ಗದಗ | ಕಲೆಯ ಮೂಲ ಸತ್ವ ಉಳಿಸಿ ಬೆಳೆಸುವುದು ಕಲಾವಿದರ ಜವಾಬ್ದಾರಿ: ಪ.ಸ.ಕುಮಾರ

Date:

“ಕಲಾವಿದರು ತಮ್ಮ ಸೃಜನಶೀಲತೆಯನ್ನು ಯಾವುದೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೊರೆ ಹೋಗದೆ, ಸ್ವಂತ ಪರಿಶ್ರಮ, ಅನುಭವ ಹಾಗೂ ಪ್ರತಿಭೆಯ ಮೂಲಕ ಅಭಿವ್ಯಕ್ತಿಗೊಳಿಸಬೇಕು. ಕಲೆಯ ಮೂಲ ಸತ್ವ ಮತ್ತು ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯವಾಗಿದೆ” ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.

- Advertisement -

ಗದಗ ನಗರದ ಸಂಸ್ಕೃತಿ ಕನ್ವೆನ್ಷನ್ ಬೈ ಟಿ.ಆರ್.ಐ. ವೆಂಚರ್ಸ್‌ನಲ್ಲಿ ಶುಕ್ರವಾರ ಅಕ್ಟೋಬರ್ (30) ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ 2026ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ, ಗೌರವ ಪ್ರಶಸ್ತಿ, ವರ್ಣಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ 53ನೇ ವಾರ್ಷಿಕ ಕಲಾ ಬಹುಮಾನ ಪ್ರದಾನ ಮತ್ತು ಕಲಾವಿದರ ಪರಿಚಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

“ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಕಲೆಯತ್ತ ಆಸಕ್ತಿ ತೋರುತ್ತಿರುವುದು ಸಂತೋಷದ ಸಂಗತಿ. ಆದರೆ, ಕೃತಕ ಬುದ್ಧಿಮತ್ತೆಯ ಪ್ರಭಾವದಿಂದ ಕಲೆಯ ಸ್ವಂತಿಕೆ ಮತ್ತು ಸೃಜನಶೀಲತೆಗೆ ಧಕ್ಕೆಯಾಗದಂತೆ ಕಲಾವಿದರು ಎಚ್ಚರಿಕೆ ವಹಿಸಬೇಕು” ಎಂದರು.

“ಯಾವುದೇ ಕಲಾಕೃತಿಯ ಹಿಂದೆ ಕಲಾವಿದನ ಬೆವರು, ಅನುಭವ, ಪರಿಶ್ರಮ ಹಾಗೂ ಭಾವನೆಗಳು ಅಡಗಿರುತ್ತವೆ. ಅಂತಹ ಸೃಜನಶೀಲ ಕಲಾಕೃತಿಗಳಿಗೆ ಸೂಕ್ತ ಮೌಲ್ಯ ದೊರೆಯಬೇಕು. ಸುಲಭದ ಮಾರ್ಗವೆಂದು ಕೃತಕ ತಂತ್ರಜ್ಞಾನದ ಮೇಲೆ ಅವಲಂಬಿತರಾಗಬಾರದು” ಎಂದು ಕಿವಿಮಾತು ಹೇಳಿದರು.

“ಚಿತ್ರಕಲೆ ಎನ್ನುವುದು ಕಣ್ಣಿನ ಭಾಷೆಯಾದರೆ, ಕವಿತೆ ಕಿವಿಯ ಭಾಷೆಯಾಗಿದೆ. ಕಾವ್ಯ ಮತ್ತು ಚಿತ್ರಕಲೆಗಳೆರಡೂ ಮಾನವನ ಹೃದಯದ ಭಾವನೆಗಳನ್ನು ಅಭಿವ್ಯಕ್ತಿಸುವ ಶಕ್ತಿಯನ್ನು ಹೊಂದಿವೆ. ರಾಜ್ಯದ ಮೂಲೆಮೂಲೆಗಳಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಅಕಾಡೆಮಿ ಸದಾ ಬದ್ಧವಾಗಿದೆ. ಹಿರಿಯ ಹಾಗೂ ಕಿರಿಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ರಾಜ್ಯದ ಕಲಾಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗುವುದು” ಎಂದರು.

“ದಿವ್ಯ ಸಾನಿಧ್ಯ ವಹಿಸಿದ್ದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, “ಸಾಹಿತ್ಯ, ಸಂಗೀತ ಮತ್ತು ಕಲೆಗಳು ಮನುಷ್ಯನಿಗೆ ಸಂಸ್ಕಾರ ನೀಡಿ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುತ್ತವೆ. ಸಾಹಿತ್ಯ, ಸಂಗೀತ ಹಾಗೂ ಕಲೆಗೆ ಹೆಸರುವಾಸಿಯಾದ ಗದಗ ನಗರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿರುವುದು ಸಂತೋಷದ ಸಂಗತಿಯಾಗಿದೆ” ಎಂದರು.

“ಇಂದಿನ ತಾಂತ್ರಿಕ ಯುಗದಲ್ಲಿ ಎಐ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದರೂ ಕಲಾವಿದರು ತಮ್ಮ ಸ್ವಂತ ಪರಿಶ್ರಮ ಮತ್ತು ಸೃಜನಶೀಲತೆಯನ್ನು ಮರೆಯಬಾರದು. ಕಲೆಯ ನೈಜ ಸತ್ವವನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಪ್ರಶಸ್ತಿ ಪಡೆದ ಹಿರಿಯ ಹಾಗೂ ಕಿರಿಯ ಕಲಾವಿದರು ಮುಂದಿನ ದಿನಗಳಲ್ಲಿಯೂ ತಮ್ಮ ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು” ಎಂದು ಆಶೀರ್ವದಿಸಿದರು.

ಸಾಹಿತಿ ಚಂದ್ರಶೇಖರ ವಸ್ತ್ರದ ಅವರು ಕಲಾವಿದರ ಪರಿಚಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, “ಸಾಹಿತ್ಯ ಮತ್ತು ಚಿತ್ರಕಲೆ ಅವಳಿ ಜವಳಿಗಳಿದ್ದಂತೆ. ಪದಗಳ ಲೋಕ ಮತ್ತು ಬಣ್ಣಗಳ ಆಕಾಶ ಒಂದಕ್ಕೊಂದು ಪೂರಕವಾಗಿವೆ. ಕವಿಗಳು ಹಾಗೂ ಚಿತ್ರಕಾರರ ನಡುವೆ ಅವಿನಾಭಾವ ಸಂಬಂಧವಿದೆ. ಪದಗಳು ಕಿವಿಯೊಳಗೆ ಭಾವನೆಗಳನ್ನು ಮೂಡಿಸಿದರೆ, ಬಣ್ಣಗಳು ಕಣ್ಣಿನ ಮೂಲಕ ಕಲ್ಪನೆಗಳಿಗೆ ಜೀವ ತುಂಬುತ್ತವೆ” ಎಂದು ಅಭಿಪ್ರಾಯಪಟ್ಟರು.

“ಕರ್ನಾಟಕದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಗದುಗಿನ ಶೈಲಿ ತನ್ನದೇ ಆದ ಮಹತ್ವ ಹೊಂದಿದೆ. ಈಗಾಗಲೇ ಗೌರವ ಪ್ರಶಸ್ತಿಗಳನ್ನು ಪಡೆದ ಹಿರಿಯ ಕಲಾವಿದರ ಸಾಧನೆ ಅಭಿನಂದನಾರ್ಹವಾಗಿದೆ. ಕಲಾವಿದರು ನಿರಂತರ ಸಾಧನೆ ಹಾಗೂ ಸೃಜನಶೀಲತೆಯ ಮೂಲಕ ಮುಂದಿನ ದಿನಗಳಲ್ಲಿಯೂ ಪ್ರಶಸ್ತಿಗಳಿಗೆ ಅರ್ಹರಾಗಬೇಕು” ಎಂದು ಕರೆ ನೀಡಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಚಂದ್ರಕಾಂತ ಸರೋದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಲಾವಿದರ ಪರಿಚಯ ಪುಸ್ತಕವನ್ನು ಸಾಹಿತಿ ಚಂದ್ರಶೇಖರ ವಸ್ತ್ರದ ಬಿಡುಗಡೆಗೊಳಿಸಿದರು. 2024-25 ಹಾಗೂ 2025-26ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ, 2023-24 ಹಾಗೂ 2024-25ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಮತ್ತು 53ನೇ ವಾರ್ಷಿಕ ಕಲಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಾಗಲಕೋಟೆಯ ಕವಿ ಲಕ್ಷ್ಮಣ ಅವರ ಮಾತಿಗಿಳಿದ ಚಿತ್ರ ಪುಸ್ತಕಕ್ಕೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೊಪ್ಪಳ ಜಿಲ್ಲೆಯ ಮೆಹಬೂಬ್ ಕಿಲ್ಲೇದಾರ್ ಹಾಗೂ ತಂಡದವರು ರಾಷ್ಟ್ರಗೀತೆ ಮತ್ತು ನಾಡಗೀತೆ ಪ್ರಸ್ತುತಪಡಿಸಿದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನಮ್ರತಾ ಸ್ವಾಗತಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಕಲಾವಿದ ವೆಂಕಟರಾಜು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕಲೆಗಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿರ್ದೇಶಕರು ಡಾ. ಕೆ.ಎಂ. ವಸುಂಧರಾ, ಗೌರವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಬಾಬು ಜತ್ಕರ, ಎಂ.ಜಿ. ದೊಡ್ಡಮನಿ, ಕೆ.ಸಿ.ಎಸ್. ಪ್ರಸನ್ನ, ಬಿ.ಎಸ್. ದೇಸಾಯಿ, ಡಾ. ಶಶಿಕಲಾ ಹೂಗಾರ್, ಚಿಕ್ಕಣ್ಣ.ಸಿ ಸೇರಿದಂತೆ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರು, 53ನೇ ವಾರ್ಷಿಕ ಕಲಾ ಸ್ಪರ್ಧೆಯ ಬಹುಮಾನಿತರು ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು ಅಭಿವೃದ್ಧಿ ವಿಚಾರಗಳ ಕುರಿತು ಯುವ ಸಂಸತ್‌ನಲ್ಲಿ ಚರ್ಚೆ

ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಹಿನ್ನಡೆ, ಮಾನವ-ವನ್ಯಜೀವಿ...

ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ಕೊಪ್ಪಳ-ಭಾಗ್ಯನಗರ ಬಂದ್‌ಗೆ ಉತ್ತಮ ಸ್ಪಂದನೆ

ತಾಲ್ಲೂಕು ವ್ಯಾಪ್ತಿಯಲ್ಲಿ ಪರಿಸರಕ್ಕೆ ಕಾರ್ಖಾನೆಗಳು ಮಾಲಿನ್ಯ ಉಂಟು ಮಾಡುತ್ತಿರುವ ನಡುವೆಯೇ ಮತ್ತಷ್ಟು...

ವಿಜಯಪುರ | ವಿವಿಧ ನಿಗಮಗಳ ಯೋಜನೆಗಳಡಿ ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ

ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಡಿ...

ವಿಜಯಪುರ | ರೈತರಿಗೆ ಪ್ರೋತ್ಸಾಹಧನ ನೀಡಿ, ಗ್ರಾಹಕರ ಮೇಲೆ ಹೊರೆ ಹಾಕಬೇಡಿ: ನಾಗರಾಜ ಲಂಬು

ನವೆಂಬರ್ 1ರಿಂದ ಹಾಲಿನ ಬೆಲೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಭಾರತೀಯ...