ಗುಬ್ಬಿ | ಬಿಕ್ಕೇಗುಡ್ಡ ಕಾವಲ್ ಗ್ರಾಮದ ದಲಿತ ರೈತರು ಅತಂತ್ರ : ಜಮೀನು ಮಂಜೂರು ದಾಖಲೆ ಮಾಡುವಂತೆ ಮನವಿ

Date:

ಹತ್ತಾರು ವರ್ಷಗಳಿಂದ ಭೂಮಿ ಅನುಭವದಲ್ಲಿರುವ ಬಿಕ್ಕೇಗುಡ್ಡ ಕಾವಲ್ ಗ್ರಾಮದ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ದಾಖಲೆ ಮಾಡದೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ದಾಖಲೆ ಇಲ್ಲದೆ 99 ಎಕರೆ ಪ್ರದೇಶದಲ್ಲಿ 50 ಕ್ಕೂ ಅಧಿಕ ದಲಿತ ಕುಟುಂಬ ಪರದಾಡುತ್ತಿದೆ. ಈ ನಿಟ್ಟಿನಲ್ಲಿ ಅನುಭವದಾರರಿಗೆ ದಾಖಲೆ ಮಾಡಿಕೊಡುವಂತೆ ಸಂತ್ರಸ್ತ ದಲಿತ ಕುಟುಂಬ ಸದಸ್ಯರು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

- Advertisement -

ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂತ್ರಸ್ತರು ಬಿಕ್ಕೇಗುಡ್ಡ ಕಾವಲ್ ಸರ್ವೇ ನಂಬರ್ 93 ರಲ್ಲಿನ ಜಮೀನು ದುರಸ್ತಿ ಮಾಡಿ ನಕ್ಷೆ ಸಿದ್ಧಪಡಿಸಿ ಈ ದಾಖಲೆ ಆಧಾರ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ಶೀಘ್ರ ದಾಖಲೆ ನೀಡಿದರೆ ಕೃಷಿ ಚಟುವಟಿಕೆ ನಡೆಸುತ್ತೇವೆ ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಗ್ರಾಮ ಪಂಚಾಯಿತಿ ಸದಸ್ಯ ವಿದ್ಯಾಸಾಗರ್ ಮಾತನಾಡಿ ಎಲ್ಲಾ ಸರ್ಕಾರದಿಂದ ಮೂಲ ಸವಲತ್ತು ಪಡೆದು ನೂರಾರು ವರ್ಷದಿಂದ ವಾಸವಿರುವ ಬಿಕ್ಕೇಗುಡ್ಡ ಕಾವಲ್ ಗ್ರಾಮದಲ್ಲಿ 99 ಎಕರೆ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ದಲಿತ ಕುಟುಂಬ ಈಗ ದ್ವಿಗುಣ ಸಂಖ್ಯೆಯಲ್ಲಿದೆ. ಹೊಸ ಕುಟುಂಬ ಸೃಷ್ಟಿಯಾದರೂ ಜಮೀನು ಭಾಗ ಮಾಡಿಕೊಳ್ಳಲಾಗದ ಸ್ಥಿತಿ ಊರಿನ ಸಹೋದರರಲ್ಲಿ ಕಂಡಿದೆ. ಖಾಯಂ ಮಂಜೂರಾತಿ ಪಡೆದ ಕುಟುಂಬಕ್ಕೆ ಮಾತ್ರ ಜಮೀನು ನೀಡಿದರೆ ಉಳಿದ ಕುಟುಂಬ ಒಕ್ಕಲೆಬ್ಬಿಸಿದಂತೆ ಆಗುತ್ತದೆ. ಶೇಕಡಾ 80 ರಷ್ಟು ಮಂದಿ ಸಂತ್ರಸ್ತ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ. ಬಗರ್ ಹುಕುಂ ಸಮಿತಿ, ಅಕ್ರಮ ಸಕ್ರಮ ಹೀಗೆ ಅನೇಕ ರೀತಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಫಲಾನುಭವಿಗಳಿಗೆ ಭೂಮಿ ನೀಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ತುಳಿಯುತ್ತೇವೆ ಎಂದು ಎಚ್ಚರಿಸಿದರು.

ಸ್ಥಳೀಯ ಮುಖಂಡ ಸುರೇಶ್ ಮಾತನಾಡಿ 1958-59 ರಲ್ಲಿ 50 ಹರಿಜನ ಕುಟುಂಬಕ್ಕೆ ಖಾಯಂ ಮಂಜೂರಾತಿ ನೀಡಿದ್ದ ಸರ್ಕಾರ ಊರು ಬಿಟ್ಟ 10 ಕುಟುಂಬವನ್ನು ವಜಾಗೊಳಿಸಿತ್ತು. 1981-82 ರಲ್ಲಿ ಬದಲಾವಣೆ ಮಾಡಲಿಲ್ಲ. ಹೀಗೆ ನಡೆದು ಕಾವಲ್ ಹೆಸರಿನಲ್ಲಿ ತಾಂತ್ರಿಕ ಸಮಸ್ಯೆ ಮುಂದಿಟ್ಟು ನಮ್ಮ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಖಾಯಂ ಮಂಜೂರಾತಿದಾರರು ಹಾಗೂ ಅನುಭವದಾರರು ಎಂಬ ನಮ್ಮಲ್ಲೇ ಕಿತ್ತಾಟ ಆಗುವ ಮುನ್ನ ಎಲ್ಲಾ ದಲಿತ ಕುಟುಂಬಗಳಿಗೆ ಅನುಭವ ಜಾಗವನ್ನು ದುರಸ್ತಿಗೊಳಿಸಿ ನಕ್ಷೆ ಸಿದ್ಧಪಡಿಸಿ ಮಂಜೂರು ದಾಖಲೆ ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಿ.ಆರತಿ ಸಂತ್ರಸ್ತರ ಜೊತೆ ಚರ್ಚಿಸಿ ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಸಿ ಸರ್ಕಾರದ ಗಮನಕ್ಕೆ ತಂದು ಒಂದು ಪರಿಹಾರ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಚಿಕ್ಕಮ್ಮ, ತಾಪಂ ಮಾಜಿ ಸದಸ್ಯ ಮುಳ್ಳುಕಟ್ಟಯ್ಯ, ಮುಖಂಡರಾದ ದೊಡ್ಡೇಗೌಡ, ಗೋವಿಂದಪ್ಪ, ಸೋಮಣ್ಣ, ಕೃಷ್ಣಪ್ಪ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎರಡು ದಿನದ ಕಂಬಳಕ್ಕಾಗಿ ಪರಿಸರ ಬಲಿ? ಕೆರೆಯ ಜಾಗ, ಮರಗಳ ತೆರವಿನ ಸುತ್ತ ಗಂಭೀರ ಪ್ರಶ್ನೆಗಳು!

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಆಯೋಜಿಸುವ ನಿರ್ಧಾರ ಈಗ ಕೇವಲ...

ಮೈಸೂರು | ‘SIR’ ವಿರುದ್ಧ ಮಾನಸಗಂಗೋತ್ರಿಯಲ್ಲಿ ಪ್ರತಿಭಟನಾ ಜಾಥಾ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ, ಸಂವಿಧಾನದ...

ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್

“ಕರಾವಳಿಯ ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ”...

ತುಮಕೂರು | ಸಚಿವ ಸೋಮಣ್ಣ ಭಾಷಣದ ವೇಳೆ ಚುನಾವಣಾ ಪ್ರಚಾರಕ್ಕೆ ಆಕ್ಷೇಪ; ಸಭೆಯಲ್ಲಿ ವಾಗ್ವಾದ

ತುಮಕೂರು ನಗರದ ಶ್ರೀ ಮುರುಘ ರಾಜೇಂದ್ರ ಸಭಾಂಗಣದಲ್ಲಿ ವೀರಶೈವ ಲಿಂಗಾಯತ  ಸಮಾಜದ...