ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶೇಷ ಪುಷ್ಪಗಳಿಂದ ದೇವಾಲದ ಆವರಣ ಅದ್ಧೂರಿ ಅಲಂಕಾರಗೊಂಡಿದ್ದು, ಕಣ್ಮನ ಸೆಳೆಯುವಂತಿದೆ. ತಿರುಪತಿ ದೇವಾಲಯದ ಮಾದರಿಯಲ್ಲಿ ಪುಷ್ಪಾಲಂಕಾರ ಮಾಡಲಾಗಿದ್ದು, ಇಂದು ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ದರ್ಶನೋತ್ಸವಕ್ಕೆ ಚಾಲನೆ ಸಿಗಲಿದೆ.
ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗಿದೆ. ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ನಾಳೆ ಬೆಳಗ್ಗೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ದೇವಾಲಯದ ಸುತ್ತ ಬ್ಯಾರಿಕೇಡಿಂಗ್, ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಸಂತೆಪೇಟೆ ಸರ್ಕಲ್ನಿಂದ ಸಾರ್ವಜನಿಕ ದರ್ಶನಕ್ಕೆ ಪ್ರವೇಶ ಕಲ್ಪಿಸಲಾಗಿದೆ.
ಟಿಕೆಟ್ ದರ: ಧರ್ಮ ದರ್ಶನ (ಉಚಿತ): ಸಾರ್ವಜನಿಕರಿಗೆ ಯಾವುದೇ ಶುಲ್ಕ ಇರುವುದಿಲ್ಲವಿಶೇಷ ದರ್ಶನ ಟಿಕೆಟ್: ತಲಾ ರೂ. 300.ವಿಐಪಿ (VIP) ದರ್ಶನ ಟಿಕೆಟ್: ತಲಾ ರೂ. 1000. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು: 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಸರಳ ಮತ್ತು ಉಚಿತ ವಿಶೇಷ ದರ್ಶನದ ವ್ಯವಸ್ಥೆ ಇರಲಿದೆ ಎಂದು ತಿಳಿಸಲಾಗಿದೆ.
ಹಾಸನಾಂಬ ದರ್ಶನದ ಪಾಸ್ ವಿವರ: ದೇವಾಲಯದ ಹಿಂಭಾಗದಿಂದ 300ರೂ ಟಿಕೆಟ್ ಮೂಲಕ ಪ್ರವೇಶ ಪಡೆಯಬಹುದಾಗಿದೆ. ತೋಟಗಾರಿಕೆ ಇಲಾಖೆಯಿಂದ 1000ರೂ ಟಿಕೆಟ್ಗಳಿಗೆ ಪ್ರವೇಶವಿದೆ. ಗೋಲ್ಡ್ ಪಾಸ್ ಗಳಿಗೆ ಬಿ.ಎಂ ರಸ್ತೆಯಿಂದ ಪ್ರವೇಶ ನೀಡಲಾಗಿದ್ದು. ಬೆಳಗ್ಗೆ 8 ಗಂಟೆಯಿಂದ 10ಗಂಟೆ ವರೆಗೆ ಪಾಸ್ ಗಳ ಮೂಲಕ ಬರುವವರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
24 ಗಂಟೆಯೂ ದರ್ಶನಕ್ಕೆ ವ್ಯವಸ್ಥೆ: 10.30 ರಿಂದ 12.30ರ ವರೆಗೆ ಶಿಷ್ಟಾಚಾರದಲ್ಲಿ ಬರುವವರಿಗೆ ದರ್ಶನ ನೀಡಲಾಗುತ್ತಿದೆ. ಪ್ರವಾಸಿ ಮಂದಿರದಲ್ಲಿ ನೋಂದಾಯಿಸಿಕೊಂಡು ಗಣ್ಯರು ದರ್ಶನಕ್ಕೆ ಬರಬೇಕಿದೆ.ಈ ಬಾರಿ 24×7 ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಅವಕಾಶ ಮಾಡಲಾಗಿದೆ.
ಸಾವಿರಾರು ಪೊಲೀಸರ ನಿಯೋಜನೆ: ಲಕ್ಷಾಂತರ ಭಕ್ತರ ದೇವಿ ದರ್ಶನಕ್ಕೆ ಬರುವ ಸಾಧ್ಯತೆ ಇದ್ದು, ಭದ್ರತೆಗಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯದ ಐದು ಜಿಲ್ಲೆಗಳಿಂದ ಪೊಲೀಸರ ನಿಯೋಜನೆ ಮಾಡಿದ್ದು, ಐಜಿಪಿ ಡಾ. ಬೋರಲಿಂಗಯ್ಯ, ಹಾಸನ ಎಸ್ಪಿ ಶುಭಾನ್ವಿತಾ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಐದು ಜಿಲ್ಲೆಗಳ ಎಸ್ಪಿಗಳು ಶಿಫ್ಟ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೂ ವಿಶೇಷ ಪಡೆ ನಿಯೋಜನೆ ಮಾಡಲಾಗಿದೆ. ನಾಳೆ ಬೆಳಗ್ಗೆ 6ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ.
ಇದನ್ನೂ ಓದಿದ್ದೀರಾ?ಹಾಸನ | ಕೆನರಾ ಬ್ಯಾಂಕ್ ಶಾಖೆ: ₹2.5 ಕೋಟಿ ಹಣಕಾಸಿನ ವಂಚನೆ ಆರೋಪ
ದಸರಾ ಮಾದರಿಯಲ್ಲಿ ಉತ್ಸವ ಆಚರಿಸಲು ಸಿದ್ಧತೆ: ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದರ್ಶನೋತ್ಸವ ವೇಳೆ ಕ್ರೀಡೋತ್ಸವಕ್ಕೂ ಒತ್ತು ನೀಡಿದ್ದು,ಯುವಜನ, ಗ್ರಾಮೀಣ ಕ್ರೀಡೆಗಳ ಆಯೋಜನೆ ಮಾಡಲಾಗಿದೆ. ವಾಲಿಬಾಲ್, ಕಬಡ್ಡಿ, ಕುಸ್ತಿ ಕಾಳಗ, ರಂಗೋಲಿ ಸ್ಪರ್ಧೆ, ಎತ್ತಿನಗಾಡಿ ಓಟ ನಡೆಯಲಿದ್ದು, ನವೆಂಬರ್ 1ರಂದು ಕ್ರೀಡಾಕೂಟಕ್ಕೆ ಚಾಲನೆ ನಡೆಸಲಾಗುತ್ತದೆ.





