ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

Date:

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ ಜವಾಬ್ದಾರಿ ಇದೆ ಎಂದು ಒಂದಷ್ಟು ಜನ ಬಂದು ಕೇಳಿದಾಗ, ಆಯಿತು ನೋಡ್ತೀನಿ, ಯಾರಿಗೆ ಹೇಳಬೇಕೋ ಅವರಿಗೆ ಹೇಳಿ ಏನು ನಿರ್ಧಾರ ತಗೋಬೇಕೋ ತಗೋಳ್ತಾರೆ ಎಂದು ಹೇಳಿದ್ದೇನೆ ಎಂದು ಸಂಸದ ಎಂ. ಮಲ್ಲೇಶ್ ಬಾಬು ತಿಳಿಸಿದರು.

- Advertisement -

ಕೋಲಾರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಕೊನೆಗೆ ನಾನು ಹೋಗಲಿ ನನ್ನ ಅನುದಾನದಲ್ಲೇ ಮಾಡಿಕೊಡ್ತೀನಿ ಎಂದು ಹೇಳಿ ಅನುದಾನದಲ್ಲಿ ಮಾಡಿದೆ ಎಂದರು. ಇದು ನನಗೆ ತಿಳಿದ ಮಟ್ಟಿಗೆ ಗವರ್ನಮೆಂಟ್ ಪ್ರಾಬ್ಲಂ, ಮುನ್ಸಿಪಾಲಿಟಿದು, ನಗರಸಭೆದು. ನಗರಸಭೆಗೆ ಬಂದಾಗ ಎಂ.ಪಿ ಫಂಡ್ಸ್ ಆದರೂ ಆಗಲಿ, ಎಂ.ಎಲ್.ಎ ಫಂಡ್ಸ್ ಆದರೂ ಆಗಲಿ, ಎಂ.ಎಲ್.ಸಿ ಫಂಡ್ಸ್ ಆದರೂ ಆಗಲಿ ಒಂದು ಕೆಲಸ ಮಾಡಿದ ಮೇಲೆ ಅದರಲ್ಲಿ ಯಾರದು ಅನುದಾನ, ಯಾವ ಸಾಲಿನ ಅನುದಾನ, ಎಷ್ಟು ಹಾಕಿದ್ದಾರೆ ಎಂದು ಒಂದು ಬೋರ್ಡ್, ಫಲಕ ಹಾಕಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

ಆ ನಿಟ್ಟಿನಲ್ಲಿ ಅಲ್ಲಿ ನಮ್ಮ ಹೆಚ್.ಎಂ.ಟಿ ಅವರು ವಾಚ್ ಮಾತ್ರ ಹಾಕಿದ್ದೀವಿ ಅಂತ ಬಂದು ಇನ್ಸ್‌ಪೆಕ್ಷನ್ ಮಾಡಿದಾಗ ಟವರ್ ನೋಡಿದರು. ಟವರ್‌ನಲ್ಲಿ ಎಲ್ಲೂ ಹಾಕೋಕೆ ಆಗಲ್ಲ ಅನ್ನೋದಕ್ಕೆ ವಾಚ್ ಒಳಗಡೆನೇ ಆ ಹೆಸರು ಮತ್ತೆ ಎಂ.ಪಿ ಫಂಡ್ಸ್ ಅಂತ ಕೂಡ ಹಾಕಿದ್ದಾರೆ ಎಂದರು.

ಇದನ್ನ ಒಂದಷ್ಟು ಜನ ಏನು ಇದು ಬೇಕಾಗಿಲ್ಲ, ಸಂಸದರ ಹೆಸರು ಯಾಕೆ ಎಂದು ಹೇಳುತ್ತಿದ್ದಾರೆ. ಇದು ಜಿಲ್ಲಾಡಳಿತ ಅಧಿಕಾರಿಗಳು ನಿರ್ಧಾರ ತಗೊಳ್ಳಿ, ಯಾಕಂದ್ರೆ ಇದು ಗವರ್ನಮೆಂಟ್ ಸ್ವತ್ತು, ಟವರ್ ಅನ್ನೋದು ಅದರ ಜೊತೆ ಹಳೆ ಬಸ್ ಸ್ಟ್ಯಾಂಡ್ ಅದು ಗವರ್ನಮೆಂಟ್ ಸ್ವತ್ತು. ಅವರು ನಿರ್ಧಾರ ತಗೋಳಿ ಎಂದು ಹೇಳೋಕೆ ಇಷ್ಟಪಡ್ತೀನಿ ಎಂದರು.

ಎಂ.ಪಿ ಫಂಡ್ಸ್, ಎಂ.ಎಲ್.ಎ ಫಂಡ್ಸ್, ಎಂ.ಎಲ್.ಸಿ ಫಂಡ್ಸ್ ಹಾಕಿದಾಗ ಎಲ್ಲಿ ಅದನ್ನ ತಗೊಂಡು ಮತ್ತೆ ಫೈನಲ್ ಬಿಲ್ ಮಾಡಿದಾಗ ಆ ಕೆಲಸ ಎಲ್ಲಿ ಮಾಡಿದರೋ ಅದರ ಜೊತೆ ಆ ಫಲಕ ಎರಡು ಕಾಣಿಸಬೇಕು. ಅದು ಹೇಗೆ ನಿರ್ಧಾರ ತಗೋತಾರೋ ಡಿಸಿ ಅವರು ಮತ್ತೆ ಅದರ ಅಧಿಕಾರಿಗಳು ಅದಕ್ಕೆ ಬಿಟ್ಟಿದ್ದು ಎಂದರು. ನಾವು ಎಂ.ಪಿ.ಯಿಂಗೆದ್ದಿದ್ದೀವಿ, ಅಭಿವೃದ್ಧಿ ಹಾದಿಯಲ್ಲಿ ಹೋಗೋಕೆ ನಾವು ಸದಾ ಸಿದ್ಧವಾಗಿದ್ದೀವಿ. ಕೋಲಾರ ಅನ್ನೋದು ಏನು ಹಳ್ಳಿನು ಅಲ್ಲ, ಸಿಟಿನು ಅಲ್ಲ. ಎಲ್ಲಿ ಎಲ್ಲ ಕಡೆನೂ ಬೆಂಗಳೂರಲ್ಲಿ ಎಲ್ಲಿ ಹೋದರೂ ಕೇಳ್ತಾರೆ ಏನು ಡೆವಲಪ್ ಆಗಿಲ್ಲ, ಡೆವಲಪ್ ಆಗಿಲ್ಲ ಎಂದು ಹೇಳಿದರು.

ಎಲ್ಲೋ ಒಂದು ಕಡೆ ನ್ಯಾಷನಲ್ ಹೈವೇ ಟೋಲ್ ಪಕ್ಕದಲ್ಲೇ ಓದ್ತಾಯಿರೋದು ಇದಕ್ಕೆ ಒಂದು ಮೆರುಕು ಕೊಡಬೇಕು ಎಂದು ನ್ಯಾಷನಲ್ ಹೈವೇ ಅಥಾರಿಟಿ ಕಡೆಯಿಂದ ಸುಮಾರು ಏಳು ಕಿಲೋಮೀಟರ್ ಲೈಟ್ ಹಾಕಿಸಿದ್ದೇವೆ ಎಂದರು. ಇವತ್ತು ನಮ್ಮ ಕೋಲಾರದಲ್ಲಿ ಇರೋದು ಬರಿ ದೇವಸ್ಥಾನಕ್ಕೆ ಕೋಲಾರ ಜಿಲ್ಲೆಯಲ್ಲಿ ಜಾಸ್ತಿ. ಮುಳಬಾಗಿಲು ಆದರೂ ಆಗಲಿ, ಕೆ.ಜಿ.ಎಫ್ ಆದರೂ ಆಗಲಿ, ಮಾಲೂರು ಆದರೂ ಆಗಲಿ, ಶ್ರೀನಿವಾಸಪುರ ಆದರೂ ಆಗಲಿ ದೇವಸ್ಥಾನಕ್ಕೆ ಜನ ಬರ್ತಾರೆ. ಪುರಾತನ ದೇವಸ್ಥಾನಗಳು ಅನ್ನೋದು ಬಹಳ ಮುಖ್ಯವಾದದ್ದು. ಎಲ್ಲ ಜನ ಬಂದು ಹೋದಾಗ ಎಲ್ಲೋ ಒಂದು ಕಡೆ ನಾವು ಟೂರಿಸಂ ಡೆವಲಪ್ ಮಾಡಬೇಕು ಅಂದ್ರೆ ಮತ್ತೆ ಹಳೆ ಪ್ರಾಚೀನವಾದ ಏನು ವಸ್ತುಗಳಿವೆ ಅದನ್ನ ಕಾಪಾಡೋ ಜವಾಬ್ದಾರಿ ನಮ್ಮದು ಎಂದರು.

ಸ್ಮಾರಕ ಕ್ಲಾಕ್ ಟವರ್ ಮತ್ತೆ ಸುಮಾರು 1936ನೇ ಇಸವಿಯಲ್ಲಿ ಕಟ್ಟಿರೋದು ನಮ್ಮ ಹಳೆ ಬಸ್ ಸ್ಟ್ಯಾಂಡ್ 1952ರಲ್ಲಿ, 52-53ಕ್ಕೆ ಇದು. ಹಳೆ ಕಾಲದಲ್ಲಿರೋ ಜನರು ಎಲ್ಲ ನೋಡಿ ಅದರಲ್ಲಿ ವಾಚ್ ನೋಡಿ ಅದರಲ್ಲಿ ಟೈಂ ಎಷ್ಟು ಅಂತ ತಿಳಿದುಕೊಳ್ಳುತ್ತಿದ್ದರು. ಅದನ್ನ ಇನ್ನ ನೆನಪಿಸಿ ನೆನಪಿಸಿಕೊಳ್ಳುತ್ತಾರೆ ಎಂದರು.

ಆ ವಾಚ್ ಇಲ್ಲ ಅಂತ ಒಂದು ಕಾರಣಕ್ಕೆ ಸುಮಾರು 30 ವರ್ಷದಿಂದ ನಾನೇ ನೋಡಿದಾಗ ಯಾಕೆ ವಾಚ್ ಹಾಕಬಾರದು. ಮನೆಗಳಲ್ಲಿ ನಾವು ಮುರಿದು ಹೋಗಿರೋ ವಾಚ್ ಇಲ್ಲ ಅಂದರೆ ಗ್ಲಾಸ್ ಒಡೆದಿದೆ ಅದು ಅಶುಭ ಅಂತ ತೆಗೆದು ಆಚೆ ಇಡ್ತೀವಿ. ಅಂತದ್ದು ನಮ್ಮ ಕೋಲಾರ ಟೌನ್‌ಗೆ ಅಂತ ಒಂದು ಇದು ಇದ್ದಾಗ ಹೊಡೆದು ಹೋಗಿರೋದು ಇದನ್ನ ಮುಚ್ಚಿಡೋದು ಯಾಕೆ, ಹೊಸದು ಹಾಕಬಾರದು, ಒಳ್ಳೇದು ಆಗುತ್ತೆ. ನಮ್ಮ ಕಡೆಯಿಂದ ಒಬ್ಬ ಸಂಸದನಾಗಿ ನಾನು ಈ ಕೆಲಸ ಮಾಡಿದರೆ ಇನ್ನ ಒಳ್ಳೆಯದಾಗುತ್ತೆ ನಮ್ಮ ಜಿಲ್ಲೆಗೆ ಅಂತ ಹೇಳಿ ನಾನು ಒಂದು ಕೆಲಸ ಮಾಡಿದೆ ಎಂದರು.

ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಅದರಲ್ಲಿ ಒಂದಷ್ಟು ಜನ ಬೇಡ ಅನ್ನೋದು ಅದು ಅವರಿಗೆ ಬಿಟ್ಟಿರೋದು. ಜಿಲ್ಲಾಡಳಿತ ಒಂದು ನಿರ್ಧಾರ ತಗೊಳ್ಳಿ ಏನು ಮಾಡಬೇಕು ಅಂತ ಹೇಳಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕೃಷಿ ಮೌಲ್ಯವರ್ಧನೆ, ಮಾರುಕಟ್ಟೆ ಜಾಲ ವಿಸ್ತರಣೆ ಇಂದಿನ ಅಗತ್ಯ: ಈಶ್ವರ ಖಂಡ್ರೆ

ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ದೇಶದ...

ಬರ ಹಿನ್ನೆಲೆ; ವಿಬಿ-ಜಿ ರಾಮ್‌ಜಿ ಯೋಜನೆಯಡಿ 175 ದಿನಗಳ ಕೆಲಸಕ್ಕೆ ಪತ್ರ: ಈಶ್ವರ ಖಂಡ್ರೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಆವರಿಸಿದ್ದು, "ವಿಕಸಿತ ಭಾರತ - ಗ್ಯಾರಂಟಿ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ; ಫಲಿಸಿತು ದಶಕಗಳ ಬೇಡಿಕೆ

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ...

ಮುಂಡಗೋಡ | ಮನೆಯಲ್ಲಿ ಕಾಡು ಹಂದಿ ಮಾಂಸ ಪತ್ತೆ: ಓರ್ವ ಅರೆಸ್ಟ್, ಮತ್ತೊಬ್ಬ ಪರಾರಿ!

ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸವನ್ನು ಪಾಲು ಮಾಡಿ ಅಡುಗೆ...