೇವೆ ಎನ್ನುವ ಭಾವ ಬರಬೇಕು” ಎಂದು ಜಾಗತಿಗ ಲಿಂಗಾಯತ ಮಹಾಸಭಾ ಮುಖಂಡರು ಅಶೋಕ ಬರಗುಂಡಿ ಅವರು ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶಾದಿ ಮಹಲ್ ನಲ್ಲಿ ಇಂದು ಎಸ್ಎಫ್ಐ 6ನೇ ಗದಗ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
“ನಮ್ಮ ನಡುವೆ ಇನ್ನೊಂದು ವಿದ್ಯಾರ್ಥಿ ಸಂಘಟನೆ ಇತ್ತು, ಅದು ಜಾತಿ, ಬೇಧ, ಧ್ವೇಷ ಬಿತ್ತು ಸಂಘಟನೆ ಇತ್ತು. ನಮ್ಮ ಹಿರಿಯರು ಆ ಸಂಘಟನೆಯಲ್ಲಿ ಹೋಗದಂತೆ ನೋಡಿಕೊಂಡರು. ಹಾಗಾಗಿ ಬುದ್ಧ, ಬಸವ, ಅಂಬೇಡ್ಕರ್ ಹತ್ತಿರವಾದರು” ಎಂದರು.
“ವಿದ್ಯಾರ್ಥಿಗಳು ಜಂತರ್ ಮಂತರ್ ನಲ್ಲಿ ತಮ್ಮ ಮೂಲ ಉದ್ದೇಶಕ್ಕೆ ದಕ್ಕೆ ಬರದೆ, ತಿಂಗಳು ಗಟ್ಟೆಲೇ ಹೋರಾಟ ಮಾಡಿದರು. ಈ ಹೋರಾಟವನ್ನು ಹತ್ತಿಕ್ಕಲು ವಿದ್ಯಾರ್ಥಿಗಳ ತಲೆಯಲ್ಲಿ ವಿಷ ಬೀಜ ಬಿತ್ತಲು ಆರಂಭಿಸಿದರು, ಜಾತಿ ಬೀಜ ಬಿತ್ತಲು ಯತ್ನಿಸಲು, ಎಲ್ಲ ಪ್ರಯತ್ನಗಳನ್ನು ಮಾಡಿದರೂ ವಿದ್ಯಾರ್ಥಿಗಳ ಚಳವಳಿ ಎದುರು ಎಲ್ಲ ಪ್ರಯತ್ನಗಳು ವಿಫಲವಾದವು” ಎಂದರು.
“ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಕಟ್ಟಿಕೊಟ್ಟರು. ಎಲ್ಲರಿಗೂ ಒಂದೇ ಮತವನ್ನು ಕೊಟ್ಟರು. ರಾಷ್ಟ್ರ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಕೊಟ್ಟರು. ಇಲ್ಲದವರು ಸಂವಿಧಾನದ ಮೂಲಕ ಸವಲತ್ತುಗಳನ್ನು ಪಡೆದು, ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಯಿತು. ಇವುಗಳನ್ನು ಸಹಿಸದ ಕೋಮುವಾದಿಗಳು ವಿರೋಧಿಸುತ್ತಲೇ ಬಂದಿರುವರು. ಇಂತಹ ಕೋಮುವಾದಿಗಳನ್ನು ತಿರಸ್ಕರಿಸಿ ಪ್ರೀತಿಯಿಂದ ಉಳಿಸಿಕೊಳ್ಳುವ ಶಕ್ತಿ ವಿದ್ಯಾರ್ಥಿಗಳಲ್ಲಿ ಬರಬೇಕು” ಎಂದು ಕರೆ ನೀಡಿದರು.
“ಎಸ್ಎಫ್ಐ ಕೇವಲ ಗಜೇಂದ್ರಗಡಕ್ಕೆ ಮಾತ್ರ ಸಿಮೀತವಾಗದೇ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ, ಹಳ್ಳಿಗಳಲ್ಲಿ ಸಂಘಟನೆ ಕಟ್ಟಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಬೇಕು” ಎಂದು ಸಲಹೆ ನೀಡಿದರು.
“ಹಿರಿಯ ರಾಜಕಾರಣಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಶುದ್ದೀಕರಣ ಮಾಡುವುದರಿಂದ ಅವರಿಗೆ ಅಪಮಾನ ಮಾಡಿರುವರು. ಇದನ್ನು ಎಲ್ಲರೂ ಖಂಡಿಸಬೇಕು. ಈ ಶ್ರೇಣಿಕೃತ ವ್ಯವಸ್ಥೆಯನ್ನು ಜಾರಿಗೊಳಿಸಲು ಹೊರಟಿರುವ ಮನುವಾದಿಗಳನ್ನು ಖಂಡಿಸಬೇಕು. ಬುದ್ಧ ಬಸವ ಅಂಬೇಡ್ಕರ್ ಅವರ ಆಶಯಗಳನ್ನ ಸಮಾನತೆಯನ್ನು ನಾವೆಲ್ಲರು ತರಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಗಳು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರು ಗಣೇಶ ರಾಠೋಡ್ ಮಾತನಾಡಿ, “ನಮ್ಮ ದುಡ್ಡನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕೋಚಿಂಗ್ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಈ ಮೂಲಕ ಶಿಕ್ಷಣವನ್ನು ಸರಕಾಗಿ ಮಾಡಿದ್ದಾರೆ. ಶಿಕ್ಷಣ ಸಾರ್ವತ್ರಿಕ ಆಗಬೇಕಿತ್ತು. ಆದರೆ ಸಾರ್ವತ್ರಿಕ ಶಿಕ್ಷಣ ಜಾರಿ ಆಗುತ್ತಿಲ್ಲ. ಇದನ್ನು ಸರಕಾರ ಜಾರಿ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದೂ. ಜನ ಪ್ರತಿನಿಧಿಗಳು ಕಾಪಾಡಬೇಕಿತ್ತು. ಜನ ಪ್ರತಿನಿಧಿಗಳು ಶಿಕ್ಷಣ ವ್ಯವಸ್ಥೆ ಬಗ್ಗೆ ಕಾಳಜಿ ಇಲ್ಲ” ಎಂದು ಕಿಡಿಕಾರಿದರು.
“ಐವತ್ತಾರು ಇಂಚಿನ ಎದೆಯ ನಮ್ಮ ಪ್ರಧಾನ ಮಂತ್ರಿ ಮೋದಿ ಅವರು ಮನ್ ಕೀ ಭಾತ್ ನಲ್ಲಿ ಸಾಕಷ್ಟು ಮಾತನಾಡುತ್ತಾರೆ. ವಿದ್ಯಾರ್ಥಿಗಳ ಮೇಲೆ ಅನ್ಯಾಯ ಆಗುತ್ತಿದ್ದರೂ ಮನ್ ಕೀ ಬಾತ್ ನಲ್ಲಿ ಮಾತನಾಡುತ್ತಿದ್ದಾರೆಯೇ” ಎಂದು ಪ್ರಶ್ನಿಸಿದರು.
ನೀಟ್ ಪರೀಕ್ಷೆಯನ್ನು ರದ್ದುಪಡಿಸಿ, ರಾಜ್ಯಗಳಿಗೆ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳ ವೈದ್ಯಕೀಯ ಕನಸು ಹಾಳು ಮಾಡುದ್ದಾರೆ” ಎಂದು ಹೇಳಿದರು.
“ಗಜೇಂದ್ರಗಡ ತಾಲೂಕಾಗಿ ವರ್ಷಗಳೇ ಕಳೆದರೂ, ಇನ್ನೂ ಇಲಾಖೆಗಳ ಕಚೇರಿಗಳು ಆರಂಭ ಮಾಡಲು ಸರಕಾರ ಮುಂದಾಗಿಲ್ಲ. ಗಜೇಂದ್ರಗಡಲ್ಲಿ ಪ್ರತಿ ವರ್ಷ ಏಳು ನೂರು ವಿದ್ಯಾರ್ಥಿಗಳು ಪದವಿ ಮುಗಿಸಿ, ಸ್ನಾತಕೋತ್ತರ ಕಲಿಯಲು ದೂರದ ಗದಗ, ಧಾರವಾಡ ಹೋಗುತ್ತಿದ್ದಾರೆ. ತಾಲೂಕಿನಲ್ಲಿಯೇ ಸ್ನಾತಕೋತ್ತರ ಕೇಂದ್ರ ಆರಂಭಿಸಿದರೆ ಎಷ್ಟೊ ವಿದ್ಯಾರ್ಥಿಗಳು ಅನುಕೂಲ ಆಗುತ್ತದೆ” ಎಂದರು.
“ನೂತನ ಸಭಾಪತಿ ಜಿ.ಎಸ್ ಪಾಟೀಲ್ ಅವರ ರೋಣ ಕ್ಷೇತ್ರದಲ್ಲಿಯೇ ಸರಕಾರಿ ಡಿಗ್ರಿ ಕಾಲೇಜು ಇಲ್ಲ. ಇದ್ದ ಸರಕಾರಿ ಪದವಿ ಕಾಲೇಜನ್ನು ಪಕ್ಕದ ತಾಲೂಕಿಗೆ ಹೋಯಿತು. ಇದರಿಂದ ರೋಣ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಪದವಿ ಹಂತದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಬೇಕು” ಎಂದು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಶರಣು ಮಾಟರಂಗಿ ಮಾತನಾಡಿದರು.ಸಮಾವೇಶದ ಅಧ್ಯಕ್ಷತೆ ಎಸ್ಎಫ್ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ವಹಿಸಿದ್ದರು.
ಸಮಾವೇಶದಲ್ಲಿ ಹುಲಿಗೆಮ್ಮ ಮಾತಿನ, ಅಕ್ಕಮ್ಮ ರಾಠೋಡ್, ರೂಪೇಶ ಮಾಳೋತ್ತರ, ಬಾಲು ರಾಠೋಡ್, ಮೇಹಬೂಬ್, ಫಯಾಜ್ ಅಹಮ್ಮದ ತೋಟದ, ಪೀರು ರಾಠೋಡ್, ಕನಕರಾಯ ಹಾದಿಮನಿ, ಮೆಹಬೂಬ್ ಹವಾಲ್ದಾರ, ಅಂದಪ್ಪ ಕುರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಅನಿಲ್ ಆರ್ ನಿರೂಪಿಸಿದರು.




