ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

Date:

“ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ ಪರಿಗಣಿಸುವಂತೆ ಒತ್ತಾಯಿಸಿ ಡಿಸೆಂಬರ್ 16.17 ರಂದು ಒಂಟಿ ಮಹಿಳೆಯರು ಬೆಂಗಳೂರಿನಲ್ಲಿ ಬೃಹತ್ ಚಲೋ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ” ರಾಜ್ಯ ಕಾರ್ಯದರ್ಶಿ ಬಿ ಮಾಳಮ್ಮ ಹೇಳಿದರು.

- Advertisement -

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಿಲ್ದಾರರ ಆವರಣದಲ್ಲಿ ತಾಲೂಕು ಮಟ್ಟದ ಒಂಟಿ ಮಹಿಳೆಯರ ಪ್ರಥಮ ತಾಲೂಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

“ಸ್ಮೃತಿಕಾರರ ಅಣತಿಯಂತೆ ಎಲ್ಲ ಮಹಿಳೆಯರನ್ನು ಪುರುಷನ ಗುಲಾಮಳನ್ನಾಗಿಸಿ, ಶೂದ್ರಳನ್ನಾಗಿಸಿ, ಶಿಕ್ಷಣ, ಆಸ್ತಿ ಹಾಗೂ ಮರು ಮದುವೆ ಹಕ್ಕುಗಳಿಂದ ವಂಚಿಸಿಸಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿ, ಮೂಲೆ ಗುಂಪಾಗಿಸಿ ಶೋಷಣೆ ಮಾಡುತ್ತಿರುವ ವಿಷಯ ಗೊತ್ತಿದೆ. ಮಹಿಳೆಯರ ಬದುಕಿನಲ್ಲಿ ಒಂಟಿ ಮಹಿಳೆಯರ ಪಾಡು ಹೇಳತೀರದಾಗಿದೆ” ಎಂದು ಹೇಳಿದರು.

“ನಾವು ಕೇವಲ ಲಿಂಗ ಹಾಗೂ ಜಾತಿ ತಾರತಮ್ಯಕ್ಕೆ ಒಳಗಾದವರು ಮಾತ್ರವಲ್ಲ, ನಾವು ತೀವ್ರ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದೇವೆ. ನಿತ್ಯ ಅಪಮಾನ ನಿಂದನೆಗಳನ್ನು ಎದುರಿಸುತ್ತಿದ್ದೇವೆ. ದಲಿತರನ್ನು ಊರಾಚೆ ಇಟ್ಟು ಮುಟ್ಟಿಸಿಕೊಳ್ಳದೆ ದೂರ ತಳ್ಳಿದರೆ, ನಮ್ಮ ಮಹಿಳೆಯರಿಗೆ ಮದುವೆ, ಮರು ಮದುವೆಗಳನ್ನು ನಿರಾಕರಿಸಿ ಸಾಮಾಜಿಕ ಬಹಿಷ್ಕಾರಕ್ಕೊಳಪಡಿಸಲಾಗಿದೆ” ಎಂದರು.

“ರಾಜ್ಯ ಸರಕಾರಗಳು ಜಾರಿಗೆ ತರುತ್ತಿರುವ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೀತಿಗಳಿಂದಾದ ನಿರುದ್ಯೋಗ ಮತ್ತು ವೈವಾಹಿಕ ಆಯ್ಕೆಗಳ ಕಾರಣದಿಂದ ಮದುವೆಯಾಗದೇ ಅವಿವಾಹಿತಳಾಗಿಯೇ ಉಳಿದು ಒಂಟಿಯಾಗಿದ್ದಾರೆ. ಗಂಡ ಬಿಟ್ಟವರು ಹಾಗೂ ಗಂಡ ಸತ್ತ ಕಾರಣಕ್ಕೆ ವಿಧವೆಯೆಂದು ಅಪಮಾನಿತಳಾದವರು. ಅದೇ ರೀತಿ, ದೇವದಾಸಿ ಪದ್ಧತಿಗೆ ಬಲಿಯಾದುದಕ್ಕೆ ಒಂಟಿ ಜೀವನ ನಡೆಸುವ ಮಹಿಳೆಯರು ನಾವಾಗಿದ್ದೇವೆ” ಎಂದು ಹೇಳಿದರು. 

“ರಾಜ್ಯ ಸರಕಾರಗಳು ಬಹುತೇಕ ಪುರುಷ ಪ್ರಧಾನ ಹಾಗೂ ಮೇಲ್ವಾತಿ ಮತ್ತು ಮೇಲ್ವರ್ಗಗಳ ಪರವಾಗಿ ಕಾರ್ಯನಿರ್ವಹಿಸುವುದರಿಂದ ಲಿಂಗ ತಾರತಮ್ಯದ ಬದುಕಿನಿಂದ ಹೊರ ಬರಲು ಸಾದ್ಯವಾಗಲಿಲ್ಲ. ಮಹಿಳೆಯರ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಬಜೆಟ್‌ಗಳಲ್ಲಿ ಅನುದಾನ ಒದಗಿಸುತ್ತಿಲ್ಲ” ಎಂದರು.

ಗೌರವಾಧ್ಯಕ್ಷರು ಬಾಲು ರಾಠೋಡ ಮಾತನಾಡಿ, “ಒಂಟಿ ಮಹಿಳೆಯರ ಗಣತಿಯನ್ನು ಪೂರ್ಣ ಮಾಡಿ ಪ್ರಕಟಿಸಬೇಕು. ಅದೇ ರೀತಿಯಲ್ಲಿ ಒಂಟಿ ಮಹಿಳೆಯರ ಮಕ್ಕಳ ಗಣತಿಗೂ ಕ್ರಮವಹಿಸಬೇಕು. ದೇವದಾಸಿ ಪುನರ್ವಸತಿ ಮಾದರಿಯಲ್ಲಿ ಪರಿಣಾಮಕಾರಿ ಪುನರ್ವಸತಿಗೆ ಕ್ರಮವಹಿಸಬೇಕು. ಒಂಟಿ ಮಹಿಳೆಯರಿಗೆ ಮಾಸಿಕ ಸಹಾಯಧನ/ ಪಿಂಚಣಿ ಕನಿಷ್ಠ 6000 ರೂ ಒದಗಿಸಬೇಕು. ಒಂಟಿ ಮಹಿಳೆಯರು, ಗಂಡ ಬಿಟ್ಟ ಹಾಗೂ ಸತ್ತ ಮಹಿಳೆಯರಿಗೆ ಹಾಗೂ 50 ವರ್ಷದೊಳಗಿನ ಮಹಿಳೆಯರ ಸಾಮಾಜಿಕ ಬಹಿಷ್ಕಾರದ ಪರಿಹಾರವಾಗಿ 10 ಲಕ್ಷ ರೂ ಇಡುಗಂಟು ಘೋಷಿಸಬೇಕು” ಎಂದು ಒತ್ತಾಯಿಸಿದರು.

ಬಹಿಷ್ಕೃತರನ್ನು ಮಹಿಳೆಯರನ್ನು ಮರು ವಿವಾಹವಾಗಲು ಮುಂದೆ ಬರುವ ಪುರುಷರಿಗೆ ಪ್ರೋತ್ಸಾಹ ಧನ ನೀಡಬೇಕು. ವಿದ್ಯಾವಂತ ಮಹಿಳೆಗೆ ಉದ್ಯೋಗ ಒದಗಿಸಿ ಇಲ್ಲವೆ ನಿರುದ್ಯೋಗ ಭತ್ಯೆ ಮಾಸಿಕ 10,000 ರೂ ಒದಗಿಸಿರಿ. ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯ ನೆರವು ನೀಡಬೇಕು” ಎಂದು ಒತ್ತಾಯಿಸಿದರು.

ಈ ಸಮಾವೇಶದಲ್ಲಿ ತಾಲೂಕು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಶರಣಂ ವಾಲೆ, ಕಾರ್ಯದರ್ಶಿಯಾಗಿ ಲಕ್ಷ್ಮವ್ವ ಗುಗಲೋತ್ತರ, ಉಪಾಧ್ಯಕ್ಷರಾಗಿ ರೇಣುಕಾ ಕೊನ್ನಣ್ಣವರ,  ಅಕ್ಕಮ್ಮ ರಾಠೋಡ, ಸದಸ್ಯರಾಗಿ ಕವಿತಾ ಲಮಾಣಿ, ಕವಿತಾ ಬಂಡಿವಡ್ಡರ, ಸುನಿತಾ ರಾಥೋಡ್, ಶಿವಮ್ಮ, ಪ್ರೇಮವ್ವ, ಸರೋಜ ಮಾಳೋತ್ತರ ಆಯ್ಕೆ ಮಾಡಲಾಯಿತು. 

ಈ ಸಮಾವೇಶದಲ್ಲಿ ಶರಣು ಮಾಟ್ರಂಗಿ, ರವಿತೇಜ ಮಾದಿ, ಅನಿಲ್ ಆರ್, ಅಲ್ಲಮ್ಮ ಮಾಲದಾರ, ಲಕ್ಷ್ಮಿಬಾಯಿ ಪವಾರ, ಎಲ್ಲವ್ವ ಮಾದರ, ರತ್ನವ್ವ ಬಡಿಗೇರ, ‌ಅನುಸುಯಾ. ಜೀಜಾಬಿ ಉಟಗಾರ, ಮೈಬು ಹವಾಲ್ದಾರ್ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಳಿಗಾಲದ ಅಧಿವೇಶನ ಪೂರ್ವಸಿದ್ಧತೆ; 12 ಸಮಿತಿಗಳ ರಚನೆ

ಡಿಸೆಂಬರ್ ತಿಂಗಳಲ್ಲಿ ಜರುಗಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಿಗೆ...

ಗದಗ | ಕೃಷಿ ಮೌಲ್ಯವರ್ಧನೆ, ಮಾರುಕಟ್ಟೆ ಜಾಲ ವಿಸ್ತರಣೆ ಇಂದಿನ ಅಗತ್ಯ: ಈಶ್ವರ ಖಂಡ್ರೆ

ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ದೇಶದ...

ಬರ ಹಿನ್ನೆಲೆ; ವಿಬಿ-ಜಿ ರಾಮ್‌ಜಿ ಯೋಜನೆಯಡಿ 175 ದಿನಗಳ ಕೆಲಸಕ್ಕೆ ಪತ್ರ: ಈಶ್ವರ ಖಂಡ್ರೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಆವರಿಸಿದ್ದು, "ವಿಕಸಿತ ಭಾರತ - ಗ್ಯಾರಂಟಿ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ; ಫಲಿಸಿತು ದಶಕಗಳ ಬೇಡಿಕೆ

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ...