ದೇವೇಗೌಡರ ಕುಟುಂಬದ ಕಿರುಕುಳಕ್ಕೆ ಅಧಿಕಾರಿಗಳು ಕುಗ್ಗಿ ಹೋಗಿದ್ದಾರೆ, ಪತ್ರಕರ್ತರು ಭಯದಲ್ಲಿದ್ದಾರೆ : ಆರ್.ಪಿ.ವೆಂಕಟೇಶ್ ಮೂರ್ತಿ

Date:

ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಕುಟುಂಬದ ವಿರುದ್ಧವಾಗಿ ಹಾಸನದ ಯಾವುದೇ ಒಬ್ಬ ಪತ್ರಕರ್ತರು ಬರೆಯಲು ಧೈರ್ಯ ತೋರಲ್ಲ. ಅದು ಆ ಕುಟುಂಬದವರೇ ಪತ್ರಕರ್ತರನ್ನು ಹೆದರಿಸುತ್ತಾರೋ? ಅಥವಾ ಅವರೇ ಭಯ ಇಟ್ಟುಕೊಂಡಿದ್ದಾರೋ ಇಲ್ಲವೇ ಆ ಕುಟುಂಬದಿಂದ ಏನಾದ್ರೂ ನಿರೀಕ್ಷೆ ಮಾಡುತ್ತಾರೋ?

ಹೀಗೆ ಗಂಭೀರವಾಗಿ ಅನುಮಾನ ವ್ಯಕ್ತಪಡಿಸಿದವರು ಹಾಸನದ ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ.

ಕರ್ನಾಟಕದ ಹೆಸರಿಗೆ ಮಸಿ ಬಳಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಸಂಗ್ರಹದ ಪೆನ್‌ ಡ್ರೈವ್‌ ಪ್ರಕರಣ ವಿಚಾರವಾಗಿ ಈ ದಿನ.ಕಾಮ್‌ ನಡೆಸಿದ ಸಂದರ್ಶನದಲ್ಲಿ ದೇವೇಗೌಡರ ಕುಟುಂಬ ಕಳಂಕಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎಚ್‌ ಡಿ ರೇವಣ್ಣ ಅವರು ಹಾಸನದಲ್ಲಿ ನಿಯಮಗಳನ್ನು ಬ್ರೇಕ್‌ ಮಾಡುವುದರಲ್ಲಿ ನಿಸ್ಸೀಮರು. ಮತ್ತು ಅದನ್ನು ಅವರು ಎಂಜಾಯ್‌ ಮಾಡುತ್ತಾರೆ. ಕೆಲವು ಬಾರಿ ಪತ್ರಕರ್ತರನ್ನೇ ಬಹಿಷ್ಕಾರ ಮಾಡುತ್ತಾರೆ. ಹಾಸನದಲ್ಲಿ ಯಾವುದೇ ರಾಜಕೀಯ ನಾಯಕರು ಪತ್ರಕರ್ತರ ಸಂಘದ ಕಚೇರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ರೆ ರೇವಣ್ಣ ಈವರೆಗೂ ಇಲ್ಲಿ ಹೆಜ್ಜೆ ಇಟ್ಟಿಲ್ಲ. ಅವರು ಎಲ್ಲಿ ಸುದ್ದಿಗೋಷ್ಠಿ ಕರೆಯುತ್ತಾರೋ ಅಲ್ಲಿಗೆ ಪತ್ರಕರ್ತರು ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಾರೆ. ಈ ಮಟ್ಟಿಗೆ ಅವರ ಪಾಳೇಗಾರಿಕೆ ಇದೆ” ಎಂದು ವಿವರಿಸಿದ್ದಾರೆ.

ಪೆನ್‌ ಡ್ರೈವ್‌ ಪ್ರಕರಣ ನಾನು ಊಹಿಸಿದಂತೆ ಆಯಿತು!

“ಬಿಜೆಪಿ ನಾಯಕ ಮತ್ತು ವಕೀಲ ದೇವರಾಜೇಗೌಡ ಪ್ರಜ್ವಲ್‌ ರೇವಣ್ಣ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಅವನ ಹಗರಣಗಳ ಬಗ್ಗೆ, ಅಶ್ಲೀಲ ವಿಡಿಯೋ ಬಗ್ಗೆ ಗಮನ ಸೆಳೆದಿದ್ದು. ನಾನೂ ಅದೊಂದು ರಾಜಕೀಯ ಆರೋಪ ಅಂತ ಸುಮ್ಮನಾಗಿದ್ದೆ. ಆದರೆ ಚುನಾವಣೆಗೂ ನಾಲ್ಕು ದಿನ ಮುನ್ನ ನನ್ನ ಮೊಬೈಲ್‌ಗೆ ಪ್ರಜ್ವಲ್‌ನ ಕೆಲವು ವಿಡಿಯೋ ತುಣುಕುಗಳು ಬಂದವು. ನಾನು ನಿತ್ಯ ನೋಡುವ ಮಹಿಳೆಯರು ಅದರಲ್ಲಿ ಇದ್ದರು. ಆ ಬಗ್ಗೆ ಕೂಡಲೇ ಜಿಲ್ಲಾಧಿಕಾರಿ, ಎಸ್‌ಪಿ ಅವರಿಗೆ ಫೋನ್‌ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಕೋರಿದೆ. ಮಹಿಳಾ ಎಸ್‌ಪಿ ಅವರ ಹತ್ತಿರ ಫೋನ್‌ನಲ್ಲಿ ಜಗಳ ಕೂಡ ಆಡಿದೆ. ಯಾರು ಆವಾಗ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನ್ನ ಒಳ ಮನಸ್ಸು ಹೇಳುತ್ತಿತ್ತು. ಅವನು ವಿದೇಶಕ್ಕೆ ಪರಾರಿ ಆಗಬಹುದು ಎಂದು. ಅದು ಹಾಗೆಯೇ ಆಗಿತ್ತು” ಎಂದು ಹೇಳಿದ್ದಾರೆ.

“ಪ್ರಜ್ವಲ್‌ ಪ್ರಕರಣದಲ್ಲಿ ಹಾಸನ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನನಗೆ ಆ ನಂತರ ರಾಜಕೀಯ ಆಟಕ್ಕೆ ಪೊಲೀಸರ ಬಳಕೆ ಆಗುತ್ತಿದೆ ಅಂತ ಅನ್ನಿಸಿದೆ. ಜಿಲ್ಲಾಧಿಕಾರಿಗಳಿಗೆ ಫೋನ್‌ ಮಾಡಿ ಕೂಡ ಹೇಳಿದೆ. ಮಹಿಳಾ ಆಧಿಕಾರಿಗಳೇ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾರ್ತಿಕ್‌ ಪ್ರಕರಣವನ್ನು ಸರಿಯಾಗಿ ಪರಿಗಣಿಸಿದ್ದರೆ ಅವತ್ತೆ ಪೆನ್‌ ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿತ್ತು” ಎಂದು ಪ್ರಕರಣದ ನಿಧಾನಗತಿ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕಟ್ಟಡ ಅದು. ದೇವೇಗೌಡರು ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ರೇವಣ್ಣ ಅವರು ದೇವೇಗೌಡರಿಗೆ ಕಟ್ಟಿಸಿಕೊಟ್ಟ ವಸತಿಗೃಹ ಅದು. ಇದೇ ವಸತಿಗೃಹಕ್ಕೆ ಪ್ರಜ್ವಲ್ ಹೆಣ್ಣು ಮಕ್ಕಳನ್ನು ಕರೆಯಿಸಿಕೊಳ್ಳುತ್ತಿದ್ದರು ಎಂಬುದು ಕೇಳಿ ನಿಜಕ್ಕೂ ಶಾಕ್‌ ಆದೆ.‌ ಎಷ್ಟು ದುಷ್ಟರು ಇವರು ಎಂಬುದು ಮತ್ತೆ ಮತ್ತೆ ಅರ್ಥವಾಗುತ್ತಿದೆ. ಹೀಗಾಗಿಯೇ ಹೇಳುವುದು ವಂಶಾಡಳಿತ ಪ್ರಜಾಪ್ರಭುತ್ವದ ಶತ್ರು ಅಂತಮ ಯಾವುದೇ ಅಂತಃಕರಣ ನ್ಯಾಯಾಧೀಶರು ಪ್ರಜ್ವಲ್‌ ವಿಡಿಯೋಗಳನ್ನು ನೋಡಿದ್ರೆ ಅವನಿಗೆ ಜೀವಾವಧಿ ಶಿಕ್ಷೆ ಕೊಡುತ್ತಾರೆ” ಎಂದು ಹೇಳಿದ್ದಾರೆ.

“ಈ ಹಿಂದೆ ಚುನಾವಣೆಯಲ್ಲಿ ಅಷ್ಟು ಸಕ್ರಿಯವಾಗಿ ನಾನು ಭಾಗಿಯಾಗಿರಲಿಲ್ಲ. ಪ್ರಜ್ವಲ್‌ ಪ್ರಕರಣ ಕೇಳಿದ ಮೇಲಂತೂ ದೇವೇಗೌಡರ ಕುಟುಂಬ ಉಪಟಳ ಹಾಸನದಲ್ಲಿ ಯಾಕೋ ಜಾಸ್ತಿ ಆಯ್ತು ಅನ್ನಿಸಿದೆ. ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್‌ ಸಂಪೂರ್ಣ ಹಿಡಿತದಲ್ಲಿ ನಲುಗಿದೆ. ಇವರ ವಿರುದ್ಧ ನನ್ನ ಹೋರಾಟ ಇರಲಿದೆ. ಹಾಸನಕ್ಕೆ ಬರುವ ಪ್ರಾಮಾಣಿಕ ಅಧಿಕಾರಿಗಳನ್ನು ಹೆದರಿಸುತ್ತ ಬಂದಿದ್ದಾರೆ. ಡಿ ಸಿ ಪ್ರಿಯಾಂಕ್‌ ಮೇರಿ  ಅವರನ್ನು ಗೋಲಿಬಾರ್‌ ಆಗುತ್ತೆ ಅಂತ ಹೆದರಿಸಿದ್ದರು. ಸತ್ಯಭಾಮ ಅವರನ್ನೂ ಹೀಗೇ ಹೆದರಿಸಿದ್ದಾರೆ. ಮಾನಸಿಕವಾಗಿ ಇಲ್ಲಿಯ ಅಧಿಕಾರಿಗಳು ಕುಗ್ಗಿ ಹೋಗಿದ್ದಾರೆ” ಎಂದು ವಿಶ್ಲೇಷಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಗ್ಯ ಇಲಾಖೆ | 8 ವರ್ಷಗಳ ಬಳಿಕ ಕೌನ್ಸಲಿಂಗ್ ಮೂಲಕ ವರ್ಗಾವಣೆ ಜಾರಿಗೊಳಿಸಿದ ಸಚಿವ ಗುಂಡೂರಾವ್

ವರ್ಗಾವಣೆ ಕೌನ್ಸಲಿಂಗ್ ಸುತ್ತೋಲೆ ಪ್ರಕಟ ಜುಲೈ ತಿಂಗಳ ಅಂತ್ಯದೊಳಗೆ ಕೌನ್ಸಲಿಂಗ್...

ಇಂಧನ ದರ ಇಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ; ಖಾಸಗಿ ಸಾರಿಗೆ ಸಂಘಟನೆಗಳ ಎಚ್ಚರಿಕೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ...

ಬೆಂಗಳೂರು | 15 ದಿನದ ಮಗುವಿಗೆ ‘ಹಾರ್ಟ್ ಆಪರೇಷನ್’ ಮಾಡಿ ಯಶಸ್ವಿಯಾದ ಸರ್ಕಾರಿ ಆಸ್ಪತ್ರೆ ವೈದ್ಯರು

ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 15 ದಿನದ...

ಮೋಹನ್ ಚರಣ್ ಮಾಝಿ: ಹಿಂದುತ್ವಧಾರಿ ಬುಡಕಟ್ಟು ಮುಖ್ಯಮಂತ್ರಿ

ಕೆಲವರು, ಅದರಲ್ಲೂ ರಾಜಕೀಯದಲ್ಲಿರುವವರು ಮಗುವಿನಂತೆ ಮುಗ್ಧಮುಖದೊಂದಿಗೆ ನಿಗರ್ವಿ ಅಥವಾ ವಿನಮ್ರವಾಗಿ ನೋಡುವುದು,...