ಹಾಸನ ಪೆನ್‌ಡ್ರೈವ್‌ | ಬ್ಲಾಕ್‌ಮೇಲ್‌ಗಾಗಿ ವಿಡಿಯೋ ಮಾಡಿಕೊಂಡಿದ್ರಾ?; ನ್ಯಾಯಾಂಗ ತನಿಖೆಗೆ ಆಗ್ರಹ

Date:

ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಯಾರು ಅಪರಾಧಿ ಇದ್ದಾರೋ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಆರ್‌.ಪಿ ವೆಂಕಟೇಶ ಮೂರ್ತಿ ಒತ್ತಾಯಿಸಿದ್ದಾರೆ.

ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಪ್ರಕರಣ ಗಂಭೀರವಾದದ್ದು. ಒಬ್ಬ ಅಸಹಾಯ ಮಹಿಳೆ ಇಂತಹ ಕೃತ್ಯವನ್ನ ನಿರಾಕರಿಸಿದರೂ, ಆಕೆಯನ್ನ ಬಲವಂತವಾಗಿ ತನ್ನ ಕಾಮವಾಂಚೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಆತನನ್ನ ಬಂಧಿಸಬೇಕು. ಪ್ರಕರಣದಲ್ಲಿ ಮೊದಲ ಸಾಕ್ಷ್ಯಯಾಗಿ ಬಿಜೆಪಿಯ ದೇವರಾಜೇಗೌಡ ಅವರನ್ನು ಪರಿಗಣಿಸಬೇಕು” ಎಂದು ಹೇಳಿದರು.

“’ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದೆ. ಈ ವ್ಯಕ್ತಿಯ ಹಲವಾರು ವಿಡಿಯೋಗಳಿವೆ, ಆತನನ್ನ ಮೈತ್ರಿ ಅಭ್ಯರ್ಥಿ ಮಾಡಬೇಡಿ ಅಂತ ಹೇಳಿದ್ದೆ. ಆದರೂ, ಮೈತ್ರಿ ಮಾಡಿಕೊಂಡಿದ್ದಾರೆ’ ಅಂತ ದೇವರಾಜೇಗೌಡ ಹೇಳಿದ್ದರು. ಆತನ ಹೇಳಿರುವುದು ನಿಜವಾ? 2900ಕ್ಕೂ ಹೆಚ್ಚು ವಿಡಿಯೋಗಳಿವೆ ಎಂದು ದೇವರಾಜೇಗೌಡ ಹೇಳಿದ್ದಾರೆ. ಅದರಲ್ಲಿ, ಒಂದು ವಿಡಿಯೋ ಗಮನಿಸಿದರೆ, ಅದು ಅತ್ಯಾಚಾರ ಎಂಬುದು ಸ್ಪಷ್ಟವಾಗಿದೆ. ಆಕೆಯ ಸಮ್ಮತಿ ಇಲ್ಲದಿದ್ದರೂ, ಆಕೆಯ ಮೇಲೆ ದೌರ್ಜನ್ಯ ಎಸಲಾಗಿದೆ” ಎಂದು ವೆಂಕಟೇಶ ಮೂರ್ತಿ ಅರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬಹಳ ಜನ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಕೋರ್ಟ್‌ನಲ್ಲಿ ಸ್ಟೇ ತಂದಿದ್ದಾರೆ ಎಂಬ ಕಾರಣಕ್ಕೆ ಅವರ ಹೆಸರನ್ನು ನಾನು ಹೇಳುತ್ತಿಲ್ಲ. ನನ್ನನ್ನ ಕೇಳೋರು ಯಾರು ಇಲ್ಲ ಎಂಬ ಅಹಃ ಇಂತಹ ಕೃತ್ಯಕ್ಕೆ ಕಾರಣ. ಆ ಮಹಿಳೆಯರ ಕುಟುಂಬವು ಈ ವಿಡಿಯೋಗಳನ್ನು ನೋಡಿದ್ರೆ, ಆ ಮಹಿಳೆಯರು ಮತ್ತು ಕುಟುಂಬದ ಪರಿಸ್ಥಿತಿ ಏನಾಗಬೇಕು” ಎಂದರು.

“ಕೆಲವರು ಸಮ್ಮತಿಯಿಂದಲೇ ಕೃತ್ಯದಲ್ಲಿ ಪಾಲ್ಗೊಂಡಿರಬಹುದು. ಆದರೆ, ಆ ಕೃತ್ಯವನ್ನ ತಾನೇ ವಿಡಿಯೋ ಮಾಡಿಕೊಂಡಿರುವುದು ವಿಕೃತಿ. ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ಆತ ವಿಡಿಯೋ ಮಾಡಿಕೊಂಡಿದ್ದಾನಾ” ಎಂದು ಪ್ರಶ್ನಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಖ್ಯ ರಸ್ತೆ ದುರಸ್ಥಿ ಮಾಡುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ

ಗದಗ ಮುಖ್ಯ ರಸ್ತೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದು ಈ ರಸ್ತೆಯ ದುರಸ್ತಿ...

ಬೀದರ್‌ | ಬೆಂಕಿ ಅವಘಡ ; ಹೊತ್ತಿ ಉರಿದ ಜೆಸ್ಕಾಂ ಕಚೇರಿ

ಟ್ರಾನ್ಸ್‌ಫಾರ್ಮಾರ್‌ ರಿಪೇರಿ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗ ಧಗನೆ...

ಮೈಸೂರು: ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ

ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿ ಯೊಂದು ಹಠಾತ್ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ...

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ 6 ಜನರ ಸಾವು

ಇಂದು ಮುಂಜಾನೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು...