₹300 ಮತ್ತು ₹1,000 ವಿಶೇಷ ದರ್ಶನ ಟಿಕೆಟ್ಭ ಕ್ತರಿಗೆ ತ್ವರಿತ ಹಾಗೂ ಸುಗಮ ದರ್ಶನ ಕಲ್ಪಿಸುವ ಉದ್ದೇಶದಿಂದ ₹300 ಮತ್ತು ₹1,000 ದರದ ವಿಶೇಷ ದರ್ಶನ ಟಿಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡಬಹುದಾಗಿದೆ.
ಅಲ್ಲದೆ, ಲಾಡು ಪ್ರಸಾದದ ಟಿಕೆಟ್, ಇ-ಹುಂಡಿ ಮೂಲಕ ಕಾಣಿಕೆ ಸಲ್ಲಿಸುವುದು ಹಾಗೂ ದೇವಾಲಯಕ್ಕೆ ಸಂಬಂಧಿಸಿದ ಇತರ ಸೇವೆಗಳಿಗಾಗಿ ಆನ್‌ಲೈನ್ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಆನ್‌ಲೈನ್ ಬುಕ್ಕಿಂಗ್ ಗಾಗಿ ದೇವಾಲಯದ ಅಧಿಕೃತ ವೆಬ್‌ಸೈಟ್ https://srihasanaambatemple.com ,ವಾಟ್ಸ್‌ಆಯಪ್ ಸಂಖ್ಯೆ 73539 39611 ಮೂಲಕವೂ ಬುಕ್ಕಿಂಗ್ ಸೌಲಭ್ಯ ಕಲ್ಪಿಸಿದೆ. ಗೋಲ್ಡ್ ಕಾರ್ಡ್ ಮತ್ತು ಪ್ರೋಟೋಕಾಲ್ ದರ್ಶನದ ಸಮಯ ದರ್ಶನೋತ್ಸವದ ಸಂದರ್ಭದಲ್ಲಿ ವಿಶೇಷ ವರ್ಗದ ಭಕ್ತರಿಗಾಗಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗಿದೆ.
ಇದನ್ನು ಓದಿದ್ದೀರಾ?ಹಾಸನ | ಅಕ್ಟೋಬರ್ 29ರಿಂದ ನವೆಂಬರ್ 8ರವರೆಗೆ ಹಾಸನಾಂಬ ಉತ್ಸವ
ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ: ಗೋಲ್ಡ್ ಕಾರ್ಡ್ ದರ್ಶನ.– ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ: ಪ್ರೋಟೋಕಾಲ್ ದರ್ಶನ. ಈ ಸಮಯಗಳಲ್ಲಿ ದರ್ಶನ ಪಡೆಯಲು ಉದ್ದೇಶಿಸಿರುವವರು ಸಂಬಂಧಿತ ನಿಯಮಗಳು ಮತ್ತು ಪ್ರವೇಶದ ಷರತ್ತುಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಸೂಕ್ತ. ಸಾಮಾನ್ಯ ಭಕ್ತರು ಅನಗತ್ಯ ಕಾಯುವಿಕೆಯನ್ನು ತಪ್ಪಿಸಲು ತಮ್ಮ ದರ್ಶನದ ಯೋಜನೆಯನ್ನು ಮುಂಚಿತವಾಗಿ ರೂಪಿಸಿಕೊಳ್ಳಬಹುದು.




