ಹಾಸನ | ಸರ್ಕಾರ ಛಾಯಗ್ರಾಹಕರ ಕುಟುಂಬಗಳಿಗೆ ‘ಆಸರೆ ಯೋಜನೆ’ 

Date:

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ರಾಜ್ಯ ಸರ್ಕಾರ ಛಾಯಗ್ರಾಹಕರ ಕುಟುಂಬಗಳಿಗೆ ಅನುಕೂಲ ವಾಗಲೆಂದು ತಂದಿರುವ ಈ ಆಸರೆ ಯೋಜನೆಯನ್ನು ಎಲ್ಲಾ ಛಾಯಾಗ್ರಹಕರಿಗೂ ತಲುಪುವ ಯೋಜನೆ ಆಗಿದೆ ಎಂದು ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಸ್ವಾಮಿ ತಿಳಿಸಿದರು.

- Advertisement -

ಪಟ್ಟಣದ ಅರಕಲಗೂಡು ರಸ್ತೆ ಪ್ರವಾಸಿ ಮಂದಿರದಲ್ಲಿ ತಾಲೂಕು ಛಾಯಾ ಗ್ರಾಹಕ ಸಂಘ ಏರ್ಪಿಡಿಸಿದ್ದ ಆಸರೆ ಮತ್ತು ಯೋಜನೆಯ ಬಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಜಿಲ್ಲಾ ಛಾಯಾಗ್ರಾಹಕ ಸಂಘದ ಆಸರೆ ಕಮಿಟಿ ಅಧ್ಯಕ್ಷ ಲೋಕೇಶ್ ಮಾತನಾಡಿ ‘ರಾಜ್ಯದಲ್ಲಿರುವ ಛಾಯಾಗ್ರಾಹಕರುಗಳ ಕುಟುಂಬಗಳಿಗೆ ಸಂಕಷ್ಟದ ಸಮಯದಲ್ಲಿ ಈ ಯೋಜನೆ ನೆರವಾಗಲಿದೆ’ ಎಂದರು. ತಾಲೂಕು ಛಾಯಾಗ್ರಾಹಕರ ಸಂಘ ಆಯೋಜಿಸಲಾಗಿದ್ದ ಈ ಸಭೆಯಲ್ಲಿ ತಾಲ್ಲೂಕಿನ ಛಾಯಾಗ್ರಾಹಕರು ಭಾಗವಹಿಸಿ, ಯೋಜನೆಯ ರೂಪುರೇಷೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ರಾಜ್ಯದ ಯಾವುದೇ ಛಾಯಾಗ್ರಾಹಕರು ಅಕಾಲಿಕ ಮರಣಕ್ಕೆ ಈಡಾದಲ್ಲಿ, ಅವರ ಕುಟುಂಬಕ್ಕೆ ಆಸರೆಯಾಗಲು ರಾಜ್ಯದ ಪ್ರತಿಯೊಬ್ಬ ಛಾಯಾಗ್ರಾಹಕರು ಕೇವಲ 10 ರೂ.ಗಳನ್ನು ಮೃತರ ಖಾತೆಗೆ ಜಮಾ ಮಾಡಲಿದ್ದಾರೆ. ಈ ಮೂಲಕ ತಕ್ಷಣವೇ 1 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಸಂಗ್ರಹಿಸಿ ನೊಂದ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಪರಿಹಾರದ ಮೊತ್ತವನ್ನು 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸುವ ಉದ್ದೇಶವನ್ನು ಸಂಘ ಹೊಂದಿದೆ ಎಂದು ಅವರು ವಿವರಿಸಿದರು.

ತಾವು ತಾಲೂಕಿನ ವೃತ್ತಿ ಬಾಂಧವರು ಎಂಬುದಾಗಿ ಸಂಘದಿಂದ ದೃಢೀಕೃತ ಪತ್ರ ಅಥವಾ ಗುರುತಿನ ಚೀಟಿಯನ್ನು ಪಡೆದಿರಬೇಕು. ಈ ಅರ್ಹತೆಗಳನ್ನು ಹೊಂದಿರುವ ಛಾಯಾಗ್ರಾಹಕರಿಗೆ ಮಾತ್ರ ಈ ಯೋಜನೆಯ ಸೌಲಭ್ಯ ಸಿಗಲಿದೆ. ಆದ್ದರಿಂದ ಛಾಯಾಗ್ರಾಹಕರುಗಳು ತಪ್ಪದೆ ಸಂಘದಲ್ಲಿ ತಮ್ಮನ್ನು ನೊಂದಣಿ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಇದನ್ನೂ ಓದಿದ್ದೀರಾ?ಹಾಸನ | ಜೂ.18ರಂದು ರಂಗ ಅಭಿನಯ ತರಬೇತಿ ಶಿಬಿರ

ಈ ಸಭೆಯಲ್ಲಿ ಆಲೂರು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಲೇಶ್, ಹಾಸನ ಜಿಲ್ಲಾ ಸಹಕಾರ್ಯದರ್ಶಿ ಧನ್ಯಕುಮಾರ್, ಹೊಳೆನರಸೀಪುರ ತಾಲೂಕು ಸಂಘದ ಅಧ್ಯಕ್ಷ ಸುರೇಶ್, ಹಿರಿಯ ಛಾಯಾಗ್ರಾಹಕರಾದ, ನರಸಿಂಹ ಎಚ್ ಕೆ, ವಿನಾಯಕ್, ಚಂದ್ರು, ಹ ಮೈ ರವಿ, ಪ್ರಕಾಶ್, ಅರವಿಂದ, ಸೂರಿ, ವೆಂಕಟೇಶ್, ಯೋಗೇಶ್ ಚಿರಂಜೀವಿ, ಅಭಿ, ಕೇಶವ ಪ್ರಮೋದ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಕೋಲಾ | ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಬೆದರಿಕೆ: 7 ಮಂದಿ ವಿರುದ್ಧ ದೂರು ದಾಖಲು

ಜೆಲ್ಲಿ ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಕ್ರೇಟಾ ಕಾರಿನಲ್ಲಿ ಬಂದ ಐವರು ಅಡ್ಡಗಟ್ಟಿ,...

ಮಂಡ್ಯ | ಸಕಾಲಕ್ಕೆ ಸರ್ಕಾರಿ ಬಸ್ ಕಲ್ಪಿಸುವಂತೆ ಗ್ರಾಮಸ್ಥರ ಆಗ್ರಹ

ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಬಸ್‌ಗಳು ನಿಗದಿತ ಸಮಯಕ್ಕೆ ಸಂಚರಿಸದೆ ಇರುವುದರಿಂದ ವಿದ್ಯಾರ್ಥಿಗಳು,...

ಕಲಬುರಗಿ SIR | ಬದುಕಿದ್ದರೂ ಮತದಾರರ ಪಟ್ಟಿಯಲ್ಲಿ ಅಸ್ತಿತ್ವವೇ ಇಲ್ಲ; ಅರ್ಹರ ಮತದಾನದ ಹಕ್ಕಿಗೆ ಕತ್ತರಿ!

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಲಭಿಸಿರುವ ಅತ್ಯಂತ ಮಹತ್ವದ ಹಕ್ಕು...

ಹಾವೇರಿ | ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮನೆ ಕಬ್ಬು ಬೆಳೆಗಾರರು ಮುತ್ತಿಗೆ

ಕಬ್ಬು ಬೆಳೆಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಳೆದ...