ಹಾವೇರಿ | ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಕರವೇ ಪ್ರವೀಣ ಶೆಟ್ಟಿ ಬಣ ಒತ್ತಾಯ

Date:

ಡಾ. ಸರೋಜಿನಿ ಮಹಿಷಿ ಅವರ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ವತಿಯಿಂದ ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದ ಎದುರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

- Advertisement -

ಮನವಿ ಸಲ್ಲಿಸಿದ ನಂತರ ಕರವೆ ಪ್ರವೀಣ ಶೆಟ್ಟಿ ಬಣ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಓಲೇಕಾರ ಮಾತನಾಡಿ, “1983 ರಲ್ಲಿ ಅಂದಿನ ಮುಖ್ಯಮಂತ್ರಿ ದಿ: ರಾಮಕೃಷ್ಣ ಹೆಗಡೆಯವರು ಕನ್ನಡಿಗರಿಗೆ ರಾಜ್ಯದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿರುವುದನ್ನು ಅರಿತಿದ್ದರು. ರಾಜ್ಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗ ಅವಕಾಶಗಳನ್ನು ಕನ್ನಡಿಗರಿಗೆ ದೊರಕುವಂತೆ ಪರಿಶೀಲಿಸಿ ವರದಿ ನೀಡುವಂತೆ ಕೇಂದ್ರದಲ್ಲಿ ಸಚಿವರಾಗಿದ್ದ ಡಾ| ಸರೋಜಿನಿ ಮಹಿಷಿಯವರಿಗೆ ಒಪ್ಪಿಸಿದ್ದರು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಕನ್ನಡಿಗರಿಗೆ ನ್ಯಾಯವಾಗಿ ಉದ್ಯೋಗ ಅವಕಾಶ ದೊರಕಬೇಕೆಂದು ಡಾ. ಸರೋಜಿನಿ‌ ಮಹಿಷಿ ವರದಿ ನೀಡಿದ್ದರು. ಆದರೆ ಈಗಿನ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ವರದಿಯನ್ನು ಇಂದಿಗೂ ಜಾರಿಗೊಳಿಸಲು ನಿರ್ಲಕ್ಷ ತೊರಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನಂತರ ಬಂದ ಎಲ್ಲ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಹುಸಿ ಭರವಸೆ ನೀಡುವುದರ ಮೂಲಕ ಅನ್ಯಾಯ ಎಸಗುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಕನ್ನಡ ಪರ ಹೇಳಿಕೆಯನ್ನು ನೀಡಿದ್ದಾರೆಯೇ ವಿನಃ ಕನ್ನಡಿಗರಿಗೆ ನ್ಯಾಯುತವಾಗಿ ಸಿಗಬೇಕಾದ ಉದ್ಯೋಗ ಕೊಡಿಸುವಲ್ಲಿ ಇಂದಿನ ಸರಕಾರ ವಿಫಲವಾಗಿವೆ” ಎಂದು ಹೇಳಿದರು.

“ಕೂಡಲೇ ತಾವು ಆಂದ್ರಸರ್ಕಾರದ ಮಾದರಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಅರೇ ಸರ್ಕಾರಿ/ಐಟಿಬಿಟಿ ಕಂಪನಿಗಳಲ್ಲಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ನಂತರ ಕರೆವೇ ಜಿಲ್ಲಾ ಮಹಿಳಾ ಮುಖಂಡರು ಅನುಸೂಯಾ ಸಿದ್ದಪ್ಪನವರ ಮಾತನಾಡಿ, “ಸ್ಥಳೀಯವಾಗಿ ಶೇ80 ಮೀಸಲಾತಿ ಕಲ್ಪಿಸಿ ಕನ್ನಡಿಗರಿಗೆ ಸ್ಥಳೀಯ ಕಂಪನಿಗಳಲ್ಲಿ ಉನ್ನತ ಹುದ್ದೆ ಕಲ್ಪಿಸಿಕೊಟ್ಟು ರಾಜ್ಯದಿಂದ ಹೊರ ರಾಜ್ಯಗಳಿಗೆ ಗುಳೇ ಹೋಗುವುದನ್ನು ತಪ್ಪಿಸಲು ಡಾ. ಸರೋಜಿನಿ ಮಹೇಷಿಯವರ ವರದಿ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯದ್ಯಂತರ ಬೃಹತ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಈ ಸುದ್ದಿ ಒದಿದ್ದೀರಾ? ಹಾವೇರಿ | ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಈ ಸಂದರ್ಬದಲ್ಲಿ ಜಿಲ್ಲಾ ಮುಖಂಡರುಗಳಾದ, ಪುಟ್ಟಪ್ಪ ಹಿತ್ತಲಮನಿ, ಮಾರುತಿ ಹಾಲಗಿ, ವಿಜಯಕುಮಾರ ಎನ್..ಎಂ ಕುಮಾರ ಸುಳ್ಳನವರ, ರಿಯಾಜಅಹ್ಮದ ಲೋಹಾರ, ಮಾಲತೇಶ ಜಿ.ಕೆ, ಸುಧಾ ಪಾಟೀಲ, ರಮೇಶ ದಾಸಪ್ಪನವರ, ಗಾಳೆಪ್ಪ ಕುರುಬರ ಸದಾನಂದ ಪುಟ್ಟಪ್ಪನವರ ಸುರೇಶ ಲಚಮಣ್ಣನವರ, ಗೌರಮ್ಮ ಬೆಲ್ಲದ, ಫಕ್ಕೀರೇಶ ಕಟ್ಟಿಮನಿ, ಗುರುನಾಥ ರೆಡ್ಡಿ, ಮಂಜಪ್ಪ ಬುಳ್ಳಪ್ಪನವರ, ವಿರೇಶ ಹಲಗೇರಿ, ಹನುಮಂತ ತಂಬೂರಿಮ ನಾಗರತ್ನಾ ಪೂಜಾರ, ರೇಣುಕಾ ಮಾನೇಗಾರ, ಶಾರದಾ ಮೇಗಳಮನಿ, ಸೌಬಾಗ್ಯ ಭರಮಗಡ ನಾಗರಾಜ ಮಳಿಯಪ್ಪನವರ, ಲಕ್ಷ್ಮೀ ಗಂಗಮ್ಮನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....

ಯಾದಗಿರಿ | ₹2,500 ಬೆಳೆನಷ್ಟ ಪರಿಹಾರ ರೈತರ ನೋವಿಗೆ ಅವಮಾನ: ಭೀಮರಾಯ ಎಲ್ಹೇರಿ

ರಾಜ್ಯ ಸರ್ಕಾರ ರೈತರ ಬೆಳೆನಷ್ಟಕ್ಕೆ ಕೇವಲ ₹2,500 ಪರಿಹಾರ ಘೋಷಿಸಿರುವುದು ರೈತರ...

ಕಲಬುರಗಿ | ವರದಕ್ಷಿಣೆ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು!

ವರದಕ್ಷಿಣೆ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ...

ಕೊಡಗಿನಲ್ಲಿ ‘SIR’ ಪಬ್ಲಿಕ್ ಹಿಯರಿಂಗ್: ‘ಮತದಾನದ ಹಕ್ಕು ಕಸಿಯುವುದು ಅಷ್ಟು ಸುಲಭವಲ್ಲ’ -ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳು,...