ಜಿಲ್ಲಾಧಿಕಾರಿ ಲತಾ ಕುಮಾರಿ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತೊಮ್ಮೆ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್. ಡಿ ರೇವಣ್ಣ, ‘ಒಬ್ಬ ಜಿಲ್ಲಾಧಿಕಾರಿಯಾದವರು ಪಕ್ಷಾತೀತವಾಗಿ ಎಲ್ಲಾ ಎಂಎಲ್ಎಗಳಿಗೆ ಫೋನ್ ಮಾಡಬೇಕು ಹಾಗೂ ಮೊದಲು ಶಾಸಕರಿಗೆ ಗೌರವ ಕೊಡುವುದನ್ನು ಕಲಿಯಬೇಕು’ ಎಂದಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಕೆನರಾ ಬ್ಯಾಂಕ್ ಶಾಖೆ: ₹2.5 ಕೋಟಿ ಹಣಕಾಸಿನ ವಂಚನೆ ಆರೋಪ
ಒಂದು ಆಸ್ಪತ್ರೆಯ ವಿಷಯದಲ್ಲಾದರೂ ಜಿಲ್ಲಾಧಿಕಾರಿಗಳು ಶಾಸಕರಿಗೆ, ಎಂಎಲ್ಸಿಗಳಿಗೆ ಕರೆ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ. ಅವರು ಯಾರೊಬ್ಬರಿಗೂ ಫೋನ್ ಮಾಡುವುದಿಲ್ಲ, ಗುಮಾಸ್ತರಿಂದ ಫೋನ್ ಮಾಡಿಸುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಶಾಸಕರಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ಹೆಚ್. ಡಿ ರೇವಣ್ಣ ತಿಳಿಸಿದರು.




