ಗುಬ್ಬಿ | ಆಸ್ತಿಗಾಗಿ ಮಗನ ಹಠ ; ಹೆತ್ತವಳಿಗೆ ಪ್ರಾಣ ಸಂಕಟ : ಒಡ ಹುಟ್ಟಿದವರ ಪರದಾಟ

Date:

 ಆಸ್ತಿಗಾಗಿ ಹೆತ್ತ ಮಗನಿಂದ ತೀವ್ರ ಮಾನಸಿಕ ನೋವು ಅನುಭವಿಸಿದ ವೃದ್ಧ ತಾಯಿಯ ಸಂಕಟ ಕೇಳುವರರಿಲ್ಲ. ಜಮೀನಿನಲ್ಲಿ ಮನೆ ಕಟ್ಟುವ ನೆಪದಲ್ಲಿ ತನ್ನ ತಾಯಿಯ ಮನೆಯ ಬಾಗಿಲು ತೆರೆಯದಂತೆ ಮಣ್ಣು ಸುರಿದು ತೊಂದರೆ ನೀಡುತ್ತಿದ್ದಾನೆ ಎಂದು ವೃದ್ಧ ತಾಯಿ ಮಾಧ್ಯಮ ಮುಂದೆ ತನ್ನ ಅಳಲು ತೋಡಿಕೊಂಡರು.

- Advertisement -

ಗುಬ್ಬಿ  ತಾಲ್ಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದ ವೃದ್ಧ ತಾಯಿ ರುದ್ರಮ್ಮ ತನ್ನ ಹೆಸರಿನ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದು, ಒಟ್ಟು ನಾಲ್ಕು ಮಕ್ಕಳ ಪೈಕಿ ಒಬ್ಬನೇ ಮಂಜುನಾಥ್ ಹೆತ್ತ ತಾಯಿಯನ್ನು ಸಾಕಿ ಸಲಹದೇ ಆಸ್ತಿಗಾಗಿ ತಾಯಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಈ ಬಗ್ಗೆ ಪೊಲೀಸರ ಬಳಿ ಹೇಳಿದರೂ ನ್ಯಾಯ ಸಿಗದೇ ಕಳೆದ ನಾಲ್ಕು ವರ್ಷದಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂದು ಮಾಧ್ಯಮ ಮುಂದೆ ವೃದ್ಧ ತಾಯಿ ಅಳಲು ತೋಡಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಪತಿ ಸಾವಿನ ನಂತರ ಪವತಿ ಆಧಾರದ ಮೂಲಕ ವೃದ್ದೆ ರುದ್ರಮ್ಮ ಹೆಸರಿಗೆ ಬಂದ ಆಸ್ತಿಗಾಗಿ ಒಬ್ಬನೇ ಮಗ ತನ್ನ ಒಡಹುಟ್ಟಿದ ಮೂವರು ಹೆಣ್ಣು ಮಕ್ಕಳಿಗೂ ತೊಂದರೆ ನೀಡಿದ್ದಾನೆ. ನನ್ನ ಸೇರಿ ಐದು ಭಾಗ ಮಾಡುವುದಾಗಿ ಹೇಳಿದರೆ ಅದಕ್ಕೂ ಅಡ್ಡಿ ಪಡಿಸುತ್ತಾ ಪ್ರಸ್ತುತ ಬೆಳೆದ ಅಡಿಕೆ ಬೆಳೆಯನ್ನು ತಾನೇ ಖುದ್ದು ಕಿತ್ತು ಗಲಾಟೆ ಮಾಡುತ್ತಿದ್ದಾನೆ. ನಾನು ಚೇಣಿಗೆ ನೀಡಿದ ರೈತರಿಗೂ ಅಡಿಕೆ ಕಾಯಿ ಕೀಳಲು ಬಿಡದೆ ನನಗೂ ಜೀವನ ನಡೆಸಲು ಬಿಡದೆ ತನ್ನ ಅಕ್ಕಂದಿರಿಗೂ ಹಲ್ಲೆ ಮಾಡುತ್ತಾ ಹಿಂಸೆ ನೀಡುತ್ತಿದ್ದಾನೆ ಎಂದು ತನ್ನ ಮಾನಸಿಕ ಹಿಂಸೆಯನ್ನು ವಿವರಿಸಿದ್ದಾರೆ.

ಆಸ್ತಿಗಾಗಿ ನನ್ನನ್ನು ಊರಿಂದ ಹೊರ ಹಾಕಲು ನನ್ನ ಮನೆಯ ಪಕ್ಕದಲ್ಲೇ ಹೊಸ ಮನೆ ನಿರ್ಮಾಣ ನೆವದಲ್ಲಿ ನನ್ನ ಮನೆಯ ಬಾಗಿಲು ಮುಂದೆ ಮಣ್ಣು ಸುರಿದು ಓಡಾಡಲು ಆಗದಂತೆ ತೊಂದರೆ ನೀಡುತ್ತಿದ್ದು, ನೆಮ್ಮದಿ ಇಲ್ಲದೆ ಹೆಣ್ಣು ಮಕ್ಕಳ ಜೊತೆ ಜೀವನ ನಡೆಸುವ ಅನಿವಾರ್ಯ ಎದುರಾಗಿದೆ. ತನ್ನ ಜಮೀನಿನ ಅಡಿಕೆಯನ್ನು ಕೀಳಲು ಪ್ರಭಾವಿಗಳ ಸಹಕಾರ ಪಡೆದು ನನ್ನನ್ನು ಜಮೀನಿನಿಂದ ಹೊರ ಹಾಕಲು ಸಜ್ಜಾಗಿದ್ದಾನೆ. ನನಗೆ ಸಹಕಾರ ನೀಡಲು ಬರುವವವರಿಗೂ ಬೆದರಿಕೆಯೊಡ್ಡಿ ಯಾರೊಬ್ಬರೂ ನನ್ನ ನೆರವಿಗೆ ಬರುತ್ತಿಲ್ಲ. ಇತ್ತ ಪೊಲೀಸರು ನನಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಸಂತ್ರಸ್ತ ವೃದ್ದೆಗೆ ಬಂದ ಆಸ್ತಿಯೇ ಮುಳುವಾಗಿರುವುದು ವಿಪರ್ಯಾಸ. ಒಟ್ಟಾರೆ ಮಾಧ್ಯಮ ಮುಂದೆ ಬಂದ ವೃದ್ಧ ತಾಯಿಗೆ ಪೊಲೀಸರು ನ್ಯಾಯ ಒದಗಿಸುವರೇ ಕಾದು ನೋಡಬೇಕಿದೆ.

ಇದೇ ಸಂದರ್ಭದಲ್ಲಿ ವೃದ್ದೆ ರುದ್ರಮ್ಮನ ಮಕ್ಕಳಾದ ಗೀತಾ, ಪ್ರಮೀಳಾ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ವಿದ್ಯುತ್ ಬಿಲ್ ಬಾಕಿ: ಅಂಬೇಡ್ಕರ್ ವಸತಿ ನಿಲಯದ ವಿದ್ಯುತ್ ಸಂಪರ್ಕ ಕಡಿತ

ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್....

ಉಡುಪಿ | ಗೃಹಜ್ಯೋತಿ ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಕಾಲಾವಕಾಶ ವಿಸ್ತರಣೆ: ರಮೇಶ್ ಕಾಂಚನ್

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ...

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...